ನಿವೃತ್ತಿ ಪಡೆದು ಹುಟ್ಟೂರಿಗೆ ಆಗಮಿಸಿದ ಯೋಧ ಲಕ್ಷ್ಮೀಶ ಕಡಮಜಲುರವರಿಗೆ ಅದ್ಧೂರಿಯ ಗೌರವ

0

ಕುಂಬ್ರದಲ್ಲಿ ಸ್ವಾಗತ, ತೆರದ ವಾಹನದಲ್ಲಿ ಮೆರವಣಿಗೆ, ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರಿಂದ ಅಭಿನಂದನೆಯ ಮಹಾಪೂರ

ಪುತ್ತೂರು:ಭಾರತೀಯ ಸೇನೆಯಲ್ಲಿ ಸುದೀರ್ಘ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ಮಾ.2ರಂದು ಹುಟ್ಟೂರಿಗೆ ಆಗಮಿಸಿದ ಕೆದಂಬಾಡಿಯ ಕಡಮಜಲು ಲಕ್ಷ್ಮೀಶರವರನ್ನು ಅದ್ದೂರಿಯಾಗಿ ಗೌರವಿಸಲಾಯಿತು. ಪುತ್ತೂರು ವಾಣಿಯನ್/ಗಾಣಿಗ ಸಮುದಾಯ ಸೇವಾ ಸಂಘದ ನೇತೃತ್ವದಲ್ಲಿ ವಿವಿಧ ಸಂಘದ ಸಂಸ್ಥೆಗಳು, ಸಮಾಜ ಬಾಂಧವರು, ಕುಟುಂಬಸ್ಥರ, ಸಾರ್ವಜನಿಕರ ಸಮಾಗಮದೊಂದಿಗೆ ‘ಸೇನಾ ಸೇವೆಗಿದು ನಮನ’ ಎಂಬ ಶೀರ್ಷಿಕೆಯಡಿ ವೈಶಿಷ್ಟ್ಯಪೂರ್ಣವಾಗಿ ಗೌರವಿಸಲಾಯಿತು.


ಕಾರ್ಯಕ್ರಮದ ಪ್ರಾರಂಭದಲ್ಲಿ ಕುಂಬ್ರ ಜಂಕ್ಷನ್ ಬಳಿಯಲ್ಲಿ ವೀರ ಯೋಧನನ್ನು ಸ್ವಾಗತಿಸಲಾಯಿತು. ನಂತರ ತೆರೆದ ವಾಹನದಲ್ಲಿ ಕುಂಬ್ರದಿಂದ ಅವರ ನಿವಾಸ ಕಡಮಜಲು ತನಕ ಮೆರವಣಿಗೆಯ ಮೂಲಕ ಕರೆತರಲಾಯಿತು. ಕುಂಬ್ರದಲ್ಲಿ ಪ್ರಗತಿಪರ ಕೃಷಿಕ ಕಡಮಜಲು ಸುಭಾಸ್ ರೈಯವರು ಲಕ್ಷ್ಮೀಶರವರನ್ನು ಶಾಲು, ಹೂ ಹಾರ ಹಾಕಿ ಸ್ವಾಗತಿಸಿದರು. ನಂತರ ಯೋಧನಿಗೆ ಪುಷ್ಪಾರ್ಚಣೆ ಮಾಡಿ ಮೆರವಣಿಗೆಗೆ ಚಾಲನೆ ನಿಡಲಾಯಿತು. ಮೆರವಣಿಗೆಯು ಕುಂಬ್ರದಿಂದ ಕಡಮಜಲು ನಿವಾಸದ ತನಕ ಸಾಗಿಬಂದಿದೆ. ನಂತರ ನಡೆದ ಕಾರ್ಯಕ್ರಮವನ್ನು ಯೋಧ ಲಕ್ಷ್ಮೀಶರವರ ತಂದೆ ಕೇಚು ಪಾಟಾಳಿ, ತಾಯಿ ಸರಸ್ವತಿ ದೀಪ ಬೆಳಗಿಸಿ ಉದ್ಘಾಟಿಸಿದರು. ಪತ್ನಿ ಚೈತ್ರಾ, ಅತ್ತೆ ಸೀತಾರತ್ನ, ಮಾವ ಮಹಾಲಿಂಗ ಪಾಟಾಳಿ ಪಂಜಳ ಉಪಸ್ಥಿತರಿದ್ದರು.


