ಪುತ್ತೂರಿನಲ್ಲಿ ಹೆಚ್ಚಿದ ಕಳವು, ದರೋಡೆ ಪ್ರಕರಣ : ಕಡಿವಾಣ ಹಾಕುವಂತೆ ಬಿಜೆಪಿ ನಿಯೋಗದಿಂದ ಪೊಲೀಸರಿಗೆ ಮನವಿ

0

ಪುತ್ತೂರು: ಇತ್ತೀಚಿನ ದಿನಗಳಲ್ಲಿ ಪುತ್ತೂರು ನಗರದಾದ್ಯಂತ ಬೈಕ್, ಕಾರ್, ಕಳವು ಪ್ರಕರಣಗಳು, ಹಾಡಹಗಲೇ ಮನೆಯಿಂದ ದರೋಡೆಯಂತಹ ಘಟನೆಗಳಿಂದ ನಾಗರೀಕರು ಭಯಭೀತರಾಗಿದ್ದಾರೆ. ತಕ್ಷಣ ಪೊಲಿಸರು ಎಚ್ಚೆತ್ತು ಪ್ರಕರಣಗಳ ಆರೋಪಿಗಳನ್ನು ಪತ್ತೆ ಮಾಡುವಂತೆ ಬಿಜೆಪಿ ನಿಯೋಗದಿಂದ ಪುತ್ತೂರು ನಗರ ಪೊಲೀಸ್ ಠಾಣೆಗೆ ಮನವಿ ಮಾಡಲಾಯಿತು.


ಪ್ರಮುಖ ಸ್ಥಳಗಳಲ್ಲಿ ನಾಕಾಬಂಧಿ ಮತ್ತು ರಾತ್ರಿ ಬೀಟ್ ವ್ಯವಸ್ಥೆಯನ್ನು ಹೆಚ್ಚಿಸಬೇಕೆಂದು ಆಗ್ರಹಿಸಲಾಯಿತು.


ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕೋಡಿಬೈಲು, ಅನಿಲ್ ಗೌಡ ತೆಂಕಿಲ, ಟೌನ್ ಬ್ಯಾಂಕ್ ನಿರ್ದೇಶಕ ರಾಜು ಶೆಟ್ಟಿ, ಪ್ರವೀಣ್ ಬಂಡಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here