ಎಲೆಚುಕ್ಕಿ ರೋಗದ ಬಗ್ಗೆ ವಿಧಾನ ಪರಿಷತ್ ಕಲಾಪದಲ್ಲಿ ಧ್ವನಿ ಎತ್ತಿದ ಕಿಶೋರ್ ಕುಮಾರ್ ಬೊಟ್ಯಾಡಿ

0

ಪುತ್ತೂರು: ಎಲೆಚುಕ್ಕಿ ರೋಗದಲ್ಲಿ ಸುಳ್ಯ-ಪುತ್ತೂರು ಭಾಗದ ರೈತರು ಬೆಲೆ ನಾಶದಿಂದ ಹೈರಾಣಗಿದ್ದಾರೆ. ರೋಗಕ್ಕೆ ಸಮರ್ಪಕವಾಗಿ ಮದ್ದುಗಳು ತೋಟಗಾರಿಕೆ ಇಲಾಖೆಯಲ್ಲಿ ಸಿಗುತ್ತಿಲ್ಲ. ಪೋಷಕಾಂಶಗಳನ್ನು ಸರಿಯಾಗಿ ನೀಡುತ್ತಿಲ್ಲ. ರೈತ ಹೈರಾಣಾಗಿದ್ದಾನೆ. ಔಷಧಿಗಳ ಕೊರತೆಯಿದೆ, ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಬೇಕು. ಒಂದು ಎಕರೆಗೆ ಅರ್ಧ ಲೀಟರ್‌ ಔಷಧಿಯನ್ನು ಕೊಟ್ಟಿದಾರೆ ಅದು ಸಾಕಾಗುವುದಿಲ್ಲ. ಕೇಂದ್ರದಿಂದ 60% ಹಣ ಬಂದಿದೆ ಆದರೆ ಅದು ಇನ್ನೂ ರೈತರಿಗೆ ತಲುಪುತ್ತಿಲ್ಲ. ಕೇಂದ್ರದ ಹಣ ಬಂದಿದೆ ರಾಜ್ಯದಿಂದ ಹಣ ಬರುತ್ತಿಲ್ಲ. ಅದನ್ನು ಸೇರಿಸಿ ಕೊಡಬೇಕು ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಆಗ್ರಹಿಸಿದರು.

ರಾಜ್ಯದ ವಿಧಾನ ಮಂಡಲ ಅಧಿವೇಶನದಲ್ಲಿ ಮಾ.4ರಂದು ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಎಲೆ ಚುಕ್ಕಿ ರೋಗದ ಕುರಿತು ಸರ್ಕಾರದ ಗಮನಸೆಳೆದರು. ರಾಜ್ಯದಿಂದಲೂ ಅನುದಾನ ಶೀಘ್ರವಾಗಿ ಒದಗಿಸಬೇಕು ಈ ಸಮಸ್ಯೆಯನ್ನು ಬಗೆಹರಿಸಬೇಕು ಆಗ್ರಹಿಸಿದರು. ಶೀಲಿಂದ್ರ ಸಮರ್ಪಕವಾಗಿ ದೊರಕುತ್ತಿಲ್ಲ. ಗುಣ ಮಟ್ಟದ ಸುಣ್ಣ ಸಿಗುತ್ತಿಲ್ಲ. ಸರಕಾರ ರೋಗಗಕ್ಕೆ ಔಷಧಿ ಕಂಡುಕೊಳ್ಳಲು ಸುಮಾರು 50 ಲಕ್ಷ ಖರ್ಚು ಮಾಡಲಾಗಿದೆ. ಆದರೆ ವರದಿ ಇನ್ನೂ ಬಂದಿಲ್ಲ. ಪರ್ಯಾಯ ಬೆಳೆಗೆ ಕಾಫಿ ಸೂಚಿಸಿದ್ದು ಇನ್ನೂ ಶಕ್ತಿ ತುಂಬು ಕಾರ್ಯವಾಗಿಲ್ಲ. ಕೇಂದ್ರದಿಂದ ಅನುದಾನ ಬಂದರು ರಾಜ್ಯ ಸರಕಾರ ಅನುದಾನ ಮಂಜೂರು ಮಾಡಲು ತಡವರಿಸುತ್ತಿದೆ.ಸರ್ಕಾರ ರೈತರ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದರು.

ಕೇಂದ್ರದಿಂದ ಅನುದಾನ ಬಂದಿದ್ದು ರಾಜ್ಯದ ಅನುದಾನ ಜೋಡಿಕರಣ ಪ್ರಕ್ರಿಯೆ ಮಾಡಲಾಗುತ್ತಿದ್ದು ಶೀಘ್ರವೇ ನೀಡಲು ತಯಾರಿ ಮಾಡುತ್ತಿದ್ದೇವೆ. ಒಂದು ಹೆಕ್ಟೇರ್ ಗೆ 1,200 ರೂ. ನೀಡುತ್ತಿದ್ದು ಅದು ಕಡಿಮೆ ಆಗುತ್ತದೆ ಎಂದು ಕೇಂದ್ರಕ್ಕೆ ಹೆಚ್ಚುವರಿ ಮಾಡುವಂತೆ ಮನವಿ ಕಳುಹಿಸಲಾಗಿದೆ ಎಂದು ತೋಟಗಾರಿಕಾ ಇಲಾಖಾ ಸಚಿವರು ಉತ್ತರಿಸಿದರು.

LEAVE A REPLY

Please enter your comment!
Please enter your name here