ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಚನೆ – ಅಧ್ಯಕ್ಷರಾಗಿ ಕೆ.ಧರ್ಣಪ್ಪ ಮೂಲ್ಯ ಆಯ್ಕೆ

0

ಪುತ್ತೂರು: ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಸದಸ್ಯರನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮದಂತೆ ನೇಮಕ ಮಾಡಿ ಆದೇಶ ಹೊರಡಿಸಿದೆ.
ಮಾ.3ರಂದು ದೇವಳದ ಆಡಳಿತಾಧಿಕಾರಿ ಬನ್ನೂರು ಗ್ರಾ.ಪಂ ಗ್ರಾಮ ಆಡಳಿತ ಅಧಿಕಾರಿ ಶರಣ್ಯ ಅವರು ಸಮಿತಿ ಸದಸ್ಯರ ಸಭೆ ನಡೆಸಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿದರು. ನೇಮಕಗೊಂಡಿರುವ ವ್ಯವಸ್ಥಾಪನಾ ಸಮಿತಿ ನೂತನ ಸದಸ್ಯರ ಪೈಕಿ ಅಧ್ಯಕ್ಷರಾಗಿ ಬನ್ನೂರು ಕಜೆ ನಿವಾಸಿ ಕೆ.ಧರ್ಣಪ್ಪ ಮೂಲ್ಯ ಅವರು ಆಯ್ಕೆಗೊಂಡಿದ್ದಾರೆ. ಉಳಿದಂತೆ ಸದಸ್ಯರಾಗಿ ಪ್ರಧಾನ ಅರ್ಚಕ ಶಿವಪ್ರಸಾದ್ ಭಟ್, ಆನೆಮಜಲು ನಿವಾಸಿ ವಿನೋದ್ ಕುಮಾರ್, ನೆಕ್ಕಿಲ ನಿವಾಸಿ ರೇವತಿ ಶೆಟ್ಟಿ, ಹಲಂಗ ನಿವಾಸಿ ಸುಮಲತಾ ಎನ್, ಪಟ್ಟೆ ನಿವಾಸಿ ಚಂದ್ರಾಕ್ಷ ಬಿ.ಎನ್, ಬನ್ನೂರು ಶಾಲಾ ಬಳಿಯ ಮಹಾಬಲ ಪೂಜಾರಿ, ಗೋಳ್ತಿಲ ನಿವಾಸಿ ಜಿ.ಬಾಲಕೃಷ್ಣ ಗೌಡ, ಜೈನರಗುರಿ ನಿವಾಸಿ ಬಿ.ದಯಾನಂದ ಬನ್ನೂರು ಅವರು ಆಯ್ಕೆಗೊಂಡಿದ್ದಾರೆ.


LEAVE A REPLY

Please enter your comment!
Please enter your name here