ಕಾಣಿಯೂರು: ಮಕ್ಕಳನ್ನು ಹಲವು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅವರ ಕಲಿಕಾ ಆಸಕ್ತಿಯನ್ನು ಹೆಚ್ಚಿಸುವುದು ಕಲಿಕಾ ಹಬ್ಬದ ಮುಖ್ಯ ಉದ್ಧೇಶವಾಗಿದ್ದು, ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯ ಪ್ರವೀಣ್ ಚಂದ್ರ ರೈ ಕುಮೇರು ಹೇಳಿದರು. ಅವರು ಶಾಲಾ ಶಿಕ್ಷಣ ಇಲಾಖೆ ಸಮಗ್ರ ಶಿಕ್ಷಣ ಕರ್ನಾಟಕ, ಕಾಣಿಯೂರು ಸಮೂಹ ಸಂಪನ್ಮೂಲ ಕೇಂದ್ರ, ಸ.ಹಿ.ಪ್ರಾ.ಶಾಲೆ ಬೊಬ್ಬೆಕೇರಿ ಇದರ ಆಶ್ರಯದಲ್ಲಿ ಫೆ.20ರಂದು ಬೊಬ್ಬೆಕೇರಿ ಸ.ಹಿ.ಪ್ರಾ. ಶಾಲೆಯಲ್ಲಿ ನಡೆದ ಶೈಕ್ಷಣಿಕ ಬಲವರ್ಧನೆ ವರ್ಷ 2024-25 ಕಾಣಿಯೂರು ಕ್ಲಸ್ಟರ್ ಮಟ್ಟದ FLN ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬೊಬ್ಬೆಕೇರಿ ಸ.ಹಿ.ಪ್ರಾ.ಶಾಲಾ ಎಸ್ ಡಿಎಂಸಿ ಅಧ್ಯಕ್ಷೆ ಸುನೀತಾ ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ಕಾಣಿಯೂರು ಗ್ರಾ.ಪಂ. ಸದಸ್ಯರಾದ ಸುನಂದಾ ಅಬ್ಬಡ, ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಕೆ, ಬೊಬ್ಬೆಕೇರಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಪೈಕ, ಸವಣೂರು ಕ್ಲಸ್ಟರ್ ಸಿ ಆರ್ ಪಿ ಜಯಂತ್ ವೈ, ಸಂಪನ್ಮೂಲ ವ್ಯಕ್ತಿಗಳಾದ ಕುಮಾರಮಂಗಲ ಸ.ಹಿ.ಪ್ರಾ.ಶಾಲೆಯ ಶಿಕ್ಷಕ ಸಂತೋಷ್ ಎನ್.ಟಿ, ನಾಣಿಲ ಸ.ಹಿ.ಪ್ರಾ.ಶಾಲೆಯ ಶಿಕ್ಷಕ ಸುನಿಲ್, ಆರೆಲ್ತಡಿ ಸ.ಕಿ.ಪ್ರಾ.ಶಾಲೆಯ ಶಿಕ್ಷಕ ಶ್ರೀಕಾಂತ್, ಪಳ್ಳತ್ತಾರು ಸ. ಹಿ. ಪ್ರಾಶಾಲೆಯ ಶಿಕ್ಷಕ ರಂಗನಾಥ್, ಕುದ್ಮಾರು ಸ. ಉ .ಹಿ.ಪ್ರಾ ಶಾಲೆಯ ಶಿಕ್ಷಕಿ
ಸುಜಾತ, ಕಾಣಿಯೂರು ಸ.ಹಿ.ಪ್ರಾ.ಶಾಲೆಯ ಅತಿಥಿ ಶಿಕ್ಷಕಿ ದಿವ್ಯಾ.ಪಿ, ದೋಳ್ಪಾಡಿ ಸ.ಹಿ.ಪ್ರಾ.ಶಾಲೆಯ ಅತಿಥಿ ಶಿಕ್ಷಕಿ ಕಲಾವತಿ ಉಪಸ್ಥಿತರಿದ್ದರು. ಶಶಿಕಲಾ, ರಮೇಶ್ ಉಪ್ಪಡ್ಕ, ಸುಕುಮಾರ್ ಕಲ್ಪಡ, ರಕ್ಷಿತಾ ನಿಡ್ಡಾಜೆ, ಸೋಮನಾಥ ದರ್ಖಾಸು, ಸುಧಾಕರ್ ಕಾಣಿಯೂರು, ಶಶಿಕಲಾ, ಶೋಭಾ, ಸದಾನಂದ ಕಡಿರ, ಲತಾ ಅಬ್ಬಡ, ಮಹಾಲಕ್ಷ್ಮಿ, ಮಹೇಶ್ ಪೈಕ ಅತಿಥಿಗಳಿಗೆ ಶಾಲು, ಹೂ ನೀಡಿ, ಕಲಿಕಾ ಹಬ್ಬ ಪೇಟ ತೊಡಿಸಿ ಗೌರವಿಸಿದರು.

