*ಈ ಅವಕಾಶ ಮಿನರ್ವ ಕಾಲೇಜು ಮಂಗಳೂರಿನ ಪುತ್ತೂರು ಶಾಖೆಯ ಪ್ರಗತಿ ಸ್ಟಡಿ ಸೆಂಟರ್ ನಲ್ಲೂ ಲಭ್ಯ – ಗೋಕುಲ್ ನಾಥ್ ಪಿ.ವಿ

ಮಂಗಳೂರು ಇನ್ ಸ್ಟಿಟ್ಯೂಟ್ ಆಫ್ ಫೈರ್ ಆಂಡ್ ಸೇಫ್ಟಿ ಎಂಜಿನಿಯರಿಂಗ್ (ಎಂಐಎಫ್ ಎಸ್ ಇ) ಮತ್ತು ಮಂಗಳೂರಿನ ಕೆಪಿಟಿ ಜಂಟಿ ಸಂಯೋಜನೆಯೊಂದಿಗೆ ನೂತನ ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿದೆ.
ಈ ವಿಶೇಷ ಶೈಕ್ಷಣಿಕ ಯೋಜನೆಯ ಪ್ರಕಾರ ಎಂಐಎಫ್ ಎಸ್ ಇ ಕಾಲೇಜಿನಲ್ಲಿ ನೀಡುತ್ತಿರುವ ಉದ್ಯೋಗ ಕ್ಷೇತ್ರದ ಡಿಪ್ಲೋಮ, ಪಿಜಿ ಡಿಪ್ಲೋಮ, ಅಡ್ವಾಸ್ಸ್ ಡಿಪ್ಲೋಮ, ಪದವಿ ಕೋರ್ಸುಗಳು ಮತ್ತು ಸ್ನಾತಕೋತ್ತರ ಪದವಿ ಕೋರ್ಸುಗಳ ವಿದ್ಯಾರ್ಥಿಗಳಿಗೆ ಕೆಪಿಟಿ ಮೂಲಕ ತಾಂತ್ರಿಕ ಮತ್ತು ಪ್ರಾಯೋಗಿಕ 1, 2, 3 ಹಾಗೂ 6 ತಿಂಗಳುಗಳ ತರಬೇತಿ ಮತ್ತು ಕೋರ್ಸಿನ ಪ್ರಮಾಣ ಪತ್ರವನ್ನು ನೀಡಲಾಗುವುದು. ಈ ಯೋಜನೆಯ ಕುರಿತು ಮಾತನಾಡಿದ ಕೆಪಿಟಿ ಕಾಲೇಜಿನ ಪ್ರಾಂಶುಪಾಲ ಹರೀಶ್ ಶೆಟ್ಟಿ, ತ್ವರಿತವಾಗಿ ಬೆಳೆಯುತ್ತಿರುವ ಭಾರತದಲ್ಲಿ ಫೈರ್ ಆಂಡ್ ಸೇಫ್ಟಿ ಕ್ಷೇತ್ರದ ಕೋರ್ಸುಗಳು, ಲಾಜಿಸ್ಟಿಕ್ ಮತ್ತು ಸೇಫ್ಟಿ ಚೈನ್ ಮ್ಯಾನೇಜ್ ಮೆಂಟ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಗಳಂತಹ ಶೈಕ್ಷಣಿಕ ಕ್ಷೇತ್ರಗಳ ಬೆಳವಣಿಗೆಗೆ ಒಂದು ಮುಖ್ಯ ಘಟಕವಾಗಿ ಮಾರ್ಪಟ್ಟಿದೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಎಂಐಎಫ್ ಎಸ್ ಇ ಕಾಲೇಜಿನ ಅಧ್ಯಕ್ಷ ವಿನೋದ್ ಜಾನ್, ಮಂಗಳೂರು ವಿ ವಿ, ಎನ್ ಎಸ್ ಡಿ ಸಿ ಸ್ಕಿಲ್ ಇಂಡಿಯಾ, ಎಸ್ ಟಿ ಇ ಡಿ ಕೌನ್ಸಿಲ್ ಮತ್ತು ಇತರ ವಿ ವಿ ಗಳ ಮಾನ್ಯತೆ ಪಡೆದ ಡಿಪ್ಲೋಮ, ಅಡ್ವಾಸ್ಸ್ ಡಿಪ್ಲೋಮ ಮತ್ತು ಪದವಿ ಕೋರ್ಸುಗಳ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ತರಬೇತಿ ಮತ್ತು ತಾಂತ್ರಿಕ ಕ್ಷೇತ್ರದ ಸರಕಾರಿ ಸಂಸ್ಥೆಯ ಪ್ರಮಾಣ ಪತ್ರ ಪಡೆಯುವ ಜೊತೆಗೆ ಇಂತಹ ವಿದ್ಯಾರ್ಥಿಗಳು ಉದ್ಯೋಗ ಮಾರುಕಟ್ಟೆಯಲ್ಲಿ ಪ್ರಪ್ರಥಮ ಸ್ಥಾನಕ್ಕೇರಲಿದ್ದಾರೆ. ಕಳೆದ 18 ವರ್ಷಗಳಲ್ಲಿ 21,೦೦೦ ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿಗೆ ದೇಶ-ವಿದೇಶಗಳಲ್ಲಿ ಉದ್ಯೋಗ ಒದಗಿಸಿರುವುದು ನಮ್ಮ ಹೆಮ್ಮೆ. ಈ ವರ್ಷ ಸಂಸ್ಥೆಯ ನೂತನ ಶಾಖೆಗಳನ್ನು ಪುತ್ತೂರಿನ ಪ್ರಗತಿ ಸ್ಟಡಿ ಸೆಂಟರ್ ಮತ್ತು ಬೆಳ್ತಂಗಡಿ ಸೇರಿದಂತೆ ಒಟ್ಟು 10 ಶಾಖೆಗಳನ್ನು ರಾಜ್ಯದ ವಿವಿಧೆಡೆ ನಡೆಸಲಾಗುತ್ತಿದೆ. 2025-26ನೇ ಸಾಲಿನ ಉದ್ಯೋಗ ಕ್ಷೇತ್ರದ ಶೈಕ್ಷಣಿಕ ಕೋರ್ಸುಗಳಿಗೆ ಪ್ರವೇಶ ಆರಂಭಗೊಂಡಿದ್ದು, ಆಸಕ್ತರು ಮಿನರ್ವ ಕಾಲೇಜಿನ ಶಾಖೆಗಳನ್ನು ಸಂಪರ್ಕಿಸಬಹುದು ಎಂದರು.
ಎಂಐಎಫ್ ಎಸ್ ಇ ಪ್ರಾಂಶುಪಾಲರಾದ ಯಶವಂತ್ ಗೋಪಾಲ್ ಶೆಟ್ಟಿ, ಉಪಪ್ರಾಂಶುಪಾಲೆ ಡಾ. ನಂದಿನಿ ಮತ್ತು ಕೆಪಿಟಿ ಯ ವಿವಿಧ ವಿಭಾಗಗಳ ಮುಖ್ಯಸ್ಥರು ಭಾಗವಹಿಸಿದರು. ಕೆಪಿಟಿ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಸತೀಶ್ ಸ್ವಾಗತಿಸಿದರು. ಎಂಐಎಫ್ ಎಸ್ ಇ ಎಂ.ಡಿ ಮನೋಜ್ ಪಿ.ವಿ ನಿರೂಪಿಸಿದರು.