ಪಲಾರ ರೆಸ್ಟೋರೆಂಟ್ ಇನ್ನು ಬೆಳಿಗ್ಗೆ 8 ಗಂಟೆಯಿಂದಲೇ ಓಪನ್!
ಪುತ್ತೂರು: ಹತ್ತೂರು ಒಡೆಯನ ನಾಡಿನಲ್ಲಿ ಅತಿಥಿ ಸತ್ಕಾರಕ್ಕೊಂದು ಹೊಸ ಭಾಷ್ಯವನ್ನು ಬರೆದಿರುವ ಮಹಾವೀರ ವೆಂಚರ್ಸ್ – ಹೊಟೇಲ್ ಮತ್ತು ರೆಸಾರ್ಟ್, ಇವರ ಮಾಲಕತ್ವದಲ್ಲಿ ಪುತ್ತೂರಿನ ಹೃದಯ ಭಾಗದಲ್ಲಿ ವಿಶಾಲ ಮತ್ತು ಸುಸಜ್ಜಿತ ಮಾದರಿಯಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಪಲಾರ – ಶುದ್ಧ ಸಸ್ಯಹಾರಿ ರೆಸ್ಟೋರೆಂಟ್ ಇದೀಗ ತನ್ನ ಗ್ರಾಹಕರಿಗೆ ಮತ್ತು ಈ ಭಾಗದ ಫುಡ್ಡಿಗಳಿಗೊಂದು ಗುಡ್ ನ್ಯೂಸನ್ನು ಕೊಡುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಕಾರ್ಯಾರಂಭ ಮಾಡಿದ್ದ ದಿನದಿಂದ ಪಲಾರ ರೆಸ್ಟೋರೆಂಟ್ ಮಧ್ಯಾಹ್ನ 12.೦೦ ಯಿಂದ ರಾತ್ರಿ 9.30ರವರೆಗೆ ಗ್ರಾಹಕರಿಗಾಗಿ ತೆರದಿರುತ್ತಿತ್ತು. ಆದರೆ ಇದೀಗ ಗ್ರಾಹಕರ ಅಪೇಕ್ಷೆಯ ಮೇರೆಗೆ ಮಾ.07ರಿಂದ ಪಲಾರ ರೆಸ್ಟೋರೆಂಟ್ ಬೆಳಿಗ್ಗೆ 8.೦೦ರಿಂದಲೇ ಓಪನ್ ಆಗಲಿದೆ. ಹಾಗಾಗಿ ಇನ್ನು ನೀವು ’ಪಲಾರ’ದಲ್ಲೇ ನಿಮ್ಮ ಬೆಳಿಗ್ಗಿನ ಫಲಾಹಾರ ಅಥವಾ ಬ್ರೇಕ್ ಫಾಸ್ಟ್ ಮಾಡಬಹುದು!
