ಫೆ.28: ಎಸ್.ವೈ.ಎಸ್-ಎಸ್.ಕೆ.ಎಸ್.ಎಸ್.ಎಫ್ ಮುಂಡೋಳೆ ಶಾಖೆಯ 5ನೇ ವಾರ್ಷಿಕ ಮಜ್ಲಿಸುನ್ನೂರು & ಕಥಾಪ್ರಸಂಗ

0

ಬಡಗನ್ನೂರು: ಎಸ್‌.ವೈ.ಎಸ್‌ ಮತ್ತು ಎಸ್‌.ಕೆ.ಎಸ್‌.ಎಸ್‌.ಎಫ್‌ ಮುಂಡೋಳೆ ಶಾಖೆಯ 5ನೇ ಮಜ್ಲಿಸುನ್ನೂರು ಮತ್ತು ಕಥಾ ಪ್ರಸಂಗ ಕಾರ್ಯಕ್ರಮ ಫೆ.28ರಂದು ಮುಂಡೋಳೆ ಮಸೀದಿ ಬಳಿ ನಡೆಯಲಿದೆ.

ಸೈಯ್ಯದ್ ಇಬ್ರಾಹೀಂ ಬಾತಿಷಾ ತಂಙಳ್ ಅಲ್ ಬುಖಾರಿ ಆನೆಕಲ್‌ ಅವರು ಮಜ್ಲಿಸುನ್ನೂರು ನೇತೃತ್ವ ವಹಿಸಲಿದ್ದಾರೆ. ಝುಬೈರ್ ಮಾಸ್ಟರ್ ತೊಟ್ಟಿಕಲ್, ಮಮ್ಮಾಲಿ ಕಣ್ಣೂರು, ಕುಂಞ್ಞಿ ತಳಿಪ್ಪರಂಬ್, ಶಫೀಕ್ ತಳಿಪ್ಪರಂಬ್ ಅವರು ಕಥಾ ಪ್ರಸಂಗ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವಾರು ಉಲಮಾ-ಉಮರಾಗಳು, ಧಾರ್ಮಿಕ-ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ.

ಸ್ತ್ರೀಯರಿಗೆ ವಿಶೇಷ ಸ್ಥಳಾವಕಾಶವಿದ್ದು, ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ಇರಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here