ವೀರ ಯೋಧನನ್ನು ಸನ್ಮಾನಿಸಿ, ಗೌರವಿಸಿದ ಕಡಮಜಲು ಸುಭಾಸ್ ರೈ ಮಾತನಾಡಿ, ಕಡಮಜಲು ಮಣ್ಣಿನಲ್ಲಿ ಹುಟ್ಟಿ ಬೆಳೆದ ಭಾರತಾಂಬೆಯ ಸೇವೆ ಸಲ್ಲಿಸಿದ ಯೋಧ ಲಕ್ಷ್ಮೀಶ ದೇಶ ಸೇವೆಯ ಪುಣ್ಯಕ್ಕೆ ಭಾಜನರಾದವರು. ಅವರಿಂದಾಗಿ ಕಡಮಜಲು ಮಣ್ಣಿನ ಗೌರವ ವೃದ್ಧಿಯಾಗಿದೆ. ಕಷ್ಟದ ದಿನಗಳಲ್ಲಿ ಬೆಳೆದ ಅವರು ಇಂದು ಶ್ರೇಷ್ಠ ಮಟ್ಟಕ್ಕೆ ಹೋಗಿದ್ದಾರೆ. ಕಡಮಜಲುವಿನ ಕೀರ್ತಿ ವಿಶ್ವಮಟ್ಟಕ್ಕೆ ತಂದಿದ್ದಾರೆ. ಅವರ ವ್ಯಕ್ತಿತ್ವ ಯುವಕರಿಗೆ ಪ್ರೇರಣೆಯಾಗಿದೆ. ಅವರನ್ನು ಸನ್ಮಾನಿಸುವ ಎಲ್ಲರಿಗೂ ಕಾರ್ಯಕ್ರಮವು ಮಾದರಿಯಾಗಿದೆ ಎಂದರು.


ವಾಣಿಯನ್/ಗಾಣಿಗ ಸಮುದಾಯ ಸೇವಾ ಸಂಘದ ಅಧ್ಯಕ್ಷ ಪ್ರಸಾದ್ ಕಲ್ಲರ್ಪೆ ಮಾತನಾಡಿ, ಸೇನೆಯಲ್ಲಿ ಸೇವೆ ಸಲ್ಲಿಸುವುದು ಬಹಳಷ್ಟು ಕಷ್ಟದ ಕೆಲಸ. ಯೋಧರು ತಮ್ಮ ಎಲ್ಲ ಕಷ್ಟಗಳನ್ನು ಹೇಳಿಕೊಳ್ಳುವುದಿಲ್ಲ. ಪ್ರತಿನಿತ್ಯ ಗೌರವ ಕೊಡುವುದೇ ಯೋಧರಿಗೆ ಸಲ್ಲುವ ನಿಜವಾದ ಗೌರವವಾಗಿದೆ. ಯೋಧರು ಇನ್ನೊಬ್ಬರಿಗಾಗಿ ಬದುಕುವವರು. ಅವರು ಮಾಡಿದ ಸೇವೆ ಪುಣ್ಯದ ಫಲ ನಮಗಿದೆ. ಸಂಘಟನೆಯ ಮೂಲಕ ಯೋಧರಿಗೆ ಗೌರವ ಕೊಡುವ ಕಾರ್ಯವಾಗುತ್ತಿದೆ. ಅವರು ತಮ್ಮ ಅನುಭವಗಳನ್ನು ಹಂಚಿಕೊಂಡಾಗಿ ಯೋಧರ ಮೇಲೆ ಗೌರವ ಇಮ್ಮಡಿಯಾಗುತ್ತದೆ ಜೊತೆಗೆ ಯುವ ಜನತೆಗೆ ಪ್ರೇರಣೆಯಾಗುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.


ತಿಂಗಳಾಡಿ ಹಿ.ಪ್ರಾ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅನಂದ ರೈ ಮಠ ಮಾತನಾಡಿ, ಯೋಧನಾಗಿ ಸೇವೆ ಸಲ್ಲಿಸಿದವರಿಗೆ ದೊರೆಯುವಷ್ಟು ಗೌರವ ಇತರ ಯಾವ ಇಲಾಖೆಯಲ್ಲಿ ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ ದೊರೆಯಲು ಸಾಧ್ಯವಿಲ್ಲ. ತಿಂಗಳಾಡಿ ಶಾಲೆಯಲ್ಲಿ ಕಲಿತು, ಯೋಧನಾಗಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿದ ಲಕ್ಷ್ಮೀಶರವರು ಅಂತಹ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರ ಸೇವೆ ಯುವ ಜನಾಂಗಕ್ಕೆ ಮಾದರಿಯಾಗಿದೆ ಎಂದರು.


