ಮಕ್ಕಳಲ್ಲಿ ವ್ಯವಹಾರ ಜ್ಞಾನ ಬೆಳೆಸಲು ಇಂತಹ ಮೆಟ್ರಿಕ್ ಮೇಳಗಳು ಸಹಕಾರಿ : ಯಶೋಧ
ಪುತ್ತೂರು: ದ.ಕ.ಜಿ.ಪಂ ಹಿ.ಪ್ರಾ ಶಾಲೆ ಸಜಂಕಾಡಿಯಲ್ಲಿ ನಡೆದ ಮೆಟ್ರಿಕ್ ಮೇಳ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಇಂತಹ ಮಕ್ಕಳ ಸಂತೆಗಳು ಮಕ್ಕಳಲ್ಲಿ ವ್ಯವಹಾರ ಜ್ಞಾನ ಮೂಡಿಸಲು ಸಹಕಾರಿ ಎಂದು .ಶಾಲಾ ಎಸ್ ಡಿ ಎಂ.ಸಿ ಅಧ್ಯಕ್ಷೆ ಯಶೋಧ ಹೇಳಿದರು.
ಈ ಸಂದರ್ಭದಲ್ಲಿ ಕುಂಬ್ರ ಕ್ಲಸ್ಟರ್ ಸಿ.ಆರ್ ಪಿ ಶಶಿಕಲಾ ,ನಿವೃತ್ತ ಶಿಕ್ಷಣ ಸಂಯೋಜಕ ಕುಕ್ಕ .ಎಂ ಡಾ.ಶ್ರೀ ಕುಮಾರ್ ಸೇರಿದಂತೆ ಪೋಷಕರು ಉಪಸ್ಥಿತರಿದ್ದರು .ಪ್ರಭಾರ ಮುಖ್ಯಗುರು ಸುಮಲತಾ ಪಿ.ಕೆ ಸ್ವಾಗತಿಸಿ ,ಹಿರಿಯ ಶಿಕ್ಷಕಿ ಶಶಿಕಲಾ ವಂದಿಸಿದರು.ಪದವೀಧರ ಸಹಶಿಕ್ಷಕ ಗಣೇಶ ನಾಯಕ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು .
ವ್ಯಾಪಾರಿಗಳಾದ ಮಕ್ಕಳು :
ವಿದ್ಯಾರ್ಥಿಗಳು ತಾವೇ ಮನೆಯಿಂದ ತಂದಂತಹ ತೆಂಗಿನಕಾಯಿ ,ಪೊರಕೆ,ಬಸಳೆ ಸೊಪ್ಪು ,ಒಂದೆಲಗ ,ಕಬ್ಬು ,ವಿವಿಧ ಬಗೆಯ ಕರಿದ ಆಹಾರ ಪದಾರ್ಥಗಳು ,ತಿಂಡಿತಿನಿಸುಗಳು ,ಸೇರಿದಂತೆ ವಿವಿಧ ಬಗೆಯ ಪಾನೀಯ ಗಳನ್ನು ಮಾರಾಟ ಮಾಡಿದರು . ಮಕ್ಕಳ ವ್ಯಾಪಾರದಲ್ಲಿನ ಪ್ರೌಢಿಮೆಯನ್ನು ಕಂಡು ಪೋಷಕರು ,ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.