ಉಪ್ಪಿನಂಗಡಿ: ಇಲ್ಲಿನ 34ನೇ ನೆಕ್ಕಿಲಾಡಿಯ ಶ್ರೀ ಗುರುರಾಘವೇಂದ್ರ ಮಠದಲ್ಲಿ ಶ್ರೀ ಗುರುರಾಘವೇಂದ್ರ ಸ್ವಾಮಿಗಳ 20ನೇ ಹಾಗೂ ಪುನಃ ಪ್ರತಿಷ್ಠೆಯಾಗಿ 1ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವವು ಬೆಂಗಳೂರಿನ ಮಂತ್ರಾಲಯ ಶಾಖಾ ಮಠಾಧೀಶರಾದ ಸುವಿಧ್ಯೇಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಮಾರ್ಚ್ 24ರ ಸೋಮವಾರದಂದು ನಡೆಯಿತು.
ಇಷ್ಠಾರ್ಥ ಸಿದ್ದಿ ಕ್ಷೇತ್ರವೆಂದೇ ಜನ ಮಾನ್ಯತೆ ಪಡೆದಿರುವ ಇಲ್ಲಿನ ಶ್ರೀ ಗುರು ರಾಯರ ಮಠದಲ್ಲಿ ವೇದಮೂರ್ತಿ ಚಿತ್ರಾಪುರ ಶ್ರೀ ಗೋಪಾಲಕೃಷ್ಣ ಆಚಾರ್ಯ ರವರ ಮಾರ್ಗದರ್ಶನದಲ್ಲಿ ವೇದಮೂರ್ತಿ ಚಿತ್ರಾಪುರ ಶ್ರೀನಿವಾಸ ಆಚಾರ್ಯರವರ ನೇತೃತ್ವದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವದ ವೈದಿಕ ವಿಧಿ ವಿಧಾನಗಳು ನೆರವೇರಿದ್ದು, ಮಧ್ಯಾಹ್ನ ಮಹಾಪೂಜೆಯ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆಯಲ್ಲಿ 650ಕ್ಕೂ ಹೆಚ್ಚಿನ ಭಕ್ತಾದಿಗಳು ಅನ್ನ ಪ್ರಸಾದವನ್ನು ಸ್ವೀಕರಿಸಿದರು. ರಾತ್ರಿ 7.30 ಕ್ಕೆ ಶ್ರೀ ಗುರು ರಾಯರಿಗೆ ರಂಗಪೂಜೆಯು ನಡೆಯಿತು.
ಈ ವೇಳೆ ಮಠದ ಅಧ್ಯಕ್ಷರಾದ ಕೆ ಉದಯ ಕುಮಾರ್ , ಕಾರ್ಯದರ್ಶಿ ಎನ್ ಗೋಪಾಲ ಹೆಗ್ಡೆ, ಕೆ ಹರೀಶ್ ಉಪಾಧ್ಯಾಯ, ಬಿ ಧನ್ಯಕುಮರ್ ರೈ, ಶಿವಪ್ರಸಾದ ಎಂ, ಎನ್ ಪ್ರಶಾಂತ್ ಪೈ, ಹರೀಶ್ ನಟ್ಟಿಬೈಲು, ಶಾಂತರಾಮ ಕಾಂಚನ, ಕೆ ಎನ್ ಸದಾನಂದ, ದಮಯಂತಿ ಆರ್ ಶೆಟ್ಟಿ , ಹಾಗೂ ಪ್ರಮುಖರಾದ ಮಹೇಶ್ ಬಜತ್ತೂರು, ಶಿಲ್ಪಾ ಆಚಾರ್ಯ, ಸ್ವರ್ಣೇಶ್ ಗಾಣಿಗ, ಪ್ರಶಾಂತ್ , ವಿನಯ್ ಕುಮಾರ್, ದೇವಿಪ್ರಸಾದ್ ಶೆಟ್ಟಿ , ಜಯಪ್ರಕಾಶ್ ಶೆಟ್ಟಿ, ಜಾನಕಿ ಎಸ್ ನಾಯ್ಕ್, ವೈಶಾಲಿ ಎಂ ಕುಂದರ್, ಕಾಮಾಕ್ಷಿ ಜಿ ಹೆಗ್ಡೆ, ಡಾ ಎಂ ಎನ್ ಭಟ್ , ಪ್ರವೀಣ್ ಕುಮಾರ್ ಗಾಣದಮೂಲೆ, ಡಾ. ಗೋವಿಂದಪ್ರಸಾದ್ ಕಜೆ, ಶರತ್ ಕೋಟೆ , ಪುಷ್ಪರಾಜ್ ಶೆಟ್ಟಿ, ಗೌತಮ್, ಶಿವಕುಮಾರ್ ಬಾರಿತ್ತಾಯ, ಶೈಲಜಾ , ಭವನೇಶ್ವರಿ ರೈ ಮೊದಲಾದವರು ಭಾಗವಹಿಸಿದ್ದರು.