ಕಾಣಿಯೂರು ಕ್ಲಸ್ಟರ್ ಸಿಆರ್ಪಿ ಯಶೋದ ಪ್ರಾಸ್ತಾವಿಕವಾಗಿ ಮಾತನಾಡಿ,FLN ಮಕ್ಕಳು ಎಂದು ಮೂಲಭೂತ ಅಕ್ಷರ ಜ್ಞಾನ ಮತ್ತು ಸಂಖ್ಯಾಶಾಸ್ತ್ರ ಕೊರತೆ ಇರುವ ಮಕ್ಕಳು.ಆ ಮಕ್ಕಳಿಗಾಗಿಯೇ ಸರಕಾರ ಆಯೋಜಿಸಿರುವ ಕಲಿಕಾ ಹಬ್ಬ ಮಕ್ಕಳ ಶೈಕ್ಷಣಿಕ ಕೊರತೆಯನ್ನು ನೀಗಿಸಲು ಸಹಕಾರಿಯಾಗಿದೆ.ಕಾಣಿಯೂರು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದಲ್ಲಿ 8ಸರ್ಕಾರಿ ಶಾಲೆಗಳ 100ಮಕ್ಕಳು ಭಾಗವಹಿಸಿರುತ್ತಾರೆ.ಎಲ್ಲಾ ಮಕ್ಕಳಿಗೂ ಪ್ರಮಾಣಪತ್ರ ನೀಡಲಾಗುವುದು.7 ಕಾರ್ನರ್ ಗಳಲ್ಲಿ ಚಟುವಟಿಕೆಗಳು ಏಕಕಾಲದಲ್ಲಿ ನಡೆಯಲು 7 ಸಂಪನ್ಮೂಲ ವ್ಯಕ್ತಿಗಳು ಸಹಕರಿಸಿದ್ದಾರೆ ಎಂದರು.
ಶಾಲಾ ಮುಖ್ಯಗುರು ಶಶಿಕಲಾರವರು ಸ್ವಾಗತಿಸಿ, ಶಿಕ್ಷಕಿ ಗೀತಾ ಕುಮಾರಿ ವಂದಿಸಿದರು. ಶಿಕ್ಷಕ ಜನಾರ್ದನ ಹೇಮಳ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಶೋಭಿತಾ, ಸುರೇಖಾ, ಶೃತಿ, ದಿವ್ಯಾ, ಸುಶ್ಮಿತಾ, ಜಯಲತಾ ಸಹಕರಿಸಿದರು.

ಸಮಾರೋಪ ಸಮಾರಂಭ: ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬೊಬ್ಬೆಕೇರಿ ಶಾಲಾ ಎಸ್ ಡಿಎಂಸಿ ಅಧ್ಯಕ್ಷೆ ಸುನೀತಾ ಗಣೇಶ್ ವಹಿಸಿದ್ದರು. ಎಸ್ ಡಿ ಎಂ ಸಿ ಉಪಾಧ್ಯಕ್ಷ ರಮೇಶ್ ಉಪ್ಪಡ್ಕ, ಶಾಲಾ ಮುಖ್ಯಗುರು ಶಶಿಕಲಾ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಪೈಕ, ಎಸ್ ಡಿಎಂಸಿ ಸದಸ್ಯರಾದ ಸೋಮನಾಥ ದರ್ಖಾಸು, ಸುಧಾಕರ್ ಕಾಣಿಯೂರು, ಸದಾನಂದ ಕಡಿರ, ಶೋಭಾ, ಭವ್ಯ, ದೀಪಿಕಾ, ರಕ್ಷಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಣಿಯೂರು ಕ್ಲಸ್ಟರ್ ಸಿ ಆರ್ ಪಿ ಯಶೋದ ಅವರು ಬಹುಮಾನ ವಿಜೇತರ ವಿವರ ವಾಚಿಸಿದರು. ಶಿಕ್ಷಕ ಜನಾರ್ದನ ಹೇಮಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸವಣೂರು ಕ್ಲಸ್ಟರ್ ಸಿ ಆರ್ ಪಿ ಜಯಂತ ವೈ ವಂದಿಸಿದರು.
FLN ಮಕ್ಕಳ ಕಲಿಕಾ ಹಬ್ಬದ ಸಂಭ್ರಮ
ಬೊಬ್ಬೆಕೇರಿ ಶಾಲೆಯಲ್ಲಿ ನಡೆದ FLN ಮಕ್ಕಳ ಕಲಿಕಾ ಹಬ್ಬ ಮಕ್ಕಳಲ್ಲಿ ಹೆಚ್ಚಿನ ಉತ್ಸಾಹ ತಂದಿತ್ತು. ಕಲಿಕಾ ಹಬ್ಬದ ಲೋಗೋ ಅನಾವರಣ ಗೊಳಿಸುವುದರ ಮೂಲಕ ವಿಶಿಷ್ಟವಾಗಿ ಚಾಲನೆ ನೀಡಲಾಯಿತು. ತಳಿರು ತೋರಣಗಳಿಂದ ಶಾಲೆಯು ಕಂಗೊಳಿಸುತ್ತಿದ್ದು, ಸಂಭ್ರಮದ ವಾತಾವರಣ ಶಾಲೆಗಳಲ್ಲಿ ಮನೆ ಮಾಡಿತ್ತು. ಕಲಿಕಾ ಹಬ್ಬದಲ್ಲಿ ಏಳು ಕಾರ್ನರ್ಗಳ ಮೂಲಕ ಕ್ಲಸ್ಟರ್ನ 8 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳ 100 ವಿದ್ಯಾರ್ಥಿಗಳಿಗೆ ಜ್ಞಾಪಕ ಶಕ್ತಿ ಚಟುವಟಿಕೆ, ಅಂದ ಬರಹ, ಸಂತೋಷದಾಯಕ ಗಣಿತ ಚಟುವಟಿಕೆ, ಕಥೆ ಹೇಳುವ ಚಟುವಟಿಕೆ, ರಸಪ್ರಶ್ನೆ ಚಟುವಟಿಕೆ, ಪೋಷಕರರೊಂದಿಗೆ ಸಹ ಸಂಬಂಧ ಚಟುವಟಿಕೆ ಎಂಬ ಹೆಸರಿನೊಂದಿಗೆ ಕಲಿಕಾ ಹಬ್ಬವನ್ನು ಆಯೋಜಿಸಲಾಗಿತ್ತು.