ನೆಲ್ಯಾಡಿ: ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯ ಬಿಷಪ್ ಪೋಳಿಕಾರ್ಪೋಸ್ ಕಿಂಡರ್ ಗಾರ್ಟನ್‌ನಲ್ಲಿ ಯು.ಕೆ.ಜಿ ಪುಟಾಣಿಗಳ ಪದವಿ ಪ್ರಧಾನ ಸಮಾರಂಭ ಇತ್ತೀಚೆಗೆ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ನೆಲ್ಯಾಡಿ ಹೃದಯಾರಮ್ ಮೈಂಡ್ ಕೇರ್ ಮತ್ತು ಕೌನ್ಸೆಲಿಂಗ್ ಸೆಂಟರ್‌ನ ಕೌನ್ಸಿಲರ್ ಹಾಗೂ ಪಿಸಿಯೋಥೆರಫಿಸ್ಟ್ ಸಿ|ಆಲ್ಫೀ ಜೋಸೆಫ್‌ರವರು ಮಾತಾನಾಡಿ, ಕುಟುಂಬ ಪ್ರಥಮ ಶಾಲೆಯಾಗಬೇಕು. ಯಾವ ಮನೆಯಲ್ಲಿ ಹೆತ್ತವರು,ಪೋಷಕರು ಮಗುವಿನ ಜೊತೆ ಸಮಯವನ್ನು ಕಳೆಯುತ್ತಾರೋ ಆ ಮಗು ಎಂದೂ ಹೆತ್ತವರನ್ನು ಬಿಟ್ಟು ಹೋಗುವುದಿಲ್ಲ. ಕೆಟ್ಟ ದಾರಿಯನ್ನೂ ತುಳಿಯುವುದಿಲ್ಲ. ಮಗು ಶಾಲೆಯಲ್ಲಿ ಗೆಳೆಯರ ಜೊತೆ ಬೆರೆತಾಗ ಮನಸ್ಸು ವಿಶಾಲವಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್‌ರವರು ಮಾತನಾಡಿ, ತಪ್ಪನ್ನು ತಿದ್ದುವ ಕೆಲಸ ಶಿಕ್ಷಕರದ್ದಾಗಬೇಕು. ಮಗು ತಪ್ಪನ್ನು ತಿದ್ದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಶಿಲೆ ಒಂದು ಸುಂದರ ಶಿಲ್ಪವಾಗಬೇಕಾದರೆ ಶಿಲ್ಪಿಯ ಉಳಿ ಪೆಟ್ಟು ತಿಂದರಷ್ಟೇ ಸಾಧ್ಯ ಎಂಬುದನ್ನು ತಿಳಿದುಕೊಳ್ಳಬೇಕೆಂದು ಹೇಳಿದರು.

ಸಂಸ್ಥೆಯ ಆಡಳಿತಾಧಿಕಾರಿ ಜಾನ್ ಕೆ.ಕೆ, ಸೈಂಟ್ ಆಂಟನೀಸ್ ಪ್ರೌಢಶಾಲಾ ಮುಖ್ಯಗುರು ಶ್ರೀಧರ ಗೌಡ ಶುಭ ಹಾರೈಸಿದರು. ವೇದಿಕೆಯಲ್ಲಿ ಸಿ| ಬ್ಲೆಸ್ಸಿ, ಬಿಷಪ್ ಪೋಳಿಕಾರ್ಪೋಸ್ ಆಂಗ್ಲಮಾಧ್ಯಮ ಶಾಲಾ ಮುಖ್ಯಗುರು ಯಶೋಧರ, ಕೆ.ಜಿ ವಿಭಾಗದ ಮುಖ್ಯಸ್ಥೆ ವಿನೀತಾ ತಂಗಚ್ಛನ್ ಉಪಸ್ಥಿತರಿದ್ದರು. ಬಳಿಕ ಯು.ಕೆ.ಜಿ ಪುಟಾಣಿಗಳಿಗೆ ಯು.ಕೆ.ಜಿ ಪದವಿ ಪ್ರಮಾಣ ಪತ್ರ ವಿತರಿಸಲಾಯಿತು.
ಶಿಕ್ಷಕಿ ಪ್ರಜ್ವಿತಾ ಸ್ವಾಗತಿಸಿ, ಶಿಕ್ಷಕಿ ರಮ್ಯಾ ವಂದಿಸಿದರು. ಶಿಕ್ಷಕಿ ದಿವ್ಯಾ ನಿರೂಪಿಸಿದರು. ಪೋಷಕರು, ಸಂಸ್ಥೆಯ ಸಿಬ್ಬಂದಿವರ್ಗ,ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
