ಪುತ್ತೂರು: ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಸುಗಂಧ ಹರ್ಬಲ್ ಬ್ಯೂಟಿ ಪಾರ್ಲರ್ ಫೆ.21ರಂದು ಉದ್ಘಾಟನೆಗೊಂಡಿತು.
ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರುರವರು ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಬೆಳೆಯುತ್ತಿರುವ ಪುತ್ತೂರಿಗೆ ಉದ್ಯಮಗಳು ಬಂದಾಗ ಮುಂದೆ ಜಿಲ್ಲಾ ಕೇಂದ್ರವಾಗುವಲ್ಲಿ ಸಹಕಾರಿಯಾಗುತ್ತದೆ. ಮಹಿಳೆಯರ ಅಂದವನ್ನು ಹೆಚ್ಚಿಸಲು ಇಂತಹ ಬ್ಯೂಟಿ ಪಾರ್ಲರ್ ಗಳು ಅಗತ್ಯವಾಗಿ ಬೇಕಾಗಿವೆ. ಮನೆಯಲ್ಲಿ ನಡೆಯುವ ಶುಭ ಸಮಾರಂಭಗಳಾಗಲಿ ಅಥವಾ ಇತರ ಸಂದರ್ಭಗಳಲ್ಲಾಗಲಿ ಬ್ಯೂಟಿ ಪಾರ್ಲರ್ ಗಳು ಸೌಂದರ್ಯವನ್ನು ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದು, ಪ್ರಸ್ತುತ ಇಲ್ಲಿ ಉದ್ಘಾಟನೆಗೊಂಡ ಈ ಸಂಸ್ಥೆಗೆ ಹೆಚ್ಚಿನ ಗ್ರಾಹಕರು ಆಗಮಿಸಿ ಸಂಸ್ಥೆಯು ಉನ್ನತಿ ಪಡೆಯಲಿ ಎಂದರು.
ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ವಲೇರಿಯನ್ ಡಾಯಸ್ ಮಾತನಾಡಿ, ಎಲ್ಲಿ ನಗುಮುಖದ ಸೇವೆ ಇರುತ್ತದೆಯೋ ಅಲ್ಲಿ ಸಂಸ್ಥೆ ಉನ್ನತಿ ಪಡೆಯಲು ಸಾಧ್ಯ. ನಗುಮುಖದ ಸೇವೆಯೊಂದಿಗೆ ಗುಣಮಟ್ಟದ ಸೇವೆಯೂ ಗ್ರಾಹಕರಿಗೆ ಲಭ್ಯವಾಗಲಿ, ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದರು.

ಕಾಣಿಯೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ, ಅಂಕಲ್ ಸ್ವೀಟ್ಸ್ ನ ಕುಶಾಲಪ್ಪ ಗೌಡ, ಮೋಹನ್ ಗ್ರಾಫಿಕ್ಸ್ ನ ಮೋಹನ್ ಸಹಿತ ಹಲವರು ಆಗಮಿಸಿ ಶುಭ ಹಾರೈಸಿದರು. ಸುಗಂಧ ಹರ್ಬಲ್ ಬ್ಯೂಟಿ ಪಾರ್ಲರ್ ಮಾಲಕಿ ಚಿತ್ರರವರ ಪತಿ ಸುಗಂಧರವರು ಸ್ವಾಗತಿಸಿ, ವಂದಿಸಿದರು.
ನಮ್ಮಲ್ಲಿ ಫೇಶಿಯಲ್, ಮೆಹಂದಿ ಹಚ್ಚುವಿಕೆ, ವ್ಯಾಕ್ಸಿಂಗ್, ಪೆಡಿಕ್ಯೂರ್, ಬ್ಲೀಚಿಂಗ್, ಹೇರ್ ಪರ್ಮಿಂಗ್, ಬ್ರೈಡಲ್ ಮೇಕಪ್, ಹೇರ್ ಸ್ಮೂತ್, ಟೋಟಲ್ ಹೇರ್ ಸ್ಟೈಲ್, ಪರ್ಮನೆಂಟ್ ಹೇರ್ ಸ್ಟ್ರೇಟ್, ಹೇರ್ ಸ್ಪಾ ಇತ್ಯಾದಿಗಳನ್ನು ಮಾಡಿಕೊಡಲಾಗುವುದು. ಗ್ರಾಹಕರು ಆಗಮಿಸಿ ನಮ್ಮ ಸಂಸ್ಥೆಯನ್ನು ಆಶೀರ್ವದಿಸಿ ಯಶಸ್ವಿಗೊಳಿಸುವಲ್ಲಿ ಸಹಕರಿಸಬೇಕು.
-ಶ್ರೀಮತಿ ಚಿತ್ರ ಸುಗಂಧ, ಮಾಲಕಿ, ಸುಗಂಧ ಹರ್ಬಲ್ ಬ್ಯೂಟಿ ಪಾರ್ಲರ್
