ನಿಡ್ಪಳ್ಳಿ; ಕೆ.ಎಸ್.ಆರ್.ಟಿ.ಸಿ ಸಂಸ್ಥೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಬಸ್ ಚಾಲಕರ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪುತ್ತೂರು ವಿಭಾಗದ ಧರ್ಮಸ್ಥಳ, ಬಿ.ಸಿ.ರೋಡ್, ಪುತ್ತೂರು, ಸುಳ್ಯ, ಮಡಿಕೇರಿ ಘಟಕಗಳಲ್ಲಿ ಚಾಲಕರ ಹುದ್ದೆ ಖಾಲಿಯಿದೆ. ಆಸಕ್ತಿ ಇರುವ ಚಾಲಕರು ತಮ್ಮ ಮೂಲ ದಾಖಲೆಯೊಂದಿಗೆ ಪುತ್ತೂರು ಶಾಸಕರ ಕಚೇರಿಯನ್ನು ಸಂಪರ್ಕಿಸಿ ಮಾ.30 ರೊಳಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ನಂ. 8904707969, 8296915918 ಸಂಪರ್ಕಿಸ ಬಹುದೆಂದು ಶಾಸಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.