ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಲ್ ಕೆ ಜಿ ವಿದ್ಯಾರ್ಥಿಗಳಿಂದ “ಕಿಡ್ಸ್ ಮಾರ್ಕೆಟ್” ಎಂಬ ವಿನೂತನ ಶೈಲಿಯ ಪಠ್ಯಧಾರಿತ ಚಟುವಟಿಕೆಯ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಮೋಹನ್ , ಹಿರಿಯ ನಿರ್ದೇಶಕರಾದ ಹಸನ್ ವಿಟ್ಲ, ಆಡಳಿತಾಧಿಕಾರಿ ರಾಧಾಕೃಷ್ಣ ಎರುಂಬು, ಪ್ರಾಂಶುಪಾಲ ಜಯರಾಮ ರೈ ಹಾಗೂ ಉಪ ಪ್ರಾಂಶುಪಾಲೆ ಜ್ಯೋತಿ ಶೆಣೈಯವರ ಉಪಸ್ಥಿತಿಯಲ್ಲಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಕಾರ್ಯದರ್ಶಿ ಮೋಹನ.ಎ ಹಾಗೂ ಪ್ರಾಂಶುಪಾಲ ಜಯರಾಮ ರೈ ಶುಭ ಹಾರೈಸಿದರು. ಆಗಮಿಸಿದ ಪೋಷಕರು ಚಿಣ್ಣರ ಸಂತೆಯಲ್ಲಿ ವ್ಯಾಪಾರ ಮಾಡುವುದರ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.
ಅನೇಕ ವಿಧದ ತಾಜಾ ತರಕಾರಿಗಳು ಹಣ್ಣುಗಳು ಸೊಪ್ಪುಗಳು ಕಾಯಿಗಳು ಬೀಜಗಳು ಅಲಂಕಾರಗೊಂಡಿದ್ದವು. ಕಾರ್ಯಕ್ರಮವನ್ನು ಶಿಕ್ಷಕಿ ಜಯಶ್ರೀರವರು ನಿರೂಪಿಸಿದರು.ಶಿಕ್ಷಕಿ
ದೇವಿಕ ಹಾಗೂ ನರ್ಸರಿ ಶಿಕ್ಷಕರು ಸಂಯೋಜಿಸಿದರು.