ಬೆಳಂದೂರು ಶಾಲೆಯಲ್ಲಿ ಸವಣೂರು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

0

ಕಾಣಿಯೂರು: ಮಕ್ಕಳಲ್ಲಿ ಜ್ಞಾನಾರ್ಜನೆ ವೃದ್ಧಿಸಲು ಕಲಿಕಾ ಹಬ್ಬ ಹೆಚ್ಚು ಸಹಕಾರಿಯಾಗಿದ್ದು, ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಹಲವು ವಿಭಿನ್ನ ಕಾರ್ಯಕ್ರಮಗಳನ್ನು ಇಲಾಖೆ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ತೇಜಾಕ್ಷಿ ಕೊಡಂಗೆ ಹೇಳಿದರು. ಅವರು ಶಾಲಾ ಶಿಕ್ಷಣ ಇಲಾಖೆ ಸಮಗ್ರ ಶಿಕ್ಷಣ ಕರ್ನಾಟಕ, ಸವಣೂರು ಸಮೂಹ ಸಂಪನ್ಮೂಲ ಕೇಂದ್ರ, ಸ.ಹಿ.ಪ್ರಾ.ಶಾಲೆ ಬೆಳಂದೂರು ಇದರ ಆಶ್ರಯದಲ್ಲಿ ಫೆ.21ರಂದು ಬೆಳಂದೂರು ಸ.ಹಿ.ಪ್ರಾ. ಶಾಲೆಯಲ್ಲಿ ನಡೆದ ಶೈಕ್ಷಣಿಕ ಬಲವರ್ಧನೆ ವರ್ಷ 2024-25 ಸವಣೂರು ಕ್ಲಸ್ಟರ್ ಮಟ್ಟದ FLN ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬೆಳಂದೂರು ಸ. ಹಿ. ಪ್ರಾ. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಭವಾನಿಶಂಕರ್ ಅಗಳಿ ಅಧ್ಯಕ್ಷತೆ ವಹಿಸಿದ್ದರು. ಬೆಳಂದೂರು ಗ್ರಾ.ಪಂ.ಉಪಾಧ್ಯಕ್ಷ ಜಯಂತ ಅಬೀರ, ಸದಸ್ಯೆ ಹರಿಣಾಕ್ಷಿ ಬನಾರಿ, ಬೆಳಂದೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ್, ಪ್ರಾಥಮಿಕ ಶಾಲಾ ಮುಖ್ಯಗುರುಗಳ ಸಂಘದ ಜಿಲ್ಲಾಧ್ಯಕ್ಷ ನಿಂಗರಾಜು ಕೆ, ಕಾಣಿಯೂರು ಕ್ಲಸ್ಟರ್ ಸಿ ಆರ್ ಪಿ ಯಶೋದ ಎ, ಕುದ್ಮಾರು ಸ.ಉ.ಹಿ. ಪ್ರಾ. ಶಾಲೆಯ ಮುಖ್ಯಗುರು ಕುಶಾಲಪ್ಪ, ಬೊಬ್ಬೆಕೇರಿ ಸ. ಹಿ. ಪ್ರಾ. ಶಾಲಾ ಮುಖ್ಯಗುರು ಶಶಿಕಲಾ, ಸಂಪನ್ಮೂಲ ವ್ಯಕ್ತಿಗಳಾದ ಕುಮಾರಮಂಗಲ ಸ.ಹಿ.ಪ್ರಾ.ಶಾಲೆಯ ಶಿಕ್ಷಕ
ಸಂತೋಷ್ ಎನ್.ಟಿ, ನಾಣಿಲ ಸ.ಹಿ.ಪ್ರಾ.ಶಾಲೆಯ ಶಿಕ್ಷಕ ಸುನಿಲ್, ಆರೆಲ್ತಡಿ ಸ.ಕಿ.ಪ್ರಾ.ಶಾಲೆಯ ಶಿಕ್ಷಕ ಶ್ರೀಕಾಂತ್, ಪಳ್ಳತ್ತಾರು ಸ.ಹಿ.ಪ್ರಾಶಾಲೆಯ ಶಿಕ್ಷಕ ರಂಗನಾಥ್, ಕುದ್ಮಾರು ಸ. ಉ .ಹಿ.ಪ್ರಾ ಶಾಲೆಯ ಶಿಕ್ಷಕಿ ಸುಜಾತ, ಕಾಣಿಯೂರು ಸ.ಹಿ.ಪ್ರಾ.ಶಾಲೆಯ ಅತಿಥಿ ಶಿಕ್ಷಕಿ ದಿವ್ಯಾ.ಪಿ, ದೋಳ್ಪಾಡಿ ಸ.ಹಿ.ಪ್ರಾ.ಶಾಲೆಯ ಅತಿಥಿ ಶಿಕ್ಷಕಿ ಕಲಾವತಿ ಉಪಸ್ಥಿತರಿದ್ದರು.


