ಅರಿಯಡ್ಕ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

0

ಅನುದಾನ ಬಿಡುಗಡೆಯಾದರೂ, ಇಂಜಿನಿಯರ್ ಗಳು ಸ್ಥಳ ಪರಿಶೀಲನೆ ಮಾಡದೇ ಕಾಮಗಾರಿಗಳು ವಿಳಂಬ

ಅರಿಯಡ್ಕ: 15 ನೇ ಹಣಕಾಸು ಯೋಜನೆಯಡಿ ಪಂಚಾಯತ್ ಕ್ರಿಯಾಯೋಜನೆ ಮಾಡಿ ಅನುಮೋದನೆ ಆದಮೇಲೆ ಸ್ಥಳ ಪರಿಶೀಲನೆ ಮಾಡಲು ಇಂಜಿನಿಯರ್ ಗಳು ಆಗಮಿಸುತ್ತಿಲ್ಲ ಈ ಕುರಿತು ಸೂಕ್ತ ನಿರ್ಣಯ ಕೈಗೊಳ್ಳುವಂತೆ ಅರಿಯಡ್ಕ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.

ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿಯವರ ಅಧ್ಯಕ್ಷತೆಯಲ್ಲಿ ಮಾ 15 ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಮೋನಪ್ಪ ಪೂಜಾರಿಯವರು , ಪಂಚಾಯತ್ ಕೆಲವೊಂದು ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿದರೂ ಅಂದಾಜು ಪಟ್ಟಿ ಮಾಡಿ ಸ್ಥಳ ಪರಿಶೀಲನೆ ಮಾಡಲು ಇಂಜಿನಿಯರ್ ಗಳು ವಿಳಂಬ ಮಾಡುವುದರಿಂದ ತೊಂದರೆ ಉಂಟಾಗುತ್ತಿದೆ ಎಂದರು . ಈ ವಿಚಾರವಾಗಿ ಸದಸ್ಯ ಲೋಕೇಶ್ ಚಾಕೋಟೆ ಮಾತಾಡಿ ,ಈ ಹಿಂದೆ ಈ ರೀತಿ ಸಮಸ್ಯೆಗಳು ಇರಲಿಲ್ಲ. ಈಗೀಗ ಇಂತಹ ಸಮಸ್ಯೆ ಗಳು ಆಗುತ್ತಿವೆ. ಕಾಮಗಾರಿಗಳು ಅತಿ ಶೀಘ್ರವಾಗಿ ನಡೆಯುವಂತೆ ಕ್ರಮ ಕೈಗೊಳ್ಳಿ ಎಂದರು.

