ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಯೋಗ ಶಿವ ನಮಸ್ಕಾರ

0

ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎಸ್‌ಪಿವೈಎಸ್‌ಎಸ್ ಯೋಗ ಸಮಿತಿಯ ಸಹಕಾರದಲ್ಲಿ ಶಿವರಾತ್ರಿಯ ಪ್ರಯುಕ್ತ ಜಾಗರಣೆಯೊಂದಿಗೆ ಸಾಮೂಹಿಕ ಏಕಾದಶ ಯೋಗ ಶಿವ ನಮಸ್ಕಾರವು 4 ಆವೃತ್ತಿಗಳಲ್ಲಿ ಫೆ.26ರಂದು ರಾತ್ರಿಯಿಂದ ಫೆ.27ರ ಮುಂಜಾನೆ ತನಕ ದೇವಳದ ಅನ್ನಪೂರ್ಣೇಶ್ವರೀ ಹಾಲ್‌ನಲ್ಲಿ ನಡೆಯಿತು.


ಜಾಗರಣೆ, ಭಜನೆ, ಶಿವಜಾಗರಣೆ ಮಹತ್ವ, ಭಜನೆ ಮಹತ್ವ, ಶಿವ ಪಂಚಾಕ್ಷರಿ ಮಹತ್ವ, ಮುಂತಾದ ವಿಷಯಗಳಲ್ಲಿ ಬೌದ್ಧಿಕ್, ಕುಣಿತ ಭಜನೆ, ಶಿವ ಪಂಚಾಕ್ಷರಿ ಜಪ, ಶಿವಾಷ್ಟೋತ್ತರಶತನಾಮನಿ ಪಠಣ, ಮೃತ್ಯಂಜಯ ಜಪ ಪಠಣೆ, ಪುಷ್ಪಾರ್ಚನೆ, ಬಿಲ್ವಾರ್ಚನೆ, ಶ್ರೀಕ್ಷೇತ್ರದಲ್ಲಿ 108 ಸುತ್ತು ಪ್ರದಕ್ಷಿಣೆ, ಕಲಶತೀರ್ಥ ಪ್ರೋಕ್ಷಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಸಂಚಾಲಕರು ನೆರೆವೇರಿಸಿದರು. ಹಾಗೂ ವೇದಿಕೆಯಲ್ಲಿ ಕಾರ್ಯಕ್ರಮದ ಮಾರ್ಗದರ್ಶಕರು, ಸಂಚಾಲಕರು ಹಾಗೂ ತಾಲೂಕಿನ ಪ್ರಮುಖರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕಿನ ವಿವಿಧ ಶಾಖೆಗಳಿಂದ ಸುಮಾರು 200ಕ್ಕೂ ಮಿಕ್ಕಿ ಯೋಗಬಂಧುಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here