ಪುತ್ತೂರು: ಆರ್ಯಾಪು ಗ್ರಾಮದ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮೇ.೧ ಹಾಗೂ ೨ರಂದು ನಡೆಯಲಿರುವ ದೇವರ ವರ್ಷಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯು ಮಾ.೧೪ರಂದು ದೇವಳದಲ್ಲಿ ಬಿಡುಗಡೆಗೊಂಡಿತು.
ದೇವಳದಲ್ಲಿ ಮಧ್ಯಾಹ್ನದ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಆಮಂತ್ರಣ ಪತ್ರಿಕೆಯು ಬಿಡುಗಡೆಗೊಂಡಿತು.
ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಬಲ ರೈ ವಳತ್ತಡ್ಕ, ಕುಂಜೂರು ದುರ್ಗಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗನ್ನಾಥ ರೈ, ಸದಸ್ಯರಾದ ರಾಧಾಕೃಷ್ಣ ಕಲ್ಲೂರಾಯ, ಅಭಿಲಾಷ್ ರೈ ಬಂಗಾರಡ್ಕ, ಅನುರಾಧ ಕಲ್ಲೂರಾಯ, ರಕ್ಷಾ ಬಿ. ಶೆಟ್ಟಿ., ಐತ್ತಪ್ಪ ನಾಯ್ಕ ದೇವಸ್ಯ, ದಾಮೋದರ ಗೌಡ ಗೆಣಸಿನಕುಮೇರು, ಅರ್ಚಕ ಸದಾನಂದ ರವಿ, ನಿಕಟಪೂರ್ವ ಅಧ್ಯಕ್ಷ ಪ್ರದೀಪಕೃಷ್ಣ ಬಂಗಾರಡ್ಕ, ಸದಸ್ಯರಾದ ನವೀನ್ ಕುಮಾರ್ ಜಿ.ಟಿ., ಚಂದಪ್ಪ ಪೂಜಾರಿ, ಉಮಾವತಿ, ಲೀಲಾವತಿ, ವಿಶ್ವನಾಥ ಕುಲಾಲ್, ಈಶ್ವರ ಎಂ.ಎಸ್., ಕುಂಜೂರುಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಸುವರ್ಣ, ಬಲ್ನಾಡು ಗ್ರಾ.ಪಂ ಸದಸ್ಯೆ ಇಂದಿರಾ ಎಸ್.ರೈ. ಸೇರಿದಂತೆ ನೂರಾರು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.