ಪರವಾನಿಗೆ ಇಲ್ಲದೆ ವಿದ್ಯುತ್ ಸಂಪರ್ಕ: ಸಂತೋಷ್ ಮಣಿಯಾಣಿ
ಕಾವಿನಲ್ಲಿ ನೂತನ ರಿಕ್ಷಾ ತಂಗು ದಾಣ ರಚನೆಯಾಗಿದ್ದು ಸಂತೋಷದ ವಿಚಾರ . ಆದರೆ ತಂಗುದಾಣ ಪಂಚಾಯತಿಗೆ ಹಸ್ತಾಂತರವಾಗದೆ, ದಾರಿದೀಪ ಲೈನ್ ನಿಂದ ಅಕ್ರಮವಾಗಿ ವಿದ್ಯುತ್ ಅಳವಡಿಸಿರುವುದು ಸರಿಯಲ್ಲ .ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳು ನಮ್ಮಲ್ಲಿ ವಿಚಾರಿಸುತ್ತಿದ್ದಾರೆ. ಇಂತಹ ಘಟನೆಗಳು ಮರುಕಳಿಸಬಾರದು ಎಂದರು. ಸದಸ್ಯ ಹರೀಶ್ ರೈ ಜಾರತ್ತಾರು ಮಾತಾಡಿ, ಪಂಚಾಯತ್ ಗಮನಕ್ಕೆ ತರದೇ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು ತಪ್ಪು. ಈ ಬಗ್ಗೆ ಗುತ್ತಿಗೆದಾರರು ಪಂಚಾಯತಿಗೆ ಮಾಹಿತಿ ನೀಡಬೇಕಿತ್ತು ಎಂದರು. ಸದಸ್ಯ ಅಬ್ದುಲ್ ರಹಿಮಾನ್ ರವರು ಮಾತಾಡಿ , ರಿಕ್ಷಾ ತಂಗುದಾಣಕ್ಕೆ ವಿದ್ಯುತ್ ಅವಶ್ಯಕತೆ ಇದೆ. ಆದರೆ ಪಂಚಾಯತ್ ಗಮನಕ್ಕೆ ತರಬೇಕಿತ್ತು ಎಂದರು. ಪಿಡಿಓ ಸುನಿಲ್ ಎಚ್ ಟಿ ಮಾತಾಡಿ, ಪಂಚಾಯತ್ ವ್ಯಾಪ್ತಿಯ ಎಲ್ಲಾ ತಂಗುದಾಣಗಳಿಗೂ ವಿದ್ಯುತ್ ಸಂಪರ್ಕ ಅಳವಡಿಸಿದರೆ ಉತ್ತಮ .ಆದರೆ ಈ ಕಾರ್ಯಗಳು ಕಾನೂನು ಬದ್ಧವಾಗಿ ಇರಬೇಕೆಂದರು.

ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಇಂದ ರಸ್ತೆಗಳು ಹಾಳಾಗಿವೆ-ಸದಾನಂದ ಮಣಿಯಾಣಿ
ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಒಳ್ಳೆಯ ಯೋಜನೆಯಾಗಿದೆ ಆದರೆ ರಸ್ತೆಗಳು ಇದರಿಂದ ಹದಗೆಟ್ಟಿವೆ. ರಸ್ತೆಯ ಚರಂಡಿಯಲ್ಲಿಯೇ ಪೈಪ್ ಲೈನ್ ಅಳವಡಿಸಿ ಮುಚ್ಚಿದ್ದಾರೆ. ಈಗ ಚರಂಡಿ ವ್ಯವಸ್ಥೆ ಇಲ್ಲದಂತಾಗಿದೆ .ಮಳೆಗಾಲ ಬಂದಾಗ ರಸ್ತೆಯಲ್ಲಿಯೇ ನೀರು ಹರಿಯುವ ಸಾಧ್ಯತೆ ಇದೆ. ಆಗ ವಾಹನ ಸವಾರರ ಕಷ್ಟ ಊಹಿಸಲು ಅಸಾಧ್ಯ .ಈ ಕುರಿತು ಜಿಲ್ಲಾ ಪಂಚಾಯತಿ ಇಂಜಿನಿಯರಿಗೆ ಪತ್ರ ಬರೆಯಬೇಕೆಂದು ಸದಸ್ಯ ಸದಾನಂದಮಣಿಯರು ಒತ್ತಾಯಿಸಿದರು .ಈ ಬಗ್ಗೆ ನಿರ್ಣಯ ಕೈಗೊಳ್ಳುವಂತೆ ಸದಸ್ಯ ರಾಜೇಶ್ ಮಣಿಯಾಣಿ ಆಗ್ರಹಿಸಿದರು.

