ಪುತ್ತೂರು: ಪಾಣಾಜೆ ಗ್ರಾಮ ಪಂಚಾಯತ್ಗೆ ಕ್ಷಯ ಮುಕ್ತ ಗ್ರಾಮ ಪಂಚಾಯತ್-2024 ಪ್ರಶಸ್ತಿ ಲಭಿಸಿದೆ. ವಿಶ್ವ ಕ್ಷಯರೋಗ ದಿನದ ಪ್ರಯುಕ್ತ ದ.ಕ.ಜಿಲ್ಲಾಡಳಿತ, ದ.ಕ ಜಿಲ್ಲಾ ಪಂಚಾಯತ್ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಗಳ ಕಛೇರಿ, ನರ್ಸಿಂಗ್ ಫೌಂಡೇಶನ್ ಯೆನಪೊಯ ನರ್ಸಿಂಗ್ ಕಾಲೇಜು ದೇರಳಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ಯೆನಪೊಯ ಆಸ್ಪತ್ರೆಯಲ್ಲಿ ಮಾ.24ರಂದು ನಡೆದ ವಿಶ್ವ ಕ್ಷಯರೋಗ ದಿನ-2025 ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ಮತ್ತು ಗಾಂಧೀಜಿ ಕಂಚಿನ ಪ್ರತಿಮೆ ನೀಡಿ ಗೌರವಿಸಲಾಯಿತು. ಪಾಣಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾ ಗೌರವ ಸ್ವೀಕರಿಸಿದರು.