ಇಂದಿನ ಕಾರ್ಯಕ್ರಮ (03/03/2025)

0

ಮುಂಡೂರು ಪ್ರಾ.ಕೃ.ಪ.ಸ.ಸಂಘದ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಮುಂಡೂರು ಗ್ರಾ.ಪಂನ ಗ್ರಾಮಸಭೆ
ಕೈಕಾರ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಒಳಮೊಗ್ರು ಗ್ರಾ.ಪಂ ೪ನೇ ವಾರ್ಡ್, ಅಜಲಡ್ಕ ಸಮುದಾಯ ಭವನದಲ್ಲಿ ಅಪರಾಹ್ನ ೨ಕ್ಕೆ ೩ನೇ ವಾರ್ಡ್‌ನ ವಾರ್ಡುಸಭೆ
ಕಾಣಿಯೂರು ಶ್ರೀ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನಮ್ ಉಡುಪಿ, ಶ್ರೀ ಕಾಣಿಯೂರು ಮಠದಲ್ಲಿ ಮಧ್ಯಾಹ್ನ ೧೨.೩೦ರಿಂದ ಎಲ್ಯಾರ ದೈವದ ನೇಮ, ಅನ್ನಸಂತರ್ಪಣೆ, ೩ರಿಂದ ಮಾಣಿ ದೈವದ ನೇಮ, ಸಂಜೆ ೫.೩೦ರಿಂದ ನಾಯರ್ ದೈವದ ನೇಮ, ಧ್ವಜಾವರೋಹಣ.
ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಬೆಳಿಗ್ಗೆ೧೦ ಗಂಟೆಯಿಂದ ಸಮಗ್ರ ಕೃಷಿ ನಿರ್ವಹಣಾ ಮಾರ್ಗದರ್ಶನ ಕಾರ್ಯಾಗಾರ
ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೫ಕ್ಕೆ ಬೆಡಿಸೇವೆ, ೬ಕ್ಕೆ ಬಟ್ಟಲು ಕಾಣಿಕೆ, ಧ್ವಜಾವರೋಹಣ, ಮಂತ್ರಾಕ್ಷತೆ, ಸಂಪ್ರೋಕ್ಷಣೆ, ೮ರಿಂದ ಗಣಪತಿ ಹೋಮ, ಬಲಿವಾಡು ಶೇಖರಣೆ, ಮಧ್ಯಾಹ್ನ ಮಹಾಪೂಜೆ, ರಾತ್ರಿ ೮ಕ್ಕೆ ಶ್ರೀ ಕ್ಷೇತ್ರದ ದೈವಗಳ ಸ್ಥಾನದಿಂದ ದೈವಗಳ ಭಂಡಾರ ಹೊರಟು ಮಾಡದಗುಡ್ಡೆ ದೈವಗಳ ಚಾವಡಿಯಲ್ಲಿ ಏರುವುದು
ಬಡಗನ್ನೂರು ಶ್ರೀ ಕ್ಷೇತ್ರ ಗೆಜ್ಜೆಗಿರಿ ದೇಯಿ ಬೈದೆತಿ, ಕೋಟಿ ಚೆನ್ನಯ ಮೂಲಸ್ಥಾನದಲ್ಲಿ ಬೆಳಿಗ್ಗೆ ೬ರಿಂದ ಗಣಪತಿ ಹೋಮ, ಗುರುಪೂಜೆ, ಶುದ್ಧಿ ಕಲಶ, ೮ರಿಂದ ಧೂಮಾವತಿ ದೈವದ ಭಂಡಾರ ಇಳಿಯುವುದು, ದರ್ಶನ, ೯ರಿಂದ ಧೂಮಾವತಿ ನೇಮೋತ್ಸವ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೫ರಿಂದ ಧೂಮಾವತಿ ಬಲಿ ಉತ್ಸವ, ಮಹಾಪೂಜೆ, ರಾತ್ರಿ ೬ರಿಂದ ಕುಪ್ಪೆ ಪಂಜುರ್ಲಿ ದೈವದ ಭಂಡಾರ ಇಳಿಯುವುದು, ರಾತ್ರಿ ೭.