ಪಲಾರದ ಬಗ್ಗೆ…:
ಪುತ್ತೂರು ಮುಖ್ಯ ರಸ್ತೆಯಲ್ಲಿ, ಮಹಾವೀರ ಆಸ್ಪತ್ರೆ ಹತ್ತಿರದಲ್ಲೇ ಇರುವ ಮಹಾವೀರ ಮಾಲ್‌ನ ತಳ ಮಹಡಿಯಲ್ಲಿ ವಿಶಾಲವಾದ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಪಲಾರ ಹೊಟೇಲ್, ಕುಟುಂಬ ಸ್ನೇಹಿತರ ಸಮೇತ ಒಂದೊಳ್ಳೆ ವಾತಾವರಣದಲ್ಲಿ ಕೂಲಾಗಿ ನಿಮ್ಮಿಷ್ಟದ ಆಹಾರವನ್ನು ಸವಿಯಬೇಕೆಂದು ಬಯಸುವವರಿಗೆ ಪ್ರಶಸ್ತವಾದ ಸ್ಥಳವಾಗಿದೆ. ಸೌತ್ ಇಂಡಿಯನ್, ನಾರ್ತ್ ಇಂಡಿಯನ್, ತಂದೂರ್, ಇಂಡೋ-ಚೈನೀಸ್, ವಿವಿಧ ಬಗೆಯ ಜ್ಯೂಸ್‌ಗಳು, ಸ್ಮೂತಿಗಳು, ಮಿಲ್ಕ್ ಶೇಕ್‌ಗಳು, ಮಾಕ್ ಟೈಲ್ಸ್, ಫ್ರೋಝನ್ ಡೆಸರ್ಟ್‌ಗಳ ಸಹಿತ ನಿಮ್ಮಿಷ್ಟದ ರುಚಿ-ಶುಚಿಯಾದ ಪುಡ್ ವೆರೈಟಿಗಳು ಇಲ್ಲಿ ಲಭ್ಯ. ಇನ್ನು ಇಲ್ಲಿ ನೀವು ಟೇಬಲ್‌ನಲ್ಲಿ ಕೂತು ಯಾವುದೇ ಫುಡ್ ಆರ್ಡರ್ ಮಾಡಿದ ತಕ್ಷಣ ನಿಮಗೆ ಕೊಡುವ ಒಳ್ಳೆ ಮೆಣಸಿನಿಂದ ತಯಾರಿಸಿದ ಹದ ಬಿಸಿಯ ಪಾನೀಯ ನಿಮ್ಮ ಫುಡ್ ಸವಿಯುವ ಮೂಡನ್ನು ಇನ್ನಷ್ಟು ಬೆಚ್ಚಗಾಗಿಸುತ್ತದೆ!
ಎಸಿ ಮತ್ತು ನಾನ್-ಎ.ಸಿ. ಸಹಿತವಾಗಿರುವ ಇಲ್ಲಿನ ನಿರಾಳ ವಾತಾವರಣ, ನಗುಮೊಗದಿಂದ ನಿಮಗೆ ಶುಚಿಕರವಾಗಿ ರುಚಿಕರ ಫುಡ್‌ಗಳನ್ನು ಸರ್ವ್ ಮಾಡುವ ಸಿಬ್ಬಂದಿ ವರ್ಗ ಇವೆಲ್ಲವೂ ಪಲಾರವನ್ನು ನಿಮ್ಮ ಪ್ರಥಮ ಆಯ್ಕೆಯನ್ನಾಗಿ ಮಾಡುವಲ್ಲಿ ಸಹಕಾರಿಯಾಗಿದೆ.
ಪಾರ್ಕಿಂಗ್ ಟೆನ್ಷನ್ ಬಿಟ್ಟು ಫುಡ್ ಸವಿಯಿರಿ!
ಯಾವುದೇ ನಗರ ಭಾಗದಲ್ಲಿ ಹೊಟೇಲ್‌ಗೆ ಹೋಗುವುದೆಂದರೆ ಪಾರ್ಕಿಂಗ್‌ನದ್ದೇ ಒಂದು ದೊಡ್ಡ ತಲೆನೋವು. ಆದರೆ ಪಲಾರದಲ್ಲಿ ಫುಡ್ ಸವಿಯಲೆಂದು ನೀವು ಫ್ಯಾಮಿಲಿ ಸಹಿತವಾಗಿ ಬಂದರೆ ನಿಮ್ಮ ವಾಹನಗಳನ್ನು ಯಾವುದೇ ಟೆನ್ಷನ್ ಇಲ್ಲದೇ ಮಹಾವೀರ ವೆಂಚರ್ಸ್‌ನ ವಿಶಾಲ ಪಾರ್ಕಿಂಗ್ ಆವರಣದಲ್ಲಿ ಪಾರ್ಕ್ ಮಾಡಬಹುದು. ಇಲ್ಲಿ ಸುಮಾರು 30ಕ್ಕೂ ಮಿಕ್ಕಿ ಕಾರುಗಳನ್ನು ಪಾರ್ಕ್ ಮಾಡಲು ವ್ಯವಸ್ಥೆಯಿದೆ. ಮಾತ್ರವಲ್ಲದೇ ನಿಮ್ಮದು ಎಲೆಕ್ಟ್ರಿಕ್ ಕಾರಾಗಿದ್ದಲ್ಲಿ ಅದನ್ನು ಚಾರ್ಜ್ ಮಾಡಲು ಸಾಕೆಟ್‌ಗಳೂ ಸಹ ಇಲ್ಲಿ ಲಭ್ಯ. ನೀವು ಫುಡ್ ಸೇವಿಸಿ ಬರುವಷ್ಟರಲ್ಲಿ ನಿಮ್ಮ ವೆಹಿಕಲ್ ಸಹ ಹೊಟ್ಟೆ ಭರ್ತಿಮಾಡ್ಕೊಂಡು ಮುಂದಿನ ಜರ್ನಿಗೆ ರೆಡಿಯಾಗಿರ್ತದೆ!
