ಪುತ್ತೂರು: ಮೆಸ್ಕಾಂ ಲೈನ್ ನ ನಿರ್ವಹಣಾ ಕಾಮಗಾರಿಯ ಅಂಗವಾಗಿ ಫೆ.21ರಂದು ಪೂರ್ವಾಹ್ನ 10:00 ರಿಂದ ಸಂಜೆ 5:00 ರವರೆಗೆ ಕುಂಬ್ರ ವಿದ್ಯುತ್ ಉಪಕೇಂದ್ರದಿಂದ ಹೊರಡುವ ದೇರ್ಲ, ಮದ್ಲ, ತಿಂಗಳಾಡಿ, ಸುಳ್ಯಪದವು, ಇರ್ದೆ ಮತ್ತು ಪಾಣಾಜೆ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದ್ದು, ಸಂಬಂಧಪಟ್ಟ ಪ್ರದೇಶದ ವಿದ್ಯುತ್ ಬಳಕೆದಾರರು ಸಹಕರಿಸುವಂತೆ ಕೋರಲಾಗಿದೆ.