ಪುತ್ತೂರು: ಭಾರತೀಯ ಸೇನೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದ ಲಕ್ಷ್ಮೀಶ ಕೆ, ಕಡಮಜಲು ಇವರಿಗೆ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ವತಿಯಿಂದ ಹುಟ್ಟೂರ ಗೌರವಾರ್ಪಣೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಮಕ್ಕಳ ಕುಣಿತ ಭಜನಾ ತಂಡದ ಅಧ್ಯಕ್ಷರಾದ ಸತೀಶ್ ಎಂಡೆಸಾಗು, ಸಂಘಟನೆಯ ರಾಜ್ಯ ಪ್ರಶಸ್ತಿ ಪುರಸ್ಕೃತ ರಾಜೇಶ್ ಕೆ ಮಯೂರ, ಗುರುಪ್ರಸಾದ್ ಮಜ್ಜಾರ್, ಲೋಕೇಶ್ ಸ್ವಾಮಿನಗರ, ಅನಿಲ್ ಯಾದವ್ ಗೋಳ್ತಿಲ, ಸುಭಾಸ್ ಕೊಲ್ಲಾಜೆ, ಭುವನ್ ಮಜ್ಜಾರಡ್ಕ ಉಪಸ್ಥಿತರಿದ್ದರು.