ಸವಣೂರು ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜಿನಲ್ಲಿ ಆರೋಗ್ಯಕರ ಜೀವನ ಶೈಲಿ ಕಾರ್ಯಕ್ರಮ

0

ಪುತ್ತೂರು: ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತವಿದ್ಯಾರಶ್ಮಿ ಪ್ರಥಮದರ್ಜೆಕಾಲೇಜಿನಲ್ಲಿ ಮಹಿಳಾ ದೌರ್ಜನ್ಯ ನಿಗ್ರಹ ಘಟಕದ ವತಿಯಿಂದ ಆರೋಗ್ಯಕರ ಜೀವನ ಶೈಲಿ ಎಂಬ ಮಾಹಿತಿ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಡಾ.ಅನನ್ಯಲಕ್ಷ್ಮೀ ಸಂದೀಪ್ ರವರು ಸಂದಭೋಚಿತವಾಗಿ ಮಾತನಾಡಿದರು.


ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ್.ಎಲ್.ಶೆಟ್ಟಿ ಕಾರ್ಯಕ್ರಮ ಉದ್ಘಾಟಸಿ, ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಡಾ.ರಾಜಲಕ್ಷ್ಮೀಎಸ್‌ ರೈ ಮಹಿಳಾ ದೌರ್ಜನ್ಯ ನಿಗ್ರಹಘಟಕದ ಸಂಘಟಕರಾದ ಶೇಷಗಿರಿ ಎಂ, ಪ್ರತಿಭಾಎಸ್. ಹಾಗೂ ಸಂಘಟಕರಾದ ಶಿವಪ್ರಸಾದ್ ಕೆ.ಆರ್ ಉಪಸ್ಥಿತರಿದ್ದರು. ಮಹಿಳಾ ದೌರ್ಜನ್ಯ ನಿಗ್ರಹಘಟಕದ ವಿದ್ಯಾರ್ಥಿ ಸಂಘಟಕರಾದ ಪಲ್ಲವಿ ಎಸ್‌ತೃತೀಯ ಬಿಕಾಂ ಸ್ವಾಗತಿಸಿ, ಕಲ್ಪನಾ ಪಿ ದ್ವಿತೀಯ ಬಿ.ಎ ವಂದಿಸಿದರು. ಪ್ರಥಮ ಬಿ.ಸಿ.ಎ ವಿದ್ಯಾರ್ಥಿನಿಯಾದ ಪವಿತ್ರಾ ಅತಿಥಿಗಳ ಪರಿಚಯವನ್ನು ಮಾಡಿದರು. ವಿದ್ಯಾರ್ಥಿನಿಯರಾದ ಅಭಿಜ್ಞಾ,ಪವಿತ್ರಾ, ತೇಜಸ್ವಿನಿ, ಯಶಿಕಾರವರ ಆಶಯಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ತೃತೀಯ ಬಿ.ಕಾಂ ವಿದ್ಯಾರ್ಥಿನಿ ಪ್ರೀತಿ ಕಾರ್ಯಕ್ರಮದ ನಿರೂಪಣೆಗೈದರು.

LEAVE A REPLY

Please enter your comment!
Please enter your name here