ಪುತ್ತೂರು: ಭಾರತೀಯ ಭೂ ಸೇನೆಯ ಬಿಹಾರದ ತರಬೇತಿ ಕೇಂದ್ರದಲ್ಲಿ ಅಧಿಕಾರಿ ತರಬೇತಿ ಮುಗಿಸಿ ಭಾರತೀಯ ಭೂ ಸೇನೆಯ ಇನ್ಫ್ಯಾಂಟ್ರೀ ವಿಭಾಗದ ಲೆಫ್ಟಿನೆಂಟ್ ಹುದ್ದೆ ಅಲಂಕರಿಸಿರುವ ಸುರತ್ಕಲ್ ಅಗರಮೇಲು ನಿವಾಸಿ ಆಕಾಶ್ ಆರ್. ಅವರು ಮಾ.೯ರಂದು ಬೆಳಿಗ್ಗೆ ೭ ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಈ ವೇಳೆ ರಾಷ್ಟ್ರಭಕ್ತ ನಾಗರಿಕ ವೇದಿಕೆ ಸುರತ್ಕಲ್ ಇದರ ನೇತೃತ್ವದಲ್ಲಿ ಆಕಾಶ್ ಆರ್. ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡು ತೆರೆದ ವಾಹನದಲ್ಲಿ ಮೆರವಣಿಗೆ ಮತ್ತು ವಾಹನ ಜಾಥಾದ ಮೂಲಕ ಸುರತ್ಕಲ್‌ಗೆ ಕರೆದುಕೊಂಡು ಹೋಗಿ ಸ್ವಾಗತಿಸುವ ಕಾರ್ಯಕ್ರಮ ನಡೆಯಲಿದೆ. ಆಕಾಶ್ ಆರ್. ಅವರು ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಸಮೀಪದ ಉರುವ ನಿವಾಸಿಗಳಾಗಿದ್ದು ಸುರತ್ಕಲ್‌ನಲ್ಲಿ ಉದ್ಯಮಿಯಾಗಿರುವ ರತ್ನಾಕರ ಮತ್ತು ಇನ್ಸೂರೆನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಪ್ರಮೀಳಾ ಅವರ ಪುತ್ರರಾಗಿದ್ದು ಮಂಗಳೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದರು.
Home ಇತ್ತೀಚಿನ ಸುದ್ದಿಗಳು ಭಾರತೀಯ ಭೂಸೇನೆಯ ಇನ್ಫ್ಯಾಂಟ್ರೀ ವಿಭಾಗದ ಲೆಫ್ಟಿನೆಂಟ್ ಹುದ್ದೆ ಅಲಂಕರಿಸಿರುವ ಆಕಾಶ್ ಆರ್.ಗೆ ಇಂದು ಮಂಗಳೂರಿನಲ್ಲಿ ಸ್ವಾಗತ