ರಾಮಕುಂಜ: ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಶ್ರೀ ದೇವಳದ ಅಶ್ವತ್ಥ ವೃಕ್ಷದ ಪ್ರತಿಷ್ಠೆ, ಉಪನಯನ, ವಿವಾಹಾದಿ ಸಂಸ್ಕಾರಗಳು ಮಾ.15 ಮತ್ತು 16ರಂದು ನಡೆಯಲಿದೆ.
ಮಾ.15ರಂದು ಬೆಳಿಗ್ಗೆ 8 ರಿಂದ 10.30ರ ತನಕ ಅಶ್ವತ್ಥ ವೃಕ್ಷದ ಸಂಸ್ಕಾರಗಳು, ವಾಯಸೊಚ್ಚಿಷ್ಠ ಶಾಂತಿ, ಮಂಗಳಾರತಿ ನಡೆಯಲಿದೆ. ಸಂಜೆ 6ರಿಂದ ವಾಸ್ತು ಹೋಮ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತುಬಲಿ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
ಮಾ.16ರಂದು ಬೆಳಿಗ್ಗೆ 7.30ರಿಂದ ಅಶ್ವತ್ಥ ವೃಕ್ಷದ ಸಂಸ್ಕಾರಗಳು ನಡೆದು 10.15ರ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಅಶ್ವತ್ಥ ಪ್ರತಿಷ್ಠೆ, ಅನಂತರ ಉಪನಯನ, ವಿವಾಹಾದಿ ಸಂಸ್ಕಾರಗಳು ನಡೆಯಲಿದೆ. ಅಪರಾಹ್ನ 12ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.