ವಾಣಿಯನ್/ಗಾಣಿಗ ಸಮುದಾಯ ಸೇವಾ ಸಂಘ ಪುತ್ತೂರು, ಶ್ರೀದೇವತಾ ಸಮಿತಿ ತಿಂಗಳಾಡಿ, ಶ್ರೀರಾಮ ಭಜನಾ ಮಂದಿರ ಸನ್ಯಾಸಿಗುಡ್ಡೆ, ಯುವರಂಗ ಕೆದಂಬಾಡಿ, ಶ್ರೀ ಅಯ್ಯಪ್ಪ ಭಜನಾ ಮಂದಿರ ಸ್ವಾಮಿನಗರ, ವಿಷ್ಣು ಯುವ ಶಕ್ತಿ ಬಳಗ ಮಜ್ಜಾರಡ್ಕ, ಹಿಂದೂ ಜಾಗರಣಾ ವೇದಿಕೆ ತ್ಯಾಗರಾಜ ನಗರ, ತಿಂಗಳಾಡಿ ಹಿ.ಪ್ರಾ ಶಾಲಾ ಹಿರಿಯ ವಿದ್ಯಾರ್ಥಿ ಸಂಘ, ಕೆದಂಬಾಡಿ ಗ್ರಾ.ಪಂ ಉಪಾಧ್ಯಕ್ಷೆ ಜಯಲಕ್ಷ್ಮೀ, ಕುಂಬ್ರ ವಿಶ್ವನಾಥ ರೈ, ಕುಂಬ್ರ ಜಯರಾಮ ಆಚಾರಿ, ವಿಠಲ ರೈ ತ್ಯಾಗರಾಜನಗರ, ಸತೀಶ್ ತ್ಯಾಗರಾಜ ನಗರ, ಈಶ ಶಿಕ್ಷಣ ಸಂಸ್ಥೆಯ ಗೋಪಾಲಕೃಷ್ಣ ಯಂ.ಎ., ದರ್ಬೆ ಗೂಡ್ಸ್ ವಾಹನ ಚಾಲಕ-ಮ್ಹಾಲಕ ಸಂಘ ದ ಅಧ್ಯಕ್ಷ ರಘುರಾಮ ಪಾಟಾಳಿ ಅನಂತನಡ್ಕ, ವಿಶ್ವನಾಥ ಪಾಟಾಳಿ ಅರಂತನಡ್ಕ, ಲಕ್ಷ್ಮೀಶರವರ ತಂಗಿ ರಶ್ಮಿ ಕಿರಣ, ಕೃಷ್ಣಪ್ಪ, ಲಿಂಗಪ್ಪ, ಸಂಜೀವ, ಉದಯ ಕುಮಾರ್ ಕಡಮಜಲು, ಹರ್ಷಿತ್, ಶರವು ಮಹಾಲಿಂಗ ಪಾಟಾಳಿ, ವಾಣಿಯನ್ ಗಾಣಿಗ ಸಮುದಾಯ ಸೇವಾ ಸಂಘದ ಸ್ಥಾಪಕ ಅಧ್ಯಕ್ಷ ತಿಮ್ಮಪ್ಪ ಪಾಟಾಳಿ ಕುಟುಂಬಸ್ಥರು, ಕುಡುಂಬಿಲ ಕುಟುಂಬಸ್ಥರು, ಅಲಂಕಾರು ಕುಟುಂಬಸ್ಥರು, ನಿವೃತ್ತ ಯೋಧ ಲಕ್ಷ್ಮೀಶರವರನ್ನು ಅಭಿನಂದಿಸಿ, ಗೌರವಿಸಿದರು.