ಪಂಚಾಯತ್ ಜಾಗಕ್ಕೆ ಬೇಲಿ ರಚನೆಯಾಗಲಿ-ಲೋಕೇಶ್ ಚಾಕೋಟೆ
ಮಾಡ್ನೂರು ಸಮುದಾಯ ಭವನಕ್ಕೆ 11 ಸೆನ್ಸ್ ಜಾಗ ಮಂಜೂರಾಗಿದ್ದು ,ಅದರ ಸುತ್ತ ಬೇಲಿ ಹಾಕಿ ಪಂಚಾಯತ್ ಸ್ವತ್ತನ್ನು ಸಂರಕ್ಷಿಸಬೇಕೆಂದು ಸದಸ್ಯ ಲೋಕೇಶ್ ಚಾಕೋಟೆ ಹೇಳಿದರು ಈ ಕುರಿತು ಸಭೆ ಯಲ್ಲಿ ನಿರ್ಣಯಿಸಲಾಯಿತು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮೀನಾಕ್ಷಿ ಪಾಪೆಮಜಲು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿಲ್ ಎಚ್ ಟಿ ಉಪಸ್ಥಿತರಿದ್ದರು. ಸದಸ್ಯರಾದ ಲೋಕೇಶ್ ಚಾಕೋಟೆ, ಮೋನಪ್ಪ ಪೂಜಾರಿ ಕೆರೆಮಾರು, ಹರೀಶ್ ರೈ ಜಾರತ್ತಾರು, ದಿವ್ಯನಾಥ ಶೆಟ್ಟಿ ಕಾವು, ರಾಜೇಶ್ ಮಣಿಯಾಣಿ ತ್ಯಾಗರಾಜೆ, ಅಬ್ದುಲ್ ರಹಿಮಾನ್ ಕಾವು,ನಾರಾಯಣ ನಾಯ್ಕ ಚಾಕೋಟೆ, ಸದಾನಂದ ಮಣಿಯಾಣಿ ಕುರಿಂಜ ಮೂಲೆ, ವಿನಯಕುಮಾರ್ ಕಾವು, ಪ್ರವೀಣ್ ಎಬಿ ಅಮ್ಚಿನಡ್ಕ,ವಿಜೀತ್ ಕೆರೆ ಮಾರು,ಸೌಮ್ಯ ಬಾಲಸುಬ್ರಹ್ಮಣ್ಯ, ಭಾರತಿ ವಸಂತ್ ಕೌಡಿಚ್ಚಾರು, ರೇಣುಕಾ ಸತೀಶ್ ಕರ್ಕೇರ, ಅನಿತಾ ಆಚಾರಿ ಮೂಲೆ, ಪುಷ್ಪಲತಾ ಮರತ್ತಮೂಲೆ, ಸಾವಿತ್ರಿ ಪೊನ್ನೆತ್ತಳ್ಕ ಮತ್ತಿತರರು ಕಲಾಪದಲ್ಲಿ ಪಾಲ್ಗೊಂಡರು. ಪಂಚಾಯತ್ ಕಾರ್ಯದರ್ಶಿ ಶಿವರಾಮ ಮೂಲ್ಯ ಇಲಾಕ ಮಾಹಿತಿ ವಾಚಿಸಿ ಸ್ವಾಗತಿಸಿದರು, ಸಿಬ್ಬಂದಿ ಪ್ರಭಾಕರ ವಂದಿಸಿದರು.

ಅರಿಯಡ್ಕ ಗ್ರಾಮ ಪಂಚಾಯತ್ ಅತ್ಯಂತ ದೊಡ್ಡ ಪಂಚಾಯತ್ ಆಗಿದ್ದು ,ಎರಡು ಗ್ರಾಮಗಳನ್ನು ಒಳಗೊಂಡಿದೆ. ಆದರೆ ಇಲ್ಲಿಗೆ ಖಾಯಂ ಪಿ.ಡಿ.ಓ ಇರುವುದಿಲ್ಲ. ಅದೇ ರೀತಿ ಗ್ರಾಮಕ್ಕೆ ಖಾಯಂ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ, ಸಮುದಾಯ ಆರೋಗ್ಯಧಿಕಾರಿ, ಮತ್ತು ಗ್ರಾಮಲೆಕ್ಕಿಗ ಇರುವುದಿಲ್ಲ ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗಿದೆ.
ಸಂತೋಷ್ ಮಣಿಯಾಣಿ ಕುತ್ಯಾಡಿ, ಅಧ್ಯಕ್ಷರು ಗ್ರಾ.ಪಂ ಅರಿಯಡ್ಕ

LEAVE A REPLY

Please enter your comment!
Please enter your name here