ಪುತ್ತೂರು: ಬನ್ನೂರು ಕರ್ಮಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವು ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಅವರ ನೇತೃತ್ವದಲ್ಲಿ ಫೆ.22ರಂದು ಆರಂಭಗೊಂಡಿತು.
ಬೆಳಿಗ್ಗೆ ಗಣಪತಿ ಹವನ, ಕಲಶಪೂಜೆ, ಕಲಶಾಭಿಷೇಕ, ಸಾಮೂಹಿಕ ಆಶ್ಲೇಷ ಬಲಿ ಪೂಜೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಸಂಗಮ್ ಬ್ರದರ‍್ಸ್ ಪುತ್ತೂರು ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ರಾತ್ರಿ ಶ್ರೀ ದೇವರ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ಈ ಸಂದರ್ಭ ಕ್ಷೇತ್ರ ಸಂಚಾಲಕರಾಗಿರುವ ಧರ್ಮದರ್ಶಿ ರಾಜಣ್ಣ, ಅಧ್ಯಕ್ಷ ಯು.ಲೋಕೇಶ್ ಹೆಗ್ಡೆ, ಗೌರವಾಧ್ಯಕ್ಷ ಚಂದ್ರಹಾಸ ಎಂ ರೈ ಬಾಳಿಕೆ, ದಿನಕರ ಗೌಡ ಬುಡ್ಲೆಗುತ್ತು, ಗಣೇಶ್ ಕರ್ಮಲ, ದಿನೇಶ್ ಕರ್ಮಲ, ಕೃಷ್ಣಪ್ಪ ಗೌಡ, ಉತ್ಸವ ಸಮಿತಿಯ ಚಂದ್ರಶೇಖರ, ಮಹಾಲಿಂಗ ಪಾಟಾಳಿ, ಚಂದ್ರಯ್ಯ ಕರ್ಮಲ, ತಾರಾನಾಥ ಬನ್ನೂರು ಸಹಿತ ಹಲವಾರು ಮಂದಿ ಭಕ್ತರು ಉತ್ಸವದಲ್ಲಿ ಪಾಲ್ಗೊಂಡರು.