ಈಶ್ವರಮಂಗಲ:ಹನುಮಗಿರಿ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾ.5ರಂದು ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಜನಿಸಿದ ಮಕ್ಕಳ ಸಾಮೂಹಿಕ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಪೋಷಕರಾದ ಪ್ರಿಯ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಹುಟ್ಟುಹಬ್ಬ ಆಚರಿಸಿದ ಎಲ್ಲಾ ಮಕ್ಕಳಿಗೂ ವೇದಿಕೆಯಲ್ಲಿ ಉಪಸ್ಥಿತರಿದ್ದ ಪೋಷಕರಾದ ಶೈಲಾ ಮತ್ತು ವೇಣುಗೋಪಾಲ್ ರವರು ಶುಭ ಹಾರೈಸಿದರು.

ಶಿಕ್ಷಕಿಯರು ಮಕ್ಕಳಿಗೆ ಆರತಿ ಬೆಳಗಿ ,ತಿಲಕ ಇಟ್ಟು ಕಿರು ಕಾಣಿಕೆಯನ್ನು ನೀಡಲಾಯಿತು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಕೆ ಶಾಮಣ್ಣ,ಮುಖ್ಯ ಗುರು ಸೌಮ್ಯ ಎ ಹಾಗೂ ಲತಾ ಡಿ ಕೆ ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಕಾವ್ಯ ಜಿ ರಾವ್ ಕಾರ್ಯಕ್ರಮ ನಿರೂಪಣೆ ಮಾಡಿದರು.