ಪ್ರವಾಸಿಗರಿಗೆ ಅನುಕೂಲ- ಜಿ.ಕೆ.ಪ್ರಸನ್ನ
ಗ್ರಾಹಕರ ಪ್ರೋತ್ಸಾಹ ಅಗತ್ಯ- ಅರುಣ್ ಕುಮಾರ್ ಪುತ್ತಿಲ
ಪುತ್ತೂರು: ಸರ್ವೆ ಗ್ರಾಮದ ಭಕ್ತಕೋಡಿ ಆರಾಧ್ಯ ಸಂಕೀರ್ಣದಲ್ಲಿ ಸಸ್ಯಹಾರಿ ಹೋಟೆಲ್ ಶ್ರೀನಿವಾಸ ಮಾ.3 ರಂದು ಶುಭಾರಂಭಗೊಂಡಿತು.
ಪ್ರವಾಸಿಗರಿಗೆ ಅನುಕೂಲ- ಜಿ.ಕೆ.ಪ್ರಸನ್ನ
ಭಕ್ತಕೋಡಿ ಆರಾಧ್ಯ ಸಂಕೀರ್ಣದ ಮಾಲಕ ಜಿ.ಕೆ.ಪ್ರಸನ್ನರವರು ದೀಪ ಬೆಳಗಿಸಿ, ಶ್ರೀನಿವಾಸ ಹೋಟೆಲ್‌ನ್ನು ಉದ್ಘಾಟಿಸಿ, ಮಾತನಾಡಿ ಸರ್ವೆ ಗ್ರಾಮದ ಭಕ್ತಕೋಡಿಯಲ್ಲಿ ಸುಸಜ್ಜಿತವಾದ ಸಸ್ಯಹಾರಿ ಹೋಟೆಲ್ ಆರಂಭವಾಗಿರುವುದು ತುಂಬಾ ಸಂತೋಷದ ವಿಚಾರವಾಗಿದ್ದು, ಪುತ್ತೂರು-ದರ್ಬೆ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಹಾದು ಹೋಗುವ ಭಕ್ತಕೋಡಿ ಪ್ರದೇಶದಲ್ಲಿ ಈ ಹೋಟೆಲ್ ಪ್ರಾರಂಭವಾಗಿರುವದರಿಂದ ಪ್ರವಾಸಿಗರಿಗೆ ಹೆಚ್ಚು ಅನುಕೂಲವಾಗಲಿದೆ, ಜನರಿಗೆ ಅತ್ಯಂತ ಉತ್ತಮ ಗುಣಮಟ್ಟದ ಆಹಾರವನ್ನು ನೀಡುವ ಮೂಲಕ ಹೋಟೆಲ್ ಶ್ರೀನಿವಾಸ ಊರ-ಪರವೂರಿನ ಜನರ ಅಚ್ಚು ಮೆಚ್ಚಿನ ಹೋಟೆಲ್ ಆಗಲಿ ಎಂದು ಶುಭಹಾರೈಸಿದರು.
ಗ್ರಾಹಕರ ಪೂರ್ಣ ಸಹಕಾರ ಅಗತ್ಯ- ಅರುಣ್ ಕುಮಾರ್ ಪುತ್ತಿಲ
ಪುತ್ತಿಲ ಪರಿವಾರ ಟ್ರಸ್ಟ್‌ನ ಸಂಚಾಲಕ ಅರುಣ್‌ಕುಮಾರ್ ಪುತ್ತಿಲರವರು ಶ್ರೀನಿವಾಸ ಹೋಟೆಲ್‌ಗೆ ಶುಭಹಾರೈಸಿ, ಹೋಟೆಲ್‌ಗೆ ಗ್ರಾಹಕರ ಪೂರ್ಣ ಸಹಕಾರ ಅಗತ್ಯ ಎಂದರು.
ಮುಂಡೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಉದ್ಯಮಿ ವಸಂತ್ ಎಸ್.ಡಿ, ಕರ್ನಾಟಕ ಬ್ಯಾಂಕ್ ಸರ್ವೆ ಶಾಖಾ ಮ್ಯಾನೇಜರ್ ಪ್ರದೀಪ್ ಕುಮಾರ್, ಕೆಪಿಟಿ ಮಾಜಿ ಉದ್ಯೋಗಿ ಕೇಶವ ಪ್ರಭು, ಕಳಂಜ ಸೊಸೈಟಿಯ ಕಾರ್‍ಯದರ್ಶಿ ರಮೇಶ್ ನಾಯಕ್ ಸಹಿತ ಹಲವು ಮಂದಿ ಉಪಸ್ಥಿತರಿದ್ದರು. ಹೋಟೆಲ್ ಶ್ರೀನಿವಾಸ ಮಾಲಕ ಮುರುಳಿಕೃಷ್ಣ ಕೆ ಸ್ವಾಗತಿಸಿ, ವಂದಿಸಿದರು.

ಗ್ರಾಹಕರ ಪ್ರೋತ್ಸಾಹ ಅಗತ್ಯ
ಭಕ್ತಕೋಡಿಯ ಆರಾಧ್ಯ ಸಂಕಿರ್ಣದಲ್ಲಿ ಶುದ್ಧ ಸಸ್ಯಹಾರಿ ಹೋಟೆಲ್ ಶ್ರೀನಿವಾಸ ಆರಂಭಗೊಂಡಿದೆ. ಬೆಳಿಗ್ಗೆ 6.30 ರಿಂದ ರಾತ್ರಿ 7.30 ರತನಕ ಗ್ರಾಹಕರ ಸೇವೆಗೆ ಲಭ್ಯವಿದ್ದು, ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಊಟದ ವ್ಯವಸ್ಥೆ, ಐಸ್‌ಕ್ರೀಮ್, ಜ್ಯೂಸ್ ಐಟಂ, ಚಾಟ್ಸ್ ಲಭ್ಯವಿದ್ದು, ನಮ್ಮಲ್ಲಿ ಕ್ಯಾಟರಿಂಗ್ ವ್ಯವಸ್ಥೆ ಕೂಡ ಇದೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಮಾಡಿ- 9741638470
ಮುರುಳಿಕೃಷ್ಣ ಕೆ
ಮಾಲಕರು ಹೋಟೆಲ್ ಶ್ರೀನಿವಾಸ
ಆರಾಧ್ಯ ಸಂಕೀರ್ಣ ಭಕ್ತಕೋಡಿ