ಸತ್ಯನಾರಾಯಣ ಕುಡುಂಬಿಲ ಹಾಗೂ ದಿನೇಶ್ ಕಡಮಜಲು ತಮ್ಮ ಕವನ ವಾಚನದೊಂದಿಗೆ ನಿವೃತ್ತ ಯೋಧನನ್ನು ಅಭಿನಂದಿಸಿದರು. ತಿಂಗಳಾಡಿ ದೇವತಾ ಸಮಿತಿಯ ಕೃಷ್ಣ ಭಟ್, ಅಂಗನವಾಡಿ ಶಿಕ್ಷಕಿ ತಾರಾ, ಅಯ್ಯಪ್ಪ ಭಜನಾ ಮಂದಿರ ಸ್ವಾಮಿನಗರ ಇದರ ಸತೀಶ್, ಹಿಂದೂ ಜಾಗರಣ ವೇದಿಕೆ ತ್ಯಾಗರಾಜ ನಗರದ ಅಶೋಕ್ ತ್ಯಾಗರಾಯನಗರ, ವಾಣಿಯನ್/ಗಾಣಿಗ ಸಮುದಾಯ ಸೇವಾ ಸಂಘದ ಕಾರ್ಯದರ್ಶಿ ಜಯಲಕ್ಷ್ಮಿ ಡಿ.ಎಸ್, ಸಂಘಟನಾ ಕಾರ್ಯದರ್ಶಿ ಮನೋಹರ್ ಮೊಟ್ಟೆತ್ತಡ್ಕ, ಸ್ಥಾಪಕ ಅಧ್ಯಕ್ಷ ತಿಮ್ಮಪ್ಪ ಪಾಟಾಳಿ ಮೊಟ್ಟೆತ್ತಡ್ಕ, ಮಾಜಿ ಅಧ್ಯಕ್ಷರಾದ ದಾಮೋದರ ಪಾಟಾಳಿ, ಸುಬ್ಬಪ್ಪ ಪಟ್ಟೆ, ಶಾರದಾ ಕೃಷ್ಣ, ನಾರಾಯಣ ಕುಕ್ಕುಪುಣಿ, ಈಶ ಶಿಕ್ಷಣ ಸಂಸ್ಥೆಯ ಗೋಪಾಲಕೃಷ್ಣ ಯಂ.ಎ., ದಿನೇಶ್ ಕಡಮಜಲು, ಜೇಸಿಐ ಮಾಜಿ ಅಧ್ಯಕ್ಷ ಮೋಹನ್, ಸನ್ಯಾಸಿ ಗುಡ್ಡೆ ಶ್ರೀ ರಾಮ ಭಜನಾ ಮಂದಿರದ ಕಾರ್ಯದರ್ಶಿ ಸಂತೋಷ್ ಕುಮಾರ್, ನಿವೃತ್ತ ಯೋಧ ವಿದ್ಯಾಧರ ಪಟ್ಟೆ, ಸಹೋದರ ವಿನಯ ಕುಮಾರ್ ಕಡಮಜಲು, ಅಜ್ಜ ಮಹಾಲಿಂಗ, ಸತೀಶ್ ಯೋಧರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ನಿವೃತ್ತ ಯೋಧ ಲಕ್ಷ್ಮೀಶರವರ ಕುಟುಂಬಸ್ಥರು, ಬಂಧುಗಳು ಸಾರ್ವಜನಿಕರು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಸೌಮ್ಯ ವಿನಯ್ ದೇಶ ಭಕ್ತಿಗೀತೆ ಹಾಡಿದರು. ದಿನೇಶ್ ಕಡಮಜಲು ಸ್ವಾಗತಿಸಿದರು. ವಾಣಿಯನ್/ಗಾಣಿಗ ಸಮುದಾಯ ಸೇವಾ ಸಂಘದ ಮಾಜಿ ಕಾರ್ಯದರ್ಶಿ ಮಹೇಶ್ ಆಲಂಕಾರು ಕಾರ್ಯಕ್ರಮ ನಿರೂಪಿಸಿದರು. ಸೌಮ್ಯ ವಿನಯ್ ಕಡಮಜಲು ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನೆರವೇರಿತು.

2007ರಲ್ಲಿ ಸೇನೆಗೆ ನೇಮಕಗೊಂಡು 18 ವರ್ಷಗಳ ಕಾಲ ದೇಶದ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ನಾನು ಸೇನೆಯಲ್ಲಿ ಸೇವೆ ಮಾಡಿದಕ್ಕಿಂತಲೂ ಹೆಚ್ಚು ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ನನ್ನ ಸೇವೆಗೆ ಪ್ರೇರಣೆಯಾಗಿತ್ತು. ಸೇವೆಯಲ್ಲಿರುವ ಸಂದರ್ಭದಲ್ಲಿ ಎಲ್ಲರೂ ಯೋಗಕ್ಷೇಮ ವಿಚಾರಿಸುತ್ತಿದ್ದು ನನಗೆ ಸಂತಸ ತಂದಿದೆ. ಸೇವೆಯಲ್ಲಿರುವಾಗ ಸಹಕರಿಸಿ, ಪ್ರೋತ್ಸಾಹಿಸಿದವರಿಗೂ ನಿವೃತ್ತಿ ಪಡೆದು ಆಗಮಿಸಿದಾಗ ಸ್ವಾಗತಿಸಿ, ಗೌರವಿಸಿದ ಪ್ರತಿಯೊಬ್ಬರಿಗೂ ನನ್ನ ಕೃತಜ್ಞತೆಗಳು.
-ಲಕ್ಷ್ಮೀಶ, ಗೌರವಾರ್ಪಣೆ ಪಡೆದ ನಿವೃತ್ತ ಯೋಧ

LEAVE A REPLY

Please enter your comment!
Please enter your name here