ಇಂದಿನ ಕಾರ್ಯಕ್ರಮ( 15/03/2025)

0

ಪುತ್ತೂರು ಮುಳಿಯ ಕೇಶವ ಭಟ್ & ಸನ್ಸ್ ಜ್ಯುವೆಲ್ಸ್‌ನಲ್ಲಿ ಡೈಮಂಡ್ ಫೆಸ್ಟ್
ಪುತ್ತೂರು ಮಂಗಳಾ ಸ್ಟೋರ್ ಜಂಕ್ಷನ್ ಬಳಿ ಬೆಳಿಗ್ಗೆ ೯.೩೦ರಿಂದ ಕಾರುಗಳ ಮೆಗಾ ಎಕ್ಸ್‌ಚೇಂಜ್ ಮೇಳ
ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ಅಮಳ ರಾಮಚಂದ್ರರವರು ಬೆಳಿಗ್ಗೆ ೧೦ಕ್ಕೆ ಅಧಿಕಾರ ಸ್ವೀಕಾರ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಬೆಳಿಗ್ಗೆ ಉತ್ಸವ, ಸಂಜೆ ೭ರಿಂದ ಉತ್ಸವ
ನೆಲ್ಯಾಡಿ ಗ್ರಾ.ಪಂ ಕಚೇರಿ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಮಹಿಳಾ ಗ್ರಾಮಸಭೆ, ವಿಶ್ವ ಮಹಿಳಾ ದಿನಾಚರಣೆ
ನರಿಮೊಗರು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ ೧೦ಕ್ಕೆ ನರಿಮೊಗರು ೧ನೇ ವಾರ್ಡ್, ಪಂಜಳ ಅಂಗನವಾಡಿಯಲ್ಲಿ ೧೧.೩೦ಕ್ಕೆ ನರಿಮೊಗರು ೨ನೇ ವಾರ್ಡ್, ಪರಮಾರ್ಗ ಅಂಗನವಾಡಿಯಲ್ಲಿ ಅಪರಾಹ್ನ ೨.೩೦ಕ್ಕೆ ನರಿಮೊಗರು ೩ನೇ ವಾರ್ಡ್, ಮುಕ್ವೆ ಅಂಗನವಾಡಿಯಲ್ಲಿ ೩.೩೦ಕ್ಕೆ ನರಿಮೊಗರು ೪, ೫ನೇ ವಾರ್ಡ್‌ನ ವಾರ್ಡುಸಭೆ
ಆರ್ಲಪದವು ಪಾಣಾಜೆ ಪೂಮಾಣಿ, ಕಿನ್ನಿಮಾಣಿ, ಪಿಲಿಭೂತ ದೈವಸ್ಥಾನದಲ್ಲಿ ಸಂಜೆ ೭.೩೦ರಿಂದ ಪಾಣಾಜೆ ಶಟಲ್ ಬ್ಯಾಡ್ಮಿಂಟನ್ ಟೀಮ್ ಪುಳಿತ್ತಡಿ ಆರ್ಲಪದವು ವತಿಯಿಂದ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್
ನೆಹರುನಗರ ಕಾರ್ಜಾಲು ಧೂಮಾವತಿ, ಕಲ್ಲುಡ, ಕಲ್ಲುರ್ಟಿ ದೈವಗಳ ಸನ್ನಿಧಿಯಲ್ಲಿ ಬೆಳಿಗ್ಗೆ ೯ಕ್ಕೆ ಗಣಹೋಮ, ಕಲಶ ಪ್ರತಿಷ್ಠೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ೮ರಿಂದ ಕುಣಿತ ಭಜನೆ, ೯.೩೦ರಿಂದ ಕಾರ್ಜಾಲು ಗುತ್ತಿನಿಂದ ಧೂಮಾವತಿ, ಕಲ್ಕುಡ, ಕಲ್ಲುರ್ಟಿ ದೈವಗಳ ಭಂಡಾರ ಹೊರಡುವುದು, ೧೦ಕ್ಕೆ ಗೋಂದಳ ಪೂಜೆ, ೧೧.೪೫ಕ್ಕೆ ಗ್ರಾಮದೈವ ಧೂಮಾವತಿ, ಕಲ್ಕುಡ, ಕಲ್ಲುರ್ಟಿ, ಇತರ ದೈವಗಳ ದೊಂಪದಬಲಿ ನೇಮೋತ್ಸವ
ಪೆರ್ಲಂಪಾಡಿ ಉದಯಗಿರಿಯಲ್ಲಿ ಬೆಳಿಗ್ಗೆ ೪ಕ್ಕೆ ಶ್ರೀ ವಿಷ್ಣುಮೂರ್ತಿ ಅಗ್ನಿಪ್ರವೇಶ, ೬ಕ್ಕೆ ಮಾರಿಕಲಕ್ಕೆ ಹೋಗುವುದು, ೭.೩೦ಕ್ಕೆ ಗುಳಿಗ ನೇಮ
