ಸಜಂಕಾಡಿ ಸ.ಹಿ.ಪ್ರಾ ಶಾಲೆಯಲ್ಲಿ ಪೋಷಕಾಂಶಗಳ ಅರಿವು ಮಾಹಿತಿ ಕಾರ್ಯಕ್ರಮ

0

ಪೋಷಕಾಂಶಗಳ ಯುಕ್ತ ಆಹಾರ ಪದಾರ್ಥಗಳನ್ನು ಮನೆಯಲ್ಲೇ ನೀಡಿ ಮಕ್ಕಳನ್ನು ಜಂಕ್ ಪುಡ್ ಗಳಿಂದ ದೂರವಿರಿಸಿ :ಡಾ‌ ಶ್ರೀಕುಮಾರ್

ಪುತ್ತೂರು: ದ.ಕ.ಜಿ.ಪಂ ಹಿ‌.ಪ್ರಾ ಶಾಲೆ ಸಜಂಕಾಡಿಯಲ್ಲಿ ಪೋಷಕಾಂಶಗಳ ಅರಿವು ಮಾಹಿತಿ ಕಾರ್ಯಕ್ರಮ ನಡೆಯಿತು . ಡಾ.ಶ್ರೀ ಕುಮಾರ್ ಪೋಷಕಾಂಶಯುಕ್ತ ಆಹಾರವನ್ನು ತಾಯಂದಿರು ಮನೆಯಲ್ಲಿ ತಯಾರಿಸಿಕೊಡುವ ಮೂಲಕ ಮಕ್ಕಳು ಕುರುಕುರೆ ,ಲೇಸ್ ಮುಂತಾದುವುಗಳಿಂದ ದೂರವಿರಿಸಬಹುದು ಎಂದರು .

ಎಸ್ ಡಿ ಎಂ.ಸಿ ಅಧ್ಯಕ್ಷೆ ಯಶೋಧ ಅಧ್ಯಕ್ಷತೆ ವಹಿಸಿದ್ದರು .ನಿವೃತ್ತ ಶಿಕ್ಷಣ ಸಂಯೋಜಕ ಕುಕ್ಕ .ಎಂ ಸಂದರ್ಭೋಜಿತವಾಗಿ ಮಾತನಾಡಿ ಶುಭಹಾರೈಸಿದರು .ಪ್ರಭಾರ ಮುಖ್ಯಗುರು ಸುಮಲತಾ ಪಿ.ಕೆ ಸ್ವಾಗತಿಸಿ ,ಹಿರಿಯ ಶಿಕ್ಷಕಿ ಶಶಿಕಲಾ ವಂದಿಸಿದರು.ಪದವೀಧರ ಸಹಶಿಕ್ಷಕ ಗಣೇಶ ನಾಯಕ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು .

ಸನ್ಮಾನ :ಸುಮಾರು 38ವರುಷಗಳ ವೈದ್ಯಕೀಯ ಕ್ಷೇತ್ರದ ಸೇವೆಯನ್ನು ಗುರುತಿಸಿ ಡಾ .ಶ್ರೀ ಕುಮಾರ್ ರವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here