ಕೆಯ್ಯೂರು: ಷಣ್ಮುಖ ಪ್ರೆಂಡ್ಸ್ ಪಾಂಬಾರು ವತಿಯಿಂದ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಕೊಳ್ತಿಗೆ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ, ರಕ್ತದೊತ್ತಡ, ಮಧುಮೇಹ ತಪಾಸಣೆ ಮತ್ತು ಸನ್ಮಾನ ಕಾರ್ಯಕ್ರಮವು ಗ್ರಾಮ ಪಂಚಾಯತ್ ಸಮುದಾಯ ಭವನ ಪೆರ್ಲಂಪಾಡಿಯಲ್ಲಿ ಮಾ.9ರಂದು ನಡೆಯಲಿದೆ ಎಂದು ಷಣ್ಮುಖ ಫ್ರೆಂಡ್ಸ್ ಪಾಂಬಾರು ಅಧ್ಯಕ್ಷ ಚಿನ್ನಪ್ಪ ಕೆರೆಮೂಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.