ಪುತ್ತೂರು: ಕೊಳ್ತಿಗೆ ಗ್ರಾಮದ ಮೊಗಪ್ಪೆ ಸಿ.ಆರ್.ಸಿ.ಯ ಹಿರಿಯ ಕಾಂಗ್ರೆಸ್ ಮುಖಂಡ ಪಿ.ಅರ್ಜುನನ್(87ವ)ರವರು ಮಾ.17 ರಂದು ನಿಧನರಾದರು.
ಮನೆಗೆ ಭೇಟಿ ನೀಡಿದ ಕೆಪಿಸಿಸಿ ಸಂಯೋಜಕ ಪ್ರದೀಪ್ ಕುಮಾರ್ ರೈ ಪಾಂಬಾರುರವರು ಮನೆಯವರಿಗೆ ಸಾಂತ್ವಾನ ಹೇಳಿದರು. ಇವರು ಪಕ್ಷಕ್ಕೆ ಸಲ್ಲಿಸಿದ ಸೇವೆಗಾಗಿ ಪಕ್ಷದ ವತಿಯಿಂದ ಪಾರ್ಥಿವ ಶರೀರದ ಮೇಲೆ ಕಾಂಗ್ರೆಸ್ ಪಕ್ಷದ ಧ್ವಜವನ್ನು ಹೊದಿಸಿ ಗೌರವ ಸಲ್ಲಿಸಲಾಯಿತು. ಮೃತರು ಪುತ್ರ ಕ್ಯಾಂಪ್ಕೋ ನಿವೃತ್ತ ಉದ್ಯೋಗಿ ಎ.ಗಣೇಶ್, ಪುತ್ರಿಯರಾದ ಸೀತಾ, ಇಂದ್ರಕುಮಾರಿ ಸೇರಿದಂತೆ ಅಪಾರ ಬಂಧು ಬಳಗ,ಕುಟುಂಬಸ್ಥರನ್ನು ಅಗಲಿದ್ದಾರೆ.
