ಕಾವು: ಕಾವು ಎ.ಜೆ ಸೂಪರ್ ಮಾರ್ಕೆಟ್ ಕಾವು ಜಂಕ್ಷನ್ ಬಳಿ ಇರುವ ಕೆ ಬಿ ಕಾಂಪ್ಲೆಕ್ಸ್ ನಲ್ಲಿ ಫೆ.24ರಂದು ಶುಭಾರಂಭಗೊಂಡಿತು.
ಎ ಜೆ ಸೂಪರ್ ಮಾರ್ಕೆಟ್ ನ ಉದ್ಘಾಟನೆಯನ್ನು ಎನ್ ಪಿ ಎಂ ಜಲಾಲುದ್ದೀನ್ ತಂಙಳ್ ದುಗಲಡ್ಕ, ಮೇನಾಲ ಜುಮಾ ಮಸೀದಿ ಮುದರ್ರಿಸ್ ಇವರು ನೆರವೇರಿಸಿ ದುವಾರ್ಶಿವಚನ ನೀಡಿದರು. ಬಳಿಕ ಮಾತನಾಡಿದ ಮಾಲಕ ಜಾಫರ್ ಎಂ ಎಚ್, ಮನೆಗೆ ಬೇಕಾದ ಸಾಮಾಗ್ರಿಗಳ ಜೊತೆಗೆ ತಿಂಡಿ ತಿನಿಸು ಹಾಗೂ ಇನ್ನಿತರ ವಸ್ತುಗಳು ಬೇಕರಿ, ಡೈರಿ ಉತ್ಪನ್ನಗಳು ಹಾಗೂ ಇನ್ನಿತರ ವಸ್ತುಗಳು ಒಂದೇ ಸೂರಿನಡಿ ಲಭ್ಯವಾಗಲಿದೆ ಎಂದು ಹೇಳಿದ ಅವರು, ಬಂದ ಅತಿಥಿಗಳನ್ನು ಸ್ವಾಗತಿಸಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾಡನ್ನೂರು ಜುಮಾ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬುಶ್ರಾ, ನೂರುಲ್ ಹುದಾ ಇಸ್ಲಾಂ ಅಕಾಡೆಮಿಯ ಪ್ರಿನ್ಸಿಪಾಲ್ ಅಡ್ವಕೇಟ್ ಹನೀಫ್ ಹುದವಿ, ಅಬ್ದುಲ್ ರಹಿಮಾನ್ ಮೇನಾಲ, ಇಬ್ರಾಹಿಂ ಸರ್ವೆ, ಇಸ್ಮಾಯಿಲ್ ದಾರಿಮಿ ಇರ್ದೆ, ಡಿ ಎಂ ಅಬ್ದುಲ್ ಕುಂಞಿ ದೇಲಂಪಾಡಿ, ಎಂ ಎಚ್ ಅಬ್ದುಲ್ ರಹಿಮಾನ್ ಹಾಜಿ ದೇಲಂಪಾಡಿ, ಡಿ ಎಂ ನಾಸಿರ್ ದೇಲಂಪಾಡಿ, ಕೆ ಬಿ ಕಾಂಪ್ಲೆಕ್ಸ್ ಮಾಲಕ ಬಾಲಕೃಷ್ಣ ರೈ ಉಪಸ್ಥಿತರಿದ್ದರು.
