JCI ಪುತ್ತೂರು ವತಿಯಿಂದ ಡ್ರಗ್ಸ್ ಮುಕ್ತ ಪುತ್ತೂರು ಜಾಗೃತಿ ಕಾರ್ಯಕ್ರಮ

0

ಪುತ್ತೂರು: ವ್ಯಕ್ತಿತ್ವ ವಿಕಸನ ಮತ್ತು ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂತರಾಷ್ಟ್ರೀಯ ಸೇವಾ ಸಂಸ್ಥೆ JCI ಇದರ ಪುತ್ತೂರು ಘಟಕದ ವತಿಯಿಂದ ದ. ಕ . ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಸಾಜ ಪುತ್ತೂರು ಇಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ ಇದರ ಆಶ್ರಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆ, ವಾರ್ಷಿಕ ಶಿಬಿರ 2024-25ರಲ್ಲಿ ಜೆಸಿಐ ಪುತ್ತೂರಿನ 2025ರ ಸಾಲಿನ ಅತಿ ದೊಡ್ಡ ಕಾರ್ಯಕ್ರಮ “ಡ್ರಗ್ಸ್ ಮುಕ್ತ ಪುತ್ತೂರು ಹಾಗೂ ಸೈಬರ್ ಕ್ರೈಂ ಜಾಗೃತಿ ಕಾರ್ಯಕ್ರಮ” ದ ಅಂಗವಾಗಿ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಜೆಸಿಐ ಪುತ್ತೂರಿನ ಅಧ್ಯಕ್ಷ JC ಭಾಗ್ಯೇಶ್ ರೈ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಪುತ್ತೂರು ಕಾರ್ಯದರ್ಶಿ JC ಮನೋಹರ್ ಪಾಟಾಳಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ ಇಲ್ಲಿಯ ಉಪನ್ಯಾಸಕರು ಹಾಗೂ ಎನ್.ಎಸ್.ಎಸ್ ಪ್ರೋಗ್ರಾಮ್ ಆಫೀಸರಾದ ಡಾ. ಜ್ಯೋತಿ ಪಿ.ಎಸ್ , ಉಪನ್ಯಾಸಕರಾದ ಡಾ. ಸೌಮ್ಯ ಹೆಚ್ , ಹಾಗೂ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಸಾಜ ಇಲ್ಲಿಯ ಮುಖ್ಯ ಗುರುಗಳಾದ ಶಶಿಕಾಂತ್ ರವರು ಉಪಸಿತರಿದ್ದರು.

ಈ ಸಂದರ್ಭದಲ್ಲಿ JCI ಪುತ್ತೂರಿನ ಪೂರ್ವಧ್ಯಕ್ಷರು ಹಾಗೂ ತರಬೇತುದಾರರಾದ JC ಶಶಿ ರಾಜ್ ರೈ ರವರು ‘ಡ್ರಗ್ಸ್ ಮುಕ್ತ ಸಮಾಜ, ಡಿಜಿಟಲ್ ಜಗತ್ತಿನಲ್ಲಿ ಸೈಬರ್ ಸುರಕ್ಷತೆ ‘ ವಿಷಯಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮವನ್ನು ಎನ್.ಎಸ್.ಎಸ್ ಶಿಬಿರಾರ್ಥಿ ಜೀವನ್ ಡಿಸೋಜಾ ನಿರೂಪಿಸಿದರು.

LEAVE A REPLY

Please enter your comment!
Please enter your name here