೩೦ಕ್ಕೆ ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ, ೮ರಿಂದ ಕುಪ್ಪೆ ಪಂಜುರ್ಲಿ ನೇಮೋತ್ಸವ, ೧೦ರಿಂದ ಕಲ್ಲಲ್ತಾಯ ನೇಮೋತ್ಸವ, ೧೨ರಿಂದ ಕೊರತಿ ನೇಮೋತ್ಸವ
ರಾಮಕುಂಜ ಗ್ರಾಮದ ನೀರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ಪುಣ್ಯಾಹವಾಚನ, ನಾಂದೀ ಸಮಾರಾಧನ, ಕಂಕಣಬಂಧನ, ಅಂಕುರಾರ್ಪಣ, ಗಣಪತಿ ಹೋಮ, ವಿಷ್ಣುಗಾಯತ್ರೀ ಮಂತ್ರ ಹೋಮ, ಪವಮಾಣ ಹೋಮ, ಮಹಾಪೂಜೆ, ಸಂಜೆ ಸುದರ್ಶನ ಹೋಮ, ಉದಕಶಾಂತಿ, ಮಹಾಪೂಜೆ
ಪೆರಾಬೆ ಗ್ರಾಮದ ಮನವಳಿಕೆಗುತ್ತು ಕುಟುಂಬದ ಮನೆಯಲ್ಲಿ ಬೆಳಿಗ್ಗೆ ೧೧ಕ್ಕೆ ಶ್ರೀ ಹರಿ ಸೇವೆ, ನಾಗತಂಬಿಲ, ಮಧ್ಯಾಹ್ನ ೧ಕ್ಕೆ ಅನ್ನಸಂತರ್ಪಣೆ, ರಾತ್ರಿ ೮ಕ್ಕೆ ಶ್ರೀ ಧರ್ಮದೈವ ಧೂಮಾವತೀ ಬಾವನ ರಕ್ತೇಶ್ವರೀ ದೈವಗಳಿಗೆ ಭಂಡಾರ ಹಿಡಿಯುವುದು, ೧೦ರಿಂದ ಧರ್ಮದೈವ ಧೂಮಾವತೀ ಬಾವನ ದೈವದ ನೇಮ
ಹನಿಯೂರು ತರವಾಡು ಮನೆಯಲ್ಲಿ ಬೆಳಿಗ್ಗೆ ೯ಕ್ಕೆ ಹರಿಸೇವೆ, ಮುಡಿಪು ಕಟ್ಟುವುದು. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ೬ರಿಂದ ಧರ್ಮದೈವಗಳ ಭಂಡಾರ ತೆಗೆಯುವುದು, ವ್ಯಾಘ್ರಚಾಮುಂಡಿ, ಕಲ್ಲುರ್ಟಿ ವರ್ಣರ ಪಂಜುರ್ಲಿ ದೈವಗಳಿಗೆ ನೇಮೋತ್ಸವ


ಶುಭಾರಂಭ
ಪುತ್ತೂರು ಅರುಣಾ ಕಲಾ ಮಂದಿರದ ಎದುರು ಕಣ್ಣನ್ಸ್ ಕಾಂಪ್ಲೆಕ್ಸ್‌ನಲ್ಲಿ ಬೆಳಿಗ್ಗೆ ೯.೩೦ಕ್ಕೆ ಸೀಮಾ ಮ್ಯಾಚಿಂಗ್ ಸೆಂಟರ್ ಶುಭಾರಂಭ
ಸಂಪ್ಯ ಶ್ರೀ ವೆಂಕಟೇಶ್ವರ ಸಾ-ಮಿಲ್‌ನ ಸಮೀಪ ಬೆಳಿಗ್ಗೆ ೮ಕ್ಕೆ ಸ್ಟೇಷನರಿ ವೇರ್‌ಹೌಸ್ ಶುಭಾರಂಭ

LEAVE A REPLY

Please enter your comment!
Please enter your name here