





ಪುತ್ತೂರು: 2025ನೇ ಬಜೆಟ್ ನಲ್ಲಿ ಪುತ್ತೂರಿಗೆ ಮೆಡಿಕಲ್ ಕಾಲೇಜು ನಿರ್ಮಿಸಲು ಉದ್ಧೇಶಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಘೋಷಿಸಿದ್ದರು.


ಪುತ್ತೂರಿಗೆ ಮೆಡಿಕಲ್ ಕಾಲೇಜು ಆಗಲು ಪ್ರಯತ್ನಿಸಿದ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈರವರನ್ನು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಶಾಲು ಹೊದಿಸಿ ಅಭಿನಂದಿಸಿ ಸನ್ಮಾನಿಸಲಾಯಿತು. ಪುತ್ತೂರು ಅಭಿವೃದ್ಧಿ ಕೆಲಸದಲ್ಲಿ ಶಾಸಕರಿಗೆ ಸಂಪೂರ್ಣ ಸಹಕಾರ ವರ್ತಕರಿಂದ ಸದಾ ನೀಡಲಾಗುತ್ತದೆ ಹಾಗೂ ಮೆಡಿಕಲ್ ಕಾಲೇಜು ಕಾಮಗಾರಿಯನ್ನು ಶೀಘ್ರದಲ್ಲಿಯೇ ಪ್ರಾರಂಭಗೊಳ್ಳಲಿ ಎಂದು ಹಾರೈಸಿದರು.





ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರ ಸಂದರ್ಭದಲ್ಲಿ ಪುತ್ತೂರಿನ ಎಲ್ಲಾ ಸಂಘ ಸಂಸ್ಥೆಗಳನ್ನು ಒಟ್ಟುಗೂಡಿಸಿ ಪುತ್ತೂರು ಚರ್ಚ್ ನಲ್ಲಿ ಸಭೆ ನಡೆಸಿ, ಪುತ್ತೂರಿಗೆ ಮೆಡಿಕಲ್ ಕಾಲೇಜು ಆಗಬೇಕು ಎನ್ನುವ ಯೋಚನೆಯನ್ನು ಪ್ರ ಪ್ರಥಮವಾಗಿ ಪ್ರಸ್ತಾಪ ತಂದವರು. ಪುತ್ತೂರು ವರ್ತಕ ಸಂಘ ಆನಂತರ ಬಂದ ಸರ್ಕಾರಕ್ಕೂ ಕೂಡ ಹಲವು ಬಾರಿ ಮನವಿ ಮಾಡಿ ಒತ್ತಡ ಹಾಕಿದ್ದರು. ಆದರೆ ಬೇರೆ ಬೇರೆ ಕಾರಣಗಳಿಂದ ಇದು ಮೂಲೆಗೆ ಬಿದ್ದಿತ್ತು. ಶಾಸಕ ಅಶೋಕ್ ಕುಮಾರ್ ರೈ ಅವರು ಇದನ್ನು ಸವಾಲನ್ನಾಗಿ ಸ್ವೀಕರಿಸಿ ಮುತುವರ್ಜಿ ವಹಿಸಿ ಸರ್ಕಾರಕ್ಕೆ ಒತ್ತಡ ಹಾಕಿ ಪ್ರಸ್ತುತ ಮುಖ್ಯ ಮಂತ್ರಿಗಳಿಂದ ಘೋಷಣೆಯಾಗಿದ್ದು, ಪುತ್ತೂರಿನ ಜನರ ಕನಸನ್ನು ನನಸಾಗಿಸಿದೆ ಹಾಗೂ ಪುತ್ತೂರಿನ ವರ್ತಕರಿಗೆ ವ್ಯವಹಾರದಲ್ಲಿಯೂ ಅಭಿವೃದ್ದಿ ಆಗುವುದು ಎಂದು ಸಂಘದ ಅಧ್ಯಕ್ಷ ಪಿ ವಾಮನ್ ಪೈ ಅವರು ಹೇಳಿದರು. ಸಂಘದ ಪ್ರಧಾನ ಕಾರ್ಯದರ್ಶಿ ಟಿ.ವಿ ಮನೋಜ್, ಸದಸ್ಯರಾದ ಉಲ್ಲಾಸ್ ಪೈ, ಸುರೇಂದ್ರ ಕಿಣಿ, ಸೀತಾರಾಮ ಶಾಸ್ತ್ರಿ, ರವಿಕೃಷ್ಣ ಕಲ್ಲಾಜೆ, ರಮೇಶ್ ಪ್ರಭು, ನೌಶಾದ್ ಹಾಜಿ, ಲ್ಯಾನ್ಸಿ ಮಸ್ಕರೇನ್ಹಸ್, ಅಬೂಬಕ್ಕರ್ ಮುಲಾರ್, ಸಂತೋಷ್ ಶೆಟ್ಟಿ, ವಿಶ್ವ ಪ್ರಸಾದ್ ಸೇಡಿಯಾಪು ಉಪಸ್ಥಿತರಿದ್ದರು.






