ಬೆಳ್ಳಿ ಜರಿ ಹೊಂದಿರುವ ಹಳೆಯ ಯಾವುದೇ ಬಟ್ಟೆಗಳಿಗೂ ಸಿಗಲಿದೆ ಕೈ ತುಂಬಾ ಹಣ…
ಹೆಸರಾಂತ ಶ್ರೀ ಕಾಂಚಿಪುರಂ ರೇಷ್ಮೆ ಸಾರಿ ಸೆಂಟರ್ ಆಯೋಜಿಸಿರುವ ಮೇಳಕ್ಕೆ ಗ್ರಾಹಕ ವರ್ಗದಿಂದ ಅಭೂತಪೂರ್ವ ಬೆಂಬಲ…
ಪುತ್ತೂರು : ಬೆಳ್ಳಿಯ ಜರಿ ಹೊಂದಿರುವ ಹಳೆಯ ಅಥವಾ ಹರಿದ ಸ್ಥಿತಿಯಲ್ಲಿರುವ ಹೆಸರಾಂತ ಕಾಂಚಿಪುರಂ, ಬನಾರಸ್, ಧರ್ಮವರಂ ಹಾಗೂ ಮೈಸೂರು ಸಿಲ್ಕ್ ರೇಷ್ಮೆ ಸೀರೆಗಳ ಸಹಿತ ರೇಷ್ಮೆ ಪಂಚೆ ಮತ್ತು ಲಂಗ ಇವುಗಳ ಖರೀದಿ ಮೇಳವು ಫೆ.21ರಿಂದ ಪುತ್ತೂರಿನಲ್ಲಿ ಪ್ರಾರಂಭಗೊಂಡಿದೆ.

ಶ್ರೀ ಕಾಂಚಿಪುರಂ ರೇಷ್ಮೆ ಸಾರಿ ಸೆಂಟರ್ ಇದರ ವತಿಯಿಂದ ತೆಂಕಿಲ ಬೈಪಾಸ್ ಬಳಿಯ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಆರಂಭಗೊಂಡಿರುವ ಈ ಸಾರಿ ಮೇಳಕ್ಕೆ ಗ್ರಾಹಕ ಜನತೆ ನಿರೀಕ್ಷೆಗೂ ಮೀರಿ ಬೆಂಬಲ ನೀಡುತ್ತಿದ್ದಾರೆ.

ಹಳೇಯದಾದ ರೇಷ್ಮೆ ಸೀರೆಗಳ ಸಹಿತ ಹಲವು ರೀತಿಯ ರೇಷ್ಮೆ ಉಡುಪುಗಳನ್ನು ಶ್ರೀ ಕಾಂಚಿಪುರಂ ರೇಷ್ಮೆ ಸಾರಿ ಸೆಂಟರ್ ಸಂಸ್ಥೆ ಅತ್ಯುತ್ತಮ ಬೆಲೆಗೆ ಕೊಂಡುಕೊಳ್ಳಲು ಸಿದ್ಧವೆಂದು ಮೇಳ ಆಯೋಜಕರು ತಿಳಿಸಿದ್ದಾರೆ.

ತಾವು ನೀಡುವಂತಹ ಪ್ರತಿ ಸೀರೆ ಮತ್ತು ಇನ್ನಿತರ ರೇಷ್ಮೆ ಉಡುಪುಗಳಿಗೆ ಸುಮಾರು 3 ಸಾವಿರದಿಂದ 30 ಸಾವಿರ ರೂಪಾಯಿಗಳನ್ನು ಪಡೆಯುವ ಅವಕಾಶವಿದೆಯೆಂದು ಪ್ರಕಟಣೆ ತಿಳಿಸಿದೆ.
5 ದಿನಗಳ ಕಾಲ ನಡೆಯಲಿರುವ ಈ ಬೃಹತ್ ಸಾರಿ ಮೇಳ ಫೆ. 25ರಂದು ಕೊನೆಗೊಳ್ಳಲಿದೆ. ಆಸಕ್ತ ಗ್ರಾಹಕರು ಈ ಹಳೇಯ ಸಾರಿ ಖರೀದಿ ಮೇಳದ ಪ್ರಯೋಜನ ಪಡೆಯುವಂತೆ ಸಂಸ್ಥೆ ಪ್ರಕಟಣೆ ತಿಳಿಸಿದೆ. ಇನ್ನೂ ಮಾಹಿತಿಗಾಗಿ 7708977496 ದೂರವಾಣಿ ಸಂಪರ್ಕಿಸುವಂತೆ ಕೋರಲಾಗಿದೆ.
