ಪುತ್ತೂರು: ತಾವು ಬೆಳೆದ ಉತ್ಪನ್ನಗಳನ್ನು ಮಳೆಗಾಲದಲ್ಲಿ ಒಣಗಿಸಲು ರೈತರು ಪಡುವ ಸಂಕಷ್ಟ ಹೇಳತೀರದು. ಇಲ್ಲೊಬ್ಬ ವಿದ್ಯಾರ್ಥಿ ರೈತರ ಸಂಕಷ್ಟಕ್ಕೆ ನೆರವಾಗುವ ನಿಟ್ಟಿನಲ್ಲಿ ಹೊಸ ಯಂತ್ರವೊಂದನ್ನು ಆವಿಷ್ಕಾರ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಕುಂತೂರು ಮಾರ್ ಇವಾನಿಯೋಸ್ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಅವಿಶ್ ಗೌಡ ಪಿ.ಬಿ. ರೈತರಿಗೆ ಉಪಯೋಗವಾಗುವಂತಹ ಯಂತ್ರ ಆವಿಷ್ಕಾರ ಮಾಡಿ ಶಿಕ್ಷಕರ ಮತ್ತು ಪೋಷಕರಿಂದ ಮೆಚ್ಚುಗೆ ಪಡೆದಿದ್ದಾರೆ. ಆಟೋಮ್ಯಾಟಿಕ್ ಆಗಿ ಚಾಲನೆಗೊಳ್ಳುವ ಈ ಯಂತ್ರ ಮಳೆಗಾಲದಲ್ಲಿ ಮಳೆ ಬಂದಾಗ ಅಂಗಳಕ್ಕೆ ಹೊದಿಕೆ ಹಾಸುತ್ತದೆ. ಮಳೆ ನಿಂತಾಗ ಅದರಷ್ಟಕ್ಕೆ ಮಡಚಿಕೊಂಡು ಕಾರ್ಯ ನಿರ್ವಹಿಸುತ್ತದೆ. ರೈತರು ಮಳೆಗಾಲದಲ್ಲಿ ತಾವು ಬೆಳೆದ ಉತ್ಪನ್ನಗಳನ್ನು ಒಣಗಿಸುತ್ತಿರುವಾಗ ಮಳೆಯಿಂದ ರಕ್ಷಿಸಲು ಈ ನೂತನ ಸಂಶೋಧನೆ ತುಂಬಾ ಪ್ರಯೋಜನಕಾರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈತ ಬಲ್ಯ ನಿವಾಸಿ ಬಿ.ಎಂ.ಪೂರ್ಣೇಶ್ ಗೌಡ ಬಾಬ್ಲುಬೆಟ್ಟು ಹಾಗೂ ಉಷಾ ಪಿ., ದಂಪತಿ ಪುತ್ರ.
Home ಇತ್ತೀಚಿನ ಸುದ್ದಿಗಳು ಒಣಗಲು ಹಾಕಿದ ಕೃಷಿ ಉತ್ಪನ್ನಗಳಿಗೆ ಮಳೆಯಿಂದ ರಕ್ಷಣೆ – ಕುಂತೂರು ಮಾರ್ ಇವಾನಿಯೋಸ್ ಆ.ಮಾ.ಶಾಲಾ ವಿದ್ಯಾರ್ಥಿಯಿಂದ...