ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಬೆಳ್ಳಾರೆ ವಲಯದ ಕಚೇರಿ ಉದ್ಘಾಟನೆ
ಬೆಳ್ಳಾರೆ : ನಾವು ಆನ್ಲೈನ್ ,ಆಫ್ ಲೈನ್ ಬಗ್ಗೆ ಅರಿತಿದ್ದೇವೆ ಆದರೆ ಲೈಫ್ ಲೈನ್ ಮರೆತಿದ್ದೇವೆ.ನಾವು ವೇಗದ ಯುಗದಲ್ಲಿ ನೈತಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ.ಈ ನಿಟ್ಟಿನಲ್ಲಿ ನಾವು ಸಂಸ್ಕಾರಯುತ ಜೀವನ ನಡೆಸುವುದು ಅವಶ್ಯಕ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಬೆಳ್ಳಾರೆ ಹೆಗ್ಡೆ ಸಂಕೀರ್ಣದಲ್ಲಿ ಸ್ಥಳಾಂತರಗೊಂಡ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಬೆಳ್ಳಾರೆ ವಲಯದ ಕಚೇರಿಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಒಡಿಯೂರು ಗ್ರಾಮ ವಿಕಾಸ ಯೋಜನೆಯ ಮೂಲಕ ಸ್ವಸಹಾಯ ಸಂಘಗಳ ರಚನೆಯ ಮೂಲಕ ಗ್ರಾಮೀಣ ಜನತೆ ಆರ್ಥಿಕ ಸಬಲರಾಗುವುದರ ಜತೆಗೆ ಸಂಘಟಿತ ಮನೋಭಾವನೆ ಬೆಳೆಸಿಕೊಳ್ಳಲು,ಸಮಾಜಮುಖಿಯಾಗಿ ಕೆಲಸ ನಿರ್ವಹಿಸಲು ಪೂರಕವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ, ಒಡಿಯೂರು ಶ್ರೀ ವಿ.ವಿ.ಸೌ.ಸಹಕಾರಿಯ ಸುಳ್ಯ ಶಾಖಾ ವ್ಯವಸ್ಥಾಪಕಿ ಸಂತೋಷ್ ರೈ, ಗ್ರಾಮ ವಿಕಾಸ ಯೋಜನೆಯ ಸುಳ್ಯ ತಾಲೂಕು ಮೇಲ್ವಿಚಾರಕಿ ಗೀತಾ ನೆಟ್ಟಾರು , ಒಡಿಯೂರು ಗ್ರಾಮ ವಿಕಾಸ ಯೋಜನೆಯ ಸುಳ್ಯ ತಾಲೂಕು ಘಟಸಮಿತಿ ಅಧ್ಯಕ್ಷ ಸುಹಾಸ್ ಅಲೆಕ್ಕಾಡಿ, ಕಾರ್ಯದರ್ಶಿ ಸಂದೀಪ್ ಕುಮಾರ್, ಬೆಳ್ಳಾರೆ ವಲಯ ಅಧ್ಯಕ್ಷ ಲೋಕೇಶ್ ನೆಟ್ಟಾರು, ಕೊಡಿಯಾಲ ಘಟಸಮಿತಿ ಅಧ್ಯಕ್ಷ ಸಚಿನ್ ಪಂಜಿಗಾರು, ಪಾಲ್ತಾಡು ಘಟಸಮಿತಿ ಅಧ್ಯಕ್ಷ ಪ್ರವೀಣ್ ಚೆನ್ನಾವರ, ಹೆಗ್ಡೆ ಸಂಕೀರ್ಣದ ಮಾಲಕರಾದ ಉಮೇಶ್ ಹೆಗ್ಡೆ, ಬೆಳ್ಳಾರೆ ವಲಯದ ಸೇವಾದೀಕ್ಷೀತರು ಹಾಗೂ ಐವರ್ನಾಡು, ಕೊಡಿಯಾಲ, ಪೆರುವಾಜೆ, ಬೆಳ್ಳಾರೆ, ಪಾಲ್ತಾಡಿ ಗ್ರಾಮದ ಪದಾಧಿಕಾರಿಗಳು ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಸುಳ್ಯ ತಾಲೂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗ್ರಾಮ ವಿಕಾಸ ಯೋಜನೆಯ ಬೆಳ್ಳಾರೆ ವಲಯ ಸಂಯೋಜಕಿ ಶೀಭಾ ಎಸ್ ರೈ ಸ್ವಾಗತಿಸಿ, ವಂದಿಸಿದರು.