ಪುತ್ತೂರು:ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಮಾ.14 ರಂದು ಸಂಕ್ರಮಣ ತಂಬಿಲ ಸೇವೆ ನಡೆಯಿತು.
ಸಂಕ್ರಮಣ ತಂಬಿಲ ಸೇವೆಯ ಪ್ರಯುಕ್ತ ಬೆಳಿಗ್ಗೆ ದೇವರ ಪೂಜೆಯ ಬಳಿಕ ದೇವಸ್ಥಾನದ ರಕ್ತೇಶ್ವರಿ ಧೂಮಾವತಿ ದೈವಗಳಿಗೆ ಹಾಗೂ ಮಾಡಂತಾರು ಮೈಲ್(ಗೋಲೆಕ್ಸ್ ಫ್ಯಾಕ್ಟರಿ ಬಳಿ) ನಲ್ಲಿನ ಕಲ್ಕುಡ ಕಲ್ಲುರ್ಟಿ ಗುಳಿಗ ದೈವಗಳಿಗೆ ತಂಬಿಲ ಸೇವೆ ನಡೆಯಿತು.

ದೇವಸ್ಥಾನದ ಪ್ರಧಾನ ಅರ್ಚಕರಾದ ಯೋಗೀಶ್ ಕುಂಜತ್ತಾಯ, ಕೃಷ್ಣ ಭಟ್ ಹಾಗೂ ರಮೇಶ್ ಭಟ್ ರವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ, ಸದಸ್ಯರಾದ, ವಸಂತ ಕುಮಾರ್ ನಾಯ್ಕ, ಮಹೇಶ್ ಬಿ, ಲಲಿತಾ ಕೆ, ರೇಖಾ ಬಿ.ಎಸ್, ಸೂರಪ್ಪ ಗೌಡ, ಚಂದ್ರಶೇಖರ್ ಕಲ್ಲಗುಡ್ಡೆ, ರಕ್ಷಿತ್ ನಾಯ್ಕ್ ಹಾಗೂ ಡಾ.ಪಿ.ಕೆ.ಎಸ್ ಭಟ್, ಕೃಷ್ಣಮೋಹನ್, ಜನಾರ್ಧನ ರಾವ್ ಸಹಿತ ಹಲವರು ಉಪಸ್ಥಿತರಿದ್ದರು.