ಲಾಡ್ಜಿಂಗ್ ಸೌಲಭ್ಯ, ಎಸಿ ಬಾಂಕ್ವೆಟ್ ಹಾಲ್, ಸೌಂಡಿಂಗ್ ಸಿಸ್ಟಮ್‌ನೊಂದಿಗೆ ರೂಫ್ ಟಾಪ್ ಗಾರ್ಡನ್ ಡೈನಿಂಗ್ ಹಾಲ್, ಫುಡ್ ಕೌಂಟರ್‌ಗಳ ವ್ಯವಸ್ಥೆ, ವಿಶೇಷ ಅನುಭವ ಪಡೆಯುವ ಪುತ್ತೂರಿನ ಏಕೈಕ ಹಾಲ್, ಕೆಟರಿಂಗ್ ಸೌಲಭ್ಯಗಳು ಸಹ ಒಂದೇ ಬಿಲ್ಡಿಂಗ್‌ನಲ್ಲಿ ನಿಮಗೆ ಲಭ್ಯವಿದೆ. ಪಲಾರದಿಂದ ನಿಮ್ಮಿಷ್ಟದ ಫುಡ್‌ಗಳನ್ನು ಇದೀಗ ನೀವು ಝೊಮ್ಯಾಟೊ ಮೂಲಕ ಆನ್ ಲೈನ್ ಆರ್ಡರ್ ಮಾಡ್ಕೊಂಡು ನೀವಿರುವಲ್ಲಿಯೇ ಸವಿಯಬಹುದು.
ಟೇಬಲ್ ರಿಸರ್ವೇಷನ್ ಸೌಲಭ್ಯವೂ ಲಭ್ಯವಿದ್ದು 09686895783 ಗೆ ಕರೆ ಮಾಡುವ ಮೂಲಕ ನೀವು ಈ ಸೇವೆಯನ್ನು ಪಡೆದುಕೊಳ್ಳಬಹುದು.
ಒಟ್ಟಿನಲ್ಲಿ ಪುತ್ತೂರಿಗೆ ಬರುವವರು, ಪುತ್ತೂರಿನಲ್ಲೇ ಇರುವವರು, ಪುತ್ತೂರಿಗೆ ಬಂದು ಹೋಗುವವರು.. ಒಂದೊಳ್ಳೆ ವೆಜ್ ಹೊಟೇಲ್ ಟ್ರೈ ಮಾಡ್ಬೇಕೆಂದಿದ್ದಲ್ಲಿ ನಿಮ್ಮ ಆಯ್ಕೆ ’ಪಲಾರ’ ಆಗಿದ್ರೆ ನಿಮ್ಮ ಟೇಸ್ಟ್‌ಗೆ ಇಲ್ಲಿ ಯಾವುದೇ ಮೋಸವಾಗದು!