ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆಇಂದು ಮಾ.2ರಂದು ಚುನಾವಣೆ ನಡೆಯಿತು. 12 ಸ್ಥಾನಕ್ಕೆ,24 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಇದ್ದರು.
ಸಾಮಾನ್ಯ ಸ್ಥಾನಕ್ಕೆ ಅಶೋಕ ಗೋಕುಲನಗರ, ಉದಯ ಸಾಲಿಯಾನ್ ಮಾಯಿಲ್ಗ, ಕೇಶವ ಗೌಡ ಆಲಡ್ಕ, ಜನಾರ್ದನಾ ಪೂಜಾರಿ ಕದ್ರ, ದಯಾನಂದ ರೈ ಮನವಳಿಕೆ, ಪ್ರಶಾಂತ ಆರ್.ಕೆ ಕಾಜರುಕ್ಕು, ರಘುರಾಮ ಕೆ ನವಕೇವಳ, ರಮೇಶ ಯು ಉಪ್ಪಂಗಳ, ಶೇಖರ ಗೌಡ ಹಿರಿಂಜ, ಸುಭಾನು ರೈ ಮರುವಂತಿಲ, ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ಜಯಕರ ಪೂಜಾರಿ ಕಲ್ಲೇರಿ, ವಿಜಯ ಎಸ್ ಅಂಬಾ, ಹಿಂದುಳಿದ ವರ್ಗ ಬಿ ಮೀಸಲು ಸ್ಥಾನದಿಂದ ದಯಾನಂದ ಎನ್ ಆಲಡ್ಕ, ಪದ್ಮಪ್ಪ ಗೌಡ ಕೆದುಂಬಾಡಿ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಕುಂಞ ಮುಗೇರ, ಮಾಧವ ಶಾಂತಿಗುರಿ, ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಅಶೋಕ ಪೆರಾಬೆ, ನಿರಂಜನ ಎನ್ ಏಣಿತ್ತಡ್ಕ, ಮಹಿಳಾ ಮೀಸಲು ಸ್ಥಾನದಿಂದ ಗಾಯತ್ರಿ ಚಾಮೆತ್ತಡ್ಕ, ಮೇನ್ಸಿ ಸಜನ್ ಆಗತ್ತಾಡಿ, ರತ್ನಾ ಬಿ.ಕೆ ಕೊಂಡಾಡಿಕೊಪ್ಪ, ಸುಂದರಿ ಬರೆಂಬಾಡಿ, ಸಾಲಗಾರರಲ್ಲದ ಕ್ಷೇತ್ರದಲ್ಲಿ ಲೋಕೇಶ ಕಮ್ಮಿತ್ತಿಲು, ಸುದೀಶ ಪಟ್ಟೆ ಇವರು ಅಂತಿಮ ಕಣದಲ್ಲಿದ್ದು ಚುನಾವಣೆ ನಡೆಯಿತು. ಒಟ್ಟು ಸಾಲಗಾರ ಕ್ಷೇತ್ರದಲ್ಲಿ 2059 ಮತಗಳಿದ್ದು 1808 ಮತದಾನ ನಡೆದು, ಒಟ್ಟು 88% ಮತದಾನ ನಡೆದಿದೆ. ಸಾಲಗಾರಲ್ಲದ ಕ್ಷೇತ್ರದಲ್ಲಿ 412 ಮತದಾನ ಇದ್ದು 300 ಮತ ಚಲಾವಣೆಯಾಗಿದ್ದು, ಶೇಕಡಾ 75% ಮತ
ಚಲಾವಣೆಯಾಗಿದೆ.
ಅನರ್ಹ 423 ಮತದಾರರಿಗೆ ಉಚ್ಚನ್ಯಾಯಾಲಯ ಮತದಾನ ಮಾಡಲು ಅವಕಾಶ ನೀಡಿದ್ದು, ಇದರಲ್ಲಿ 356 ಮತದಾನವಾಗಿದೆ. ಈ ಪ್ರಕರಣದ ಅಂತಿಮ ತೀರ್ಪು ಪ್ರಕಟಗೊಂಡ ನಂತರ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲಿದೆ.
ಮತದಾನದ ವೇಳೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ – ಪೋಲಿಸರ ಮಧ್ಯಪ್ರದೇಶ ಪರಿಸ್ಥಿತಿ ಹತೋಟಿ
ಸಂಘದ ಸದಸ್ಯರನ್ನು ಮತದಾನಕ್ಕೆ ಚುನಾವಣಾ ಕೇಂದ್ರಕ್ಕೆ ಕರೆ ತರುವ ಸಂದರ್ಭದಲ್ಲಿ ಸಹಕಾರಿ ಭಾರತಿ ಮತ್ತು ರಮೇಶ ಭಟ್ ಉಪ್ಪಂಗಳ ಸಹಕಾರಿ ಬಳಗದ ಮಧ್ಯೆ ಚಿಹ್ನೆಯ ಚೀಟಿ ಹಂಚುವಿಕೆಯ ವಿಚಾರವಾಗಿ ಪರಸ್ಪರ ಮಾತಿನ ಚಕಮಕಿ ನಡೆಯಿತು.
ಈ ಸಂಧರ್ಭದಲ್ಲಿ ಪೋಲಿಸರು ಮದ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದ ಬಳಿಕ ಶಾಂತಿಯುತ ಮತದಾನ ನಡೆಯಿತು.