ಸವಣೂರು ಕ್ಲಸ್ಟರ್ ಸಿ ಆರ್ ಪಿ ಜಯಂತ್ ವೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು ಶಾಲಾ ಮುಖ್ಯಗುರು ಜಾನಕಿಯವರು ಸ್ವಾಗತಿಸಿ, ಶಿಕ್ಷಕ ಲೋಕೇಶ್ ವಂದಿಸಿದರು. ಶಿಕ್ಷಕಿ ಜಯಪ್ರಭಾ ಕಾರ್ಯಕ್ರಮ ನಿರೂಪಿಸಿದರು.

FLN ಮಕ್ಕಳ ಕಲಿಕಾ ಹಬ್ಬ
ಬೆಳಂದೂರು ಶಾಲೆಯಲ್ಲಿ ನಡೆದ FLN ಮಕ್ಕಳ ಕಲಿಕಾ ಹಬ್ಬದ ಲೋಗೋ ಅನಾವರಣ ಗೊಳಿಸುವುದರ ಮೂಲಕ ವಿಶಿಷ್ಟವಾಗಿ ಚಾಲನೆ ನೀಡಲಾಯಿತು. ಕಲಿಕಾ ಹಬ್ಬದಲ್ಲಿ 7 ಕಾರ್ನರ್‌ಗಳ ಮೂಲಕ ಕ್ಲಸ್ಟರ್‌ನ 9 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳ 100 ವಿದ್ಯಾರ್ಥಿಗಳಿಗೆ ಜ್ಞಾಪಕ ಶಕ್ತಿ ಚಟುವಟಿಕೆ, ಅಂದ ಬರಹ, ಸಂತೋಷದಾಯಕ ಗಣಿತ ಚಟುವಟಿಕೆ, ಕಥೆ ಹೇಳುವ ಚಟುವಟಿಕೆ, ರಸಪ್ರಶ್ನೆ ಚಟುವಟಿಕೆ, ಪೋಷಕರರೊಂದಿಗೆ ಸಹ ಸಂಬಂಧ ಚಟುವಟಿಕೆ ಎಂಬ ಹೆಸರಿನೊಂದಿಗೆ ಕಲಿಕಾ ಹಬ್ಬವನ್ನು ಆಯೋಜಿಸಲಾಗಿತ್ತು.

FLN ಮಕ್ಕಳು ಎಂದು ಮೂಲಭೂತ ಅಕ್ಷರ ಜ್ಞಾನ ಮತ್ತು ಸಂಖ್ಯಾಶಾಸ್ತ್ರ ಕೊರತೆ ಇರುವ ಮಕ್ಕಳು.ಆ ಮಕ್ಕಳಿಗಾಗಿಯೇ ಸರಕಾರ ಆಯೋಜಿಸಿರುವ ಕಲಿಕಾ ಹಬ್ಬ ಮಕ್ಕಳ ಶೈಕ್ಷಣಿಕ ಕೊರತೆಯನ್ನು ನೀಗಿಸಲು ಸಹಕಾರಿಯಾಗಿದೆ. ಸವಣೂರು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದಲ್ಲಿ 9 ಸರ್ಕಾರಿ ಶಾಲೆಗಳ 100 ಮಕ್ಕಳು ಭಾಗವಹಿಸಿರುತ್ತಾರೆ. ಎಲ್ಲಾ ಮಕ್ಕಳಿಗೂ ಪ್ರಮಾಣಪತ್ರ ನೀಡಲಾಗುವುದು. 7 ಕಾರ್ನರ್ ಗಳಲ್ಲಿ ಚಟುವಟಿಕೆಗಳು ಏಕಕಾಲದಲ್ಲಿ ನಡೆಯಲು 7 ಸಂಪನ್ಮೂಲ ವ್ಯಕ್ತಿಗಳು ಸಹಕರಿದ್ದಾರೆ.
ಜಯಂತ್ ವೈ
ಸಿ.ಆರ್.ಪಿ ಸವಣೂರು ಕ್ಲಸ್ಟರ್

LEAVE A REPLY

Please enter your comment!
Please enter your name here