ಪುತ್ತೂರು: ಬೆಟ್ಟಂಪಾಡಿ ಗ್ರಾಮದ ರೆಂಜದಲ್ಲಿರುವ ಬಿ.ಎ ಕಾಂಪ್ಲೆಕ್ಸ್‌ನಲ್ಲಿ ‘ಟಿ.ಎಸ್ ಮಿನಿ ಸೂಪರ್ ಮಾರ್ಕೆಟ್’ ಫೆ.27ರಂದು ಶೂಭಾರಂಭಗೊಳ್ಳಲಿದೆ.

ಜಾಫರ್ ಸಾದಿಕ್ ಅಲಿ ತಂಙಳ್ ಕುಂಬೋಳ್ ಹಾಗೂ ಹಾಶಿಮ್ ಬಾಅಲವಿ ತಂಙಳ್ ಕೊರಿಂಗಿಲ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಬೆಟ್ಟಂಪಾಡಿ ಗ್ರಾ.ಪಂ ಅಧ್ಯಕ್ಷೆ ವಿದ್ಯಾಸುರೇಶ್ ಸರಳೀಕಾನ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಬೆಟ್ಟಂಪಾಡಿ ಸಿ.ಎ ಬ್ಯಾಂಕ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಟಿ.ಎಸ್ ಟೂರ‍್ಸ್ ಟ್ರಾವೆಲ್ಸ್‌ನ ಚೀಫ್ ಅಮೀರ್ ಲತೀಫ್ ಜೌಹರಿ ಸಹಿತ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ ಎಂದು ಟಿ.ಎಸ್ ಮಿನಿ ಸೂಪರ್ ಮಾರ್ಕೆಟ್‌ನ ಮಾಲಕರು ತಿಳಿಸಿದ್ದಾರೆ.