ಪುತ್ತೂರು: ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್ನಲ್ಲಿ ಈಡನ್ ಇಂಫಾಟಿಯ ಝೀಕ್ಯೂ ಫೆಸ್ಟ್ ನಡೆಯಿತು. ಝೀಕ್ಯು ವಿದ್ಯಾರ್ಥಿ ಮುಝಯ್ಯನ್ ಪ್ರಾರ್ಥನೆಯ ಮೂಲಕ ಪ್ರಾರಂಭಿಸಿ ಸ್ವಾಗತ ನೃತ್ಯದ ಮೂಲಕ ಅತಿಥಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ಬೈತಡ್ಕ ಜುಮಾ ಮಸೀದಿಯ ಖತೀಬ್ ಸಫ್ವಾನ್ ಜೌಹರಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ರಂಝೀ ಮುಹಮ್ಮದ್ ಝೀಕ್ಯು ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿದರು. ಆಡಳಿತ ಸಮಿತಿಯ ಕಾರ್ಯದರ್ಶಿ ಬಶೀರ್ ಹಾಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶೈಕ್ಷಣಿಕ ವರ್ಷದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸಂಸ್ಥೆಯ ಆಡಳಿತ ಸಮಿತಿ ಸದಸ್ಯ ಪುತ್ತುಬಾವ ಹಾಜಿ ಮಾತನಾಡಿ ಶುಭ ಹಾರೈಸಿದರು.
ಝೀಕ್ಯೂ ಕೋಆಡಿನೇಟರ್ ಆಯಿಶತ್ ಶಾಬಿರ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಮಾತನಾಡಿದರು. ನಂತರ ಝೀ ಕ್ಯೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪೋಷಕ ಪ್ರತಿನಿಧಿ ರಝಾಕ್ ಕೆನರಾ ಉಪಸ್ಥಿತರಿದ್ದರು. ಸಂಸ್ಥೆಯ ಆಡಳಿತ ಸಮಿತಿಯ ಪದಾಧಿಕಾರಿಗಳು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ವರ್ಗದವರು, ಪೋಷಕರು ಉಪಸ್ಥಿತರಿದ್ದರು. ಅರೇಬಿಕ್ ವಿಭಾಗದ ಮುಖ್ಯಸ್ಥ ರಶೀದ್ ಸಖಾಫಿ ಸ್ವಾಗತಿಸಿದರು.
ಸಂಸ್ಥೆಯ ಶಿಕ್ಷಕಿಯರಾದ ಫಾತಿಮತ್ ಅಫ್ರೀನ ಡಿ.ಹೆಚ್ ಹಾಗೂ ಕು.ಅಮ್ನಾಝ್ ಕಾರ್ಯಕ್ರಮ ನಿರೂಪಿಸಿದರು.