ಉಪ್ಪಿನಂಗಡಿ: ʼಸಂಗೀತ ಗಾನ ಸಂಭ್ರಮʼದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಉಪ್ಪಿನಂಗಡಿ: ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಆರಾಟ ಮಹೋತ್ಸವದ ಪ್ರಯುಕ್ತ ʼಗೆಳೆಯರು 94 ಉಪ್ಪಿನಂಗಡಿʼ ಅರ್ಪಿಸುವʼ ಸಂಗೀತ ಗಾನ ಸಂಭ್ರಮ ಶಬರಿ ಮ್ಯೂಸಿಕಲ್ಸ್ ಮಂಗಳೂರು ತಂಡದವರಿಂದ ಮಾ.17ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ಗೆಳೆಯರು 94 ಇದರ ಅಧ್ಯಕ್ಷ ರಾಧಾಕೃಷ್ಣ ಬೊಳ್ಳಾವು ಮತ್ತು ಕಾರ್ಯದರ್ಶಿ ಅಚಲ್ ಉಬರಡ್ಕ ಇವರ ನೇತೃತ್ವದಲ್ಲಿ ಮಾ.04ರಂದು ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಗಣ್ಯರು ಹಾಗೂ ಕಲಾಪೋಷಕ ಸದಸ್ಯರಾದ ಯು.ಜಿ.ರಾಧ, ವೆಂಕಟೇಶ ರಾವ್, ಕಂಗ್ವೆ ವಿಶ್ವನಾಥ ಶೆಟ್ಟಿ, ಜಯಂತ ಪೋರೋಳಿ, ಗಂಗಾಧರ ಟೈಲರ್, ಕೆ.ಸುಧಾಕರ ಶೆಟ್ಟಿ, ಕೆ.ಜಗದೀಶ ಶೆಟ್ಟಿ, ಹರೀಶ ನಾಯಕ್ ನಟ್ಟಿಬೈಲು, ಗಿರೀಶ್ ದೇವಾಡಿಗ, ಗಣೇಶ್ ಆಚಾರ್ಯ ಭಾವನಾ ಕಲಾ ಆರ್ಟ್ಸ್, ವಿನೀತ್ ಶಗ್ರಿತ್ತಾಯ, ಪುಷ್ಪಕರ ನಾಯಕ್ ಕಟ್ಟೆಚ್ಚಾರು, ಲೋಕೇಶ್ ಆಚಾರ್ಯ ಸರಪಾಡಿ, ಚಂದ್ರಶೇಖರ ಶೆಟ್ಟಿ, ಅಶೋಕ್ ಶೆಟ್ಟಿ ಪಡ್ಯೊಟ್ಟು, ರವೀಶ ಎಚ್ ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here