ಪುತ್ತೂರು: ಪಾಲ್ತಾಡು ನಡುಮನೆ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.24 ರಂದು ನಡೆಯಲಿದ್ದು, ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಮತ್ತು ಕೊಳ್ಳಿ ಮುಹೂರ್ತ ಫೆ.12 ರಂದು ನಡೆಯಿತು.
ಈ ಸಂದರ್ಭದಲ್ಲಿ ನಡುಮನೆ ಆಡಳಿತ ಮೊಕ್ತೇಸರ ಎನ್. ನವಿನಾಥ ರೈ ಪಾಲ್ತಾಡು, ಪಿ.ನಾರಾಯಣ ರೈ ಪಾಲ್ತಾಡು, ವಿಲಾಸ್ ರೈ ಪಾಲ್ತಾಡು, ನಳೀಲು ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು, ವಿನೋದ್ ರೈ ಪಾಲ್ತಾಡು ಮತ್ತಿತರರು ಉಪಸ್ಥಿತರಿದ್ದರು. ಮಾ.24 ರಂದು ಮಾಮೂಲು ಪದ್ಧತಿ ಪ್ರಕಾರ ವರ್ಷಂಪ್ರತಿ ನಡೆಯುವ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಮಾ.16 ರಂದು ಗೊನೆ ಮುಹೂರ್ತ ನಡೆಯಲಿದ್ದು, ಮಾ.25 ರಂದು ಅಗ್ನಿಪ್ರವೇಶ, ಪ್ರಸಾದ ವಿತರಣೆ ಮತ್ತು ಗುಳಿಗನ ಕೋಲ ನಡೆಯಲಿದೆ.