ಉಪ್ಪಿನಂಗಡಿ: 39ನೇ ವರ್ಷದ ಹೊನಲು ಬೆಳಕಿನ ಉಪ್ಪಿನಂಗಡಿಯ ವಿಜಯ- ವಿಕ್ರಮ ಜೋಡುಕರೆ ಕಂಬಳವು ಈ ಬಾರಿ ಮಾ.22ರಂದು ನಡೆಯಲಿದ್ದು, ಇದಕ್ಕೆ ಸಚಿವರನ್ನು ಹಾಗೂ ಅತಿಥಿಗಳನ್ನು ಅಹ್ವಾನಿಸುವ ಕುರಿತು ಕಂಬಳ ಸಮಿತಿಯ ಸಭೆಯಲ್ಲಿ ಚರ್ಚಿಸಲಾಯಿತು.
ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ, ಶಾಸಕರಾದ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭ ಮಾತನಾಡಿದ ಅಶೋಕ್ ಕುಮಾರ್ ರೈಯವರು, ಕಳೆದ ಬಾರಿ ಕಂಬಳದೊಂದಿಗೆ ಸಸ್ಯ ಮೇಳ, ಆಹಾರ ಮೇಳ, ನೇತ್ರಾವತಿ ನದಿ ಕಿನಾರೆಯಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ನಡೆಸಿ ಕಂಬಳವನ್ನು ಉಬಾರ್ ಕಂಬಳೋತ್ಸವವಾಗಿ ಆಚರಿಸಿ ಹೆಚ್ಚಿನ ಮೆರುಗು ನೀಡಲಾಗಿದೆ. ಕಂಬಳವು ರೈತಾಪಿ ವರ್ಗದ ಕ್ರೀಡೆಯಾಗಿದ್ದು, ಈ ಬಾರಿ ರೈತರಿಗೆ ಅನುಕೂಲವಾಗುವ ಆಧುನಿಕ ಕೃಷಿ ಯಂತ್ರೋಪಕರಣಗಳ ಪ್ರದರ್ಶನವನ್ನೂ ಆಯೋಜಿಸಬೇಕು ಎಂದರು.

ಸಭೆಯಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷ ಎನ್. ಉಮೇಶ್ ಶೆಣೈ, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಪದಾಧಿಕಾರಿಗಳಾದ ಜಯಪ್ರಕಾಶ್ ಬದಿನಾರು, ಯೋಗೀಶ್ ಸಾಮಾನಿ ಸಂಪಿಗೆದಡಿ, ಜಯಂತ ಪೊರೋಳಿ, ಚಂದ್ರಶೇಖರ ಮಡಿವಾಳ, ಡಾ.ರಾಜಾರಾಮ್ ಕೆ.ಬಿ., ರಾಜೇಶ್ ರೈ, ಕಂಗ್ವೆ ವಿಶ್ವನಾಥ ಶೆಟ್ಟಿ, ಮಹಾಲಿಂಗ ಕಜೆಕ್ಕಾರ್, ರಾಘವೇಂದ್ರ ನಾಯಕ್, ಕೃಷ್ಣಪ್ರಸಾದ್ ಬೊಳ್ಳಾವು, ದಿವ್ಯರಾಜ ಭಂಡಾರಿ, ಕುಮಾರನಾಥ ಪಲ್ಲತ್ತಾರು, ದಿಲೀಪ್ ಶೆಟ್ಟಿ ಉಪಸ್ಥಿತರಿದ್ದರು.
ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ಸ್ವಾಗತಿಸಿ, ವಂದಿಸಿದರು.