ಪುತ್ತೂರು: ಪುತ್ತೂರಿನ ಕಲಾ, ವಿಜ್ಞಾನ ಮತ್ತು ವಾಣಿಜ್ಯ(ಸ್ವಾಯತ್ತ) ಮಹಾವಿದ್ಯಾಲಯದ ಸ್ನಾತಕೋತ್ತರ ಪದವಿ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸ್ಮಿತಾ ರೈರವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ.
ಡಾಕ್ಟರೇಟ್ ಪದವಿ ಪಡೆದ ಸ್ಮಿತಾ ರೈಯವರು, ಮಂಗಳೂರು ವಿ.ವಿ ನಿಲಯದ ಯುನಿವರ್ಸಿಟಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ನಿವೃತ್ತ ಪ್ರೊಫೆಸರ್ ಡಾ|ಕೆ.ಯಂ ಉಷಾರವರ ಮಾರ್ಗದರ್ಶನದಲ್ಲಿ ಕೃಷಿ ತ್ಯಾಜ್ಯ ಅಡಿಕೆ ಸಿಪ್ಪೆಯನ್ನು ಬಳಸಿ ತಯಾರಿಸಿದ ಸೆಲ್ಯೂಲೋಸ್‌ನ್ನು ಉಪಯೋಗಿಸಿ ಮಧುಮೇಹ ವಿರೋಧಿ ಔಷಧ ಬಿಡುಗಡೆ(Cellulose Fibre Based Polymer Composites For Applications In Drug Delivery)ಮಾಡುವ ಕುರಿತು ಮಂಡಿಸಿದ ಸಂಶೋಧನೆಯ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಸ್ಮಿತಾ ರೈಯವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಸೈಂಟ್ ವಿಕ್ಟರ‍್ಸ್‌ನಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ವಿವೇಕಾನಂದ ಪದವಿ ಪೂರ್ವ ಕಾಲೇಜು, ಬಿಎಸ್ಸಿ, ಎಂಎಸ್ಸಿ, ಬಿಎಡ್ ಶಿಕ್ಷಣವನ್ನು ಮಂಗಳೂರು ಅಲೋಶಿಯಸ್ ಕಾಲೇಜಿನಲ್ಲಿ ಪೂರೈಸಿದ್ದರು.
ಸ್ಮಿತಾ ರೈಯವರು ವಿಜಯಾ ಬ್ಯಾಂಕ್ ನಿವೃತ್ತ ಸೀನಿಯರ್ ಮ್ಯಾನೇಜರ್ ಕಂರ್ಬೈಲ್ ಸಂಕಪ್ಪ ರೈ ಮತ್ತು ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಉದ್ಯೋಗಿ ದೇಲಂತಿಮಾರ್ ರತ್ನಾ ರೈಯವರ ಪುತ್ರಿ ಹಾಗೂ ಪೂವನಡ್ಕ ದಿ.ಕೊರಗಪ್ಪ ರೈ ಮತ್ತು ಬೆಳ್ಳಿಪ್ಪಾಡಿ ಉರಮಾಲ್ ದಿ.ರಘುನಾಥ ರೈಯವರ ಮೊಮ್ಮಗಳು.