ಕುದ್ಮಾರು ಗ್ರಾಮದ ಕೆಲಂಬೀರಿ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಬೆಳಿಗ್ಗೆ ಕೊಡಮಂತಾಯ ದೈವದ ನೇಮೋತ್ಸವ, ಶ್ರೀ ಕೊಡಮಣಿತ್ತಾಯ ದೈವಕ್ಕೆ ಬೆಳ್ಳಿಯ ಮೊಗ ಸಮರ್ಪಣೆ, ಸಹಾಯನಿಧಿ ಕೂಪನ್ ಡ್ರಾ, ಹರಕೆ, ಬಟ್ಟಲು ಕಾಣಿಕೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಭಜನೆ, ರಾತ್ರಿ ಬ್ರಹ್ಮ ಬೈದೆರುಗಳ ಗರಡಿ ಇಳಿಯುವುದು, ಸುಡುಮದ್ದು ಪ್ರದರ್ಶನ, ಮಾಣಿಬಾಲೆ ಗರಡಿ ಇಳಿಯುವುದು, ಬೈದೆರುಗಳ ಪಾತ್ರಿಗಳ ಸೇಠ್
ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಶ್ರೀ ಮಹಾಗಣಪತಿ ಹೋಮ, ಶ್ರೀ ಮಹಾಮೃತ್ಯುಂಜಯ ಹೋಮ, ಮಧ್ಯಾಹ್ನ ೧೨.೩೦ರಿಂದ ರಕ್ತೇಶ್ವರಿ, ಗುಳಿಗ ದೈವಗಳಿಗೆ ತಂಬಿಲ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ೮ರಿಂದ ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ಸುಡುಮದ್ದು ಪ್ರದರ್ಶನ, ವಸಂತಕಟ್ಟೆ ಪೂಜೆ
ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೮ರಿಂದ ಅಶ್ವತ್ಥ ವೃಕ್ಷದ ಸಂಸ್ಕಾರಗಳು, ವಾಯಸೊಚ್ಚಿಷ್ಠ ಶಾಂತಿ, ಸಂಜೆ ೬ರಿಂದ ವಾಸ್ತು ಹೋಮ, ರಾಕ್ಷೆಘ್ನ ಹೋಮ, ವಾಸ್ತು ಪೂಜೆ, ವಾಸ್ತುಬಲಿ
ಅರಿಯಡ್ಕ ಗ್ರಾಮದ ಜಾರತ್ತಾರು, ಪನೆಕ್ಕಳ ಶ್ರೀ ಮಹಾಮಾರಿಯಮ್ಮ ದೈವಸ್ಥಾನದಲ್ಲಿ sಸಂಜೆ ೩ರಿಂದ ಹೊರೆಕಾಣಿಕೆ ಉದ್ಘಾಟನೆ, ಸಂಜೆ ೫ರಿಂದ ತಂತ್ರಿವರ್ಯರಿಗೆ ಪೂರ್ಣಕುಂಭ ಸ್ವಾಗತ, ರಾತ್ರಿ ೭ರಿಂದ ರಾಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಸುದರ್ಶನ ಹೋಮ
ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಧಾಹ್ನ ೧೨ರಿಂದ ಮಹಾಪೂಜೆ, ನಿತ್ಯಬಲಿ, ರಾತ್ರಿ ೭ರಿಂದ ಮಹಾಪೂಜೆ, ಭೂತಬಲಿ
ಸಂಪ್ಯ ಆನಂದಾಶ್ರಮದಲ್ಲಿ ಸಂಜೆ ೩ರಿಂದ ಕರ್ನಾಟಕ ಗಮಕ ಕಲಾ ಪರಿಷತ್ತು ಪುತ್ತೂರು ತಾಲೂಕು ಘಟಕದ ವತಿಯಿಂದ ಗಮಕ ಕಾರ್ಯಕ್ರಮ
ಎರುಂಬು ಸಿಂಹಮೂಲೆ ಬೊಳ್ನಾಡು ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ ಬೆಳಿಗ್ಗೆ ಗಣಪತಿ ಹೋಮ, ತ್ರಿಕಾಲಪೂಜೆ, ಬ್ರಹ್ಮಕಲಶಪೂಜೆ, ಮಧ್ಯಾಹ್ನ ಅಂಕುರಪೂಜೆ, ದುರ್ಗಾಪೂಜೆ, ಸಂಜೆ ೭.೩೦ರಿಂದ ಭಕ್ತಿಗಾನ ಸುಧೆ, ರಾತ್ರಿ ದುರ್ಗಾಪೂಜೆ, ಅಧಿವಾಸ ಹೋಮ


ಉತ್ತರಕ್ರಿಯೆ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಚಿಪ್ಪಾರು-ಅಮ್ಮೇರಿ ದಿ. ಶೇಷಪ್ಪ ಪೂಜಾರಿಯವರ ಪತ್ನಿ ಮುತ್ತಮ್ಮ `ಕಾನನ ಶ್ರೀ’ ಕಾನ ನಿಡ್ಪಳ್ಳಿಯವರ ಉತ್ತರಕ್ರಿಯೆ

LEAVE A REPLY

Please enter your comment!
Please enter your name here