ಪುತ್ತೂರು: ಪ್ರಕೃತಿಯ ಔದಾರ್ಯತೆ ಹಾಗೂ ಮೌಲ್ಯವರ್ದಿತ ಗುಣಗಳನ್ನು ಬಳಸಿಕೊಂಡು, ಸತ್ವಯುತವಾದ ಆರೋಗ್ಯಪೂರ್ಣ ಜೀವನ ಶೈಲಿಗೆ ಪೂರಕವಾದ ಗಿಡಮೂಲಿಕಾ ಉತ್ಪನ್ನಗಳನ್ನು “ಸತ್ವಮ್” ಶಿರೋನಾಮೆಯಲ್ಲಿ ನೀಡುತ್ತಾ ಬಂದಿರುವ “ಹಾರ್ದಿಕ್ ಹರ್ಬಲ್ಸ್” ಸಂಸ್ಥೆಗೆ 2025ನೇ ಸಾಲಿನ ಸಮತ್ವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಆಹಾರ, ಆರೋಗ್ಯ ಮತ್ತು ಆರ್ಥಿಕ ಕ್ಷೇತ್ರಗಳ ಉತ್ತಮ ಸಾಧನೆಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.
ಉಡುಪಿಯ ಮಹಾತ್ಮ ಗಾಂಧಿ ಮೆಮೊರಿಯಲ್ (ಎಂಜಿಎಂ) ಕಾಲೇಜಿನಲ್ಲಿ ಫೆ.22 ಹಾಗೂ 23ರಂದು ನಡೆದ ಸಮತ್ವ ವೆಂಚರ್ಸ್ ಸಂಸ್ಥೆ ಆಯೋಜಿಸಿದ್ದ ಎಕ್ಸ್ಪೋ-2025 ಕಾರ್ಯಕ್ರಮದಲ್ಲಿ ಸಮತ್ವ ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಬಿ ಎಂ ಶಾಂತಪ್ರಿಯರವರು ಹಾರ್ದಿಕ್ ಹರ್ಬಲ್ಸ್ ಸಂಸ್ಥೆಯ ಮುಖ್ಯಸ್ಥರಾದ ಮೀರಾ ಮುರಳಿ ಮತ್ತು ಮುರಳೀಧರ ಕೆ.ರವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಕರ್ನಾಟಕ ಬ್ಯಾಂಕಿನ ಮ್ಯಾನೇಜರ್ ಶ್ರೀಕಾಂತ್ ಮಯ್ಯ, ಸದ್ಗುರು ಸೌಹಾರ್ದ ಸೊಸೈಟಿಯ ಸಿಇಓ ದೀಪಾ ಎಸ್ ಬೆಳ್ಳೆ, ಮಾಧುರಿ ಸೌಹಾರ್ದ ಸಹಕಾರಿಯ ನಿರ್ದೇಶಕ ನರಸಿಂಹ ಸ್ವಾಮಿ ಹಾಗೂ ವಿಬಿಎಫ್‌ನ ಸಂಚಾಲಕ ರವಿರಾಮ ನಾರಾಯಣ ಉಪಸ್ಥಿತರಿದ್ದರು. ಮಾಜಿ ಕೇಂದ್ರ ಸಚಿವ ಹಾಗೂ ಕದಂಬ ಗ್ರೂಪ್‌ನ ಸ್ಥಾಪಕ ಅಧ್ಯಕ್ಷ ಡಾ.ಅನಂತಕುಮಾರ್ ಹೆಗಡೆ ನ್ಯಾನೋ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿದರು.
ಸತ್ವಮ್ ಸಂಸ್ಥೆಯು ಹರ್ಬಲ್ ವಾಟರ್ ಜೊತೆಗೆ ಹಾರ್ದಿಕ್ ಹರ್ಬಲ್ಸ್, ಆರೋಗ್ಯ ಸ್ವಾಸ್ಥ್ಯವನ್ನು ಕಾಪಾಡುವ ವೈವಿಧ್ಯಮಯ ಉತ್ಪನ್ನಗಳನ್ನು ಹೊಂದಿದೆ. ಮನುಷ್ಯ ತನ್ನ ಸುತ್ತಮುತ್ತಲಿನ ವಾತಾವರಣದಲ್ಲಿರುವ ಬಹುತೇಕ ವಸ್ತುಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾನೆ. ಅದರಲ್ಲೂ ಸಸ್ಯ ಸಂಕುಲ ಜೀವನದ ಅಂಗವೇ ಆಗಿದೆ. ಸಸ್ಯ ಸಂಕುಲದ ಸತ್ವವನ್ನು ಆರೋಗ್ಯಕರ ವಿಧಾನವಾಗಿ ಬದಲಾಯಿಸಿಕೊಂಡು ಸಮಾಜದ ಸ್ವಾಸ್ಥ್ಯ ಜೀವನಕ್ಕೆ ಹಾಗೂ ಉತ್ತಮ ಆರೋಗ್ಯಕ್ಕೆ ಹಾರ್ದಿಕ್ ಹರ್ಬಲ್ಸ್ ಶ್ರಮಿಸುತ್ತಿದೆ. ಈ ಪ್ರಶಸ್ತಿಯೊಂದಿಗೆ ಹಾರ್ದಿಕ್ ಹರ್ಬಲ್ಸ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು, ಇನ್ನಷ್ಟು ಗ್ರಾಹಕರಿಗೆ ತನ್ನ ಉತ್ಪನ್ನವನ್ನು ಪರಿಚಯಿಸಲು ಹಾಗೂ ಮತ್ತಷ್ಟು ಗಿಡಮೂಲಿಕೆಗಳ ಸತ್ವಯುತವಾದ ಉತ್ಪನ್ನಗಳನ್ನು ಉತ್ಪಾದಿಸಲು ಹಿಂದೆಂದಿಗಿಂತಲೂ ಹೆಚ್ಚು ಉತ್ಸುಕವಾಗಿದೆ.
ಮುರಳೀಧರ ಕೆ.
ಮುಖ್ಯಸ್ಥರು, ಹಾರ್ದಿಕ್ ಹರ್ಬಲ್ಸ್