ಪುತ್ತೂರು: ಬುಸ್ತಾನು ತ್ವಲಬಾ ಓಲ್ಡ್ ಸ್ಟೂಡೆಂಟ್ಸ್ ಆರ್ಗನೈಝೇಷನ್ ಕೂರತ್ ಇದರ ಪೂರ್ವ ವಿದ್ಯಾರ್ಥಿ ಸಂಗಮ ಹಾಗೂ ವಾರ್ಷಿಕ ಮಹಾಸಭೆ ಉಳ್ಳಾಲ ಸಯ್ಯಿದ್ ಮದನಿ ಹಾಲ್‌ನಲ್ಲಿ ನಡೆಯಿತು.

ಕೂರತ್ ಮುದರ್ರಿಸ್ ಅಬ್ದುಲ್ ಖಾದರ್ ಹನೀಫಿ ಕಾರ್ಯಕ್ರಮಕ್ಕೆ ನೇತೃತ್ವ ನೀಡಿ ವಿಷಯ ಮಂಡನೆ ನಡೆಸಿದರು. ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಉಳ್ಳಾಲ ಕಾರ್ಯಕ್ರಮ ಉದ್ಘಾಟಿಸಿದರು ಸಯ್ಯಿದ್ ಮದನಿ ದರ್ಗಾ ಪ್ರ.ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಆಶಂಸ ಭಾಷಣ ನಡೆಸಿದರು. ನಂತರ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ನೌಫಲ್ ಜೌಹರಿ ಫಜೀರ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುನ್ನಾಸಿರ್ ಫಾಳಿಲಿ ಕೂರತ್ ಆಯ್ಕೆಯಾದರು. ವರ್ಕಿಂಗ್ ಸೆಕ್ರೆಟರಿಯಾಗಿ ಮುಸ್ತಫಾ ಝುಹ್ರೀ ವಿಟ್ಲ, ಫೈನಾನ್ಸ್ ಸೆಕ್ರೆಟರಿಯಾಗಿ ಅಮೀನ್ ಸಖಾಫಿ ಬಂಟ್ವಾಳ, ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ಅಬೂಬಕರ್ ಫಾಳಿಲಿ ಕಾಜೂರು, ಹಾಗೂ ನೌಫಲ್ ಅಹ್ಸನಿ ಕರ್ಪಾಡಿ ಜೊತೆ ಕಾರ್ಯದರ್ಶಿಗಳಾಗಿ ಅಬ್ದುರ್ರವೂಫ್ ಝುಹ್ರೀ ಕುಂಡಾರ್ ಹಾಗೂ ಶಮೀಮ್ ಸಅದಿ ಪಳ್ಳತ್ತೂರು ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಿನಾನ್ ಮಿಸ್ಬಾಹಿ ಬೆದ್ರೋಡಿ, ಬಾತಿಶ್ ಸಖಾಫಿ ನರಿಮೊಗರು, ನುಹ್ಮಾನ್ ಮದನಿ ಫಜೀರ್, ಮಿದ್ಲಾಜ್ ಜೌಹರಿ ಕೂರತ್ ಆಯ್ಕೆಯಾದರು.