ಕಡಬ: ನೂಜಿಬಾಳ್ತಿಲ ಗ್ರಾ.ಪಂ.ಕಛೇರಿಯಲ್ಲಿ ವಿಶೇಷ ಚೇತನ ಸಮನ್ವಯ ಗ್ರಾಮ ಸಭೆ

0

ಕಡಬ: ನೂಜಿಬಾಳ್ತಿಲ ಗ್ರಾಮ ಪಂಚಾಯತ್‌ ಕಛೇರಿಯಲ್ಲಿ 2024-25ನೇ ಸಾಲಿನ ವಿಶೇಷ ಚೇತನ ಸಮನ್ವಯ ಗ್ರಾಮ ಸಭೆ ಫೆ.25ರಂದು ನಡೆಯಿತು.

ಪಂಚಾಯತ್‌ ಅಧ್ಯಕ್ಷೆ ಚಂದ್ರಾವತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಜೀವಿನಿ ಒಕ್ಕೂಟದ “ಬೆಳಕು” ಸ್ವ ಸಹಾಯ ಸಂಘಕ್ಕೆ ಚಾಲನೆ ನೀಡಲಾಯಿತು. ಸಂಜೀವಿನಿ ಒಕ್ಕೂಟದ ವಲಯ ಮೇಲ್ವಿಚಾರಕ ಸುವಿನ ಒಕ್ಕೂಟದ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಕಡಬ ತಾಲೂಕು ಪಂಚಾಯತ್‌ ಪ್ರಭಾರ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್‌ ಕುಮಾರ್‌ ವಿಶೇಷ ಚೇತನರಿಗೆ ಸಹಕಾರದ ವತಿಯಿಂದ ವಿವಿಧ ಯೋಜನೆಗಳ ಮೂಲಕ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ನೂಜಿಬಾಳ್ತಿಲ ಸಿ ಆರ್ ಪಿ ಕ್ಲಸ್ಟರ್‌ ಗಣೇಶ್‌ ಸರಕಾರಿ ಶಾಲೆಗಳಲ್ಲಿ ವಿಶೇಷ ಚೇತನರಿಗೆ ಸಿಗುವ ಸವಲತ್ತುಗಳ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಚಂದ್ರ ಶೇಖರ್‌, ಸದಸ್ಯರಾದ ಇಮಾನ್ಯುವೆಲ್‌, ಪಿ ಜೆ ಜೋಸೆಫ್‌, ವಿಜಯಲಕ್ಷ್ಮೀ, ಸಮುದಾಯ ಆರೋಗ್ಯಾಧಿಕಾರಿ ಅಕ್ಷತಾ, ಪೂರ್ಣಿಮಾ, ಪಿಡಿಒ ಗುರುವ, ಪಂಚಶ್ರೀ, ಸಂಜೀವಿನಿ ಒಕ್ಕೂಟದ ಶ್ರೀ ಕಲಾ, ಸರೋಜಿನಿ, ರಾಜೀವಿ, ದೀಕ್ಷಾ, ಶೀಲಾವತಿ, ಆಶಾ ಕಾರ್ಯಕರ್ತೆಯರು, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಮುತ್ತಪ್ಪ ಬಿ, ಮೋನಪ್ಪ ಬಿ, ದೀಪಿಕಾ, ವಿಶೇಷ ಚೇತನರು, ಪೋಷಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here