ಹತ್ತೂರ ಒಡೆಯನೂರಿನಲ್ಲಿ ಶುಭಾರಂಭಗೊಳ್ಳಲಿದೆ ‘ದಿ ಬೋಟ್ ಹೌಸ್’!

0

ಪುತ್ತೂರು: ಕುಟುಂಬ ಸದಸ್ಯರೊಂದಿಗೆ ಹೊರಗಡೆ ಸುತ್ತಾಡಲೆಂದು ಹೋದಾಗ, ಫ್ರೆಂಡ್ಸ್ ಜೊತೆ ಜಾಲಿಯಾಗಿ ತಿರುಗಾಟಕ್ಕೆ ಹೋದಾಗ, ಮನೆಯವರೊಂದಿಗೆ ಶಾಪಿಂಗ್ ಗೆಂದು ಬಂದಾಗ, ಮಕ್ಕಳ ಮನಸ್ಸನ್ನು ಫ್ರೆಶ್ ಮಾಡಲು.. ಹೀಗೆ ಎಲ್ಲಾ ವಯೋಮಾನದವರನ್ನೂ ಖುಷಿಪಡಿಸಲು, ಮನಸ್ಸನ್ನು ತಂಪಾಗಿಸಲು ನೆರವಾಗುವುದು ‘ಐಸ್ ಕ್ರೀಂ’! ಈ ಎರಡಕ್ಷರವನ್ನು ಕೇಳಿದಾಗ ಎಲ್ಲರ ಬಾಯಲ್ಲೂ ನೀರೂರುತ್ತದೆ. ಆದರೆ, ವಿವಿಧ ಫ್ಲೇವರ್ ಗಳ, ವೈವಿಧ್ಯಮಯ ಡಿಸೈನ್ ಗಳ, ವೆರೈಟಿ ಐಸ್ ಕ್ರೀಂ ಅಥವಾ ಡೆಸರ್ಟ್ ಗಳನ್ನು ಸವಿಯಲೇನೋ ಖುಷಿಯಾಗುತ್ತದೆಯಾದರೂ, ಅದಕ್ಕೆ ಬಳಸುವ ಕಲರ್, ಫ್ಲೇವರ್, ರುಚಿಯ ಅಂಶಗಳ ಬಗ್ಗೆ ನಾವು ಗಮನ ಕೊಡುವುದು ಅಷ್ಟೇ ಮುಖ್ಯವಾಗುತ್ತದೆ.

ಅದಕ್ಕೆಂದೇ ಇತ್ತೀಚಿನ ದಿನಗಳಲ್ಲಿ ನ್ಯಾಚುರಲ್ ಐಸ್ ಕ್ರೀಂಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರು ಈ ನ್ಯಾಚುರಲ್ ಐಸ್ ಕ್ರೀಂಗಳತ್ತ ಒಲವನ್ನು ತೋರಿಸುತ್ತಿದ್ದಾರೆ. ಹತ್ತೂರ ಒಡೆಯನೂರಿನಲ್ಲಿ ‘ನ್ಯಾಚುರಲ್’ಗೆ ಇನ್ನೊಂದು ಹೆಸರೇ ‘ಮರಿಕೆ’ ಎಂದಾಗಿದೆ. ಪುತ್ತೂರಿಗರಿಗೆ ಪ್ರಪ್ರಥಮ ಬಾರಿಗೆ ನ್ಯಾಚುರಲ್ ಐಸ್ ಕ್ರಿಂನ್ನು ಪರಿಚಯಿಸಿದ ಕೀರ್ತಿಯೂ ಮರಿಕೆ ಸಂಸ್ಥೆಗೆ ಸಲ್ಲುತ್ತದೆ.

ಇದೀಗ ಪುತ್ತೂರು ಸೇರಿದಂತೆ ಸುತ್ತಮುತ್ತಲಿನ ಡೆಸೆರ್ಟ್ ಪ್ರಿಯರನ್ನು ವಿವಿಧ ಫ್ಲೇವರ್ ಗಳ ವೈವಿಧ್ಯಮಯ ‘ತಂಪು ಕೆನೆ’ ಕಡಲಿನಲ್ಲಿ ತೇಲಿಸಲು ಬರುತ್ತಿದೆ ‘ಮರಿಕೆ ಐಸ್ ಕ್ರೀಂ’ನ ‘ಬೋಟ್ ಹೌಸ್’! ಹೌದು, ಇಲ್ಲಿನ ಎಪಿಎಂಸಿ ರಸ್ತೆಯಲ್ಲಿ ಸುಸಜ್ಜಿತವಾಗಿ ತಲೆ ಎತ್ತಿ ನಿಂತಿರುವ ತ್ರಿನೇತ್ರ ಕಾಂಪ್ಲೆಕ್ಸ್ ನಲ್ಲಿ ಮರಿಕೆ ಐಸ್ ಕ್ರೀಂ ನವರ ‘ದಿ ಬೋಟ್ ಹೌಸ್’ ಎಂಬ ಹೆಸರಿನಲ್ಲಿ ಕೆಫೆ ಮಾ.30 ಆದಿತ್ಯವಾರದಂದು ಶುಭಾರಂಭಗೊಳ್ಳುತ್ತಿದೆ.

ಹಿಂದು ಸಂಪ್ರದಾಯದ ಪ್ರಕಾರ ಹೊಸ ವರ್ಷವೆಂದು ಕರೆಯಿಸಿಕೊಳ್ಳುವ ಯುಗಾದಿಯ ಶುಭ ದಿನದಂದು ಹತ್ತೂರ ಒಡೆಯನ ನಾಡಿನಲ್ಲಿ ಈ ನೂತನ ನ್ಯಾಚುರಲ್ ಐಸ್ ಕ್ರೀಂ ಕೆಫೆ ಹೊಸ ಮನ್ವಂತರಕ್ಕೆ ನಾಂದಿ ಹಾಡಲಿದೆ. ಆದಿತ್ಯವಾರದಂದು ಬೆಳಿಗ್ಗೆ 10.30ಕ್ಕೆ ನಡೆಯುವ ‘ದಿ ಬೋಟ್ ಹೌಸ್’ನ ಉದ್ಘಾಟನಾ ಸಮಾರಂಭದಲ್ಲಿ, ದ್ವಾರಕಾ ಕಾರ್ಪೊರೇಷನ್ ಪ್ರೈ.ಲಿಮಿಟೆಡ್ ನ ವ್ಯವಸ್ಥಾಪನ ನಿರ್ದೇಶಕರಾಗಿರುವ ಗೋಪಾಲಕೃಷ್ಣ ಭಟ್ ಅವರು ದೀಪ ಪ್ರಜ್ವಲನೆ ನಡೆಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ತ್ರಿನೇತ್ರ ಸಂಕಿರ್ಣದ ಪಾಲುದಾರರು ಈ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿ ಹೊಂದಲಿದ್ದಾರೆ.


‘ದಿ ಬೋಟ್ ಹೌಸ್’ನಲ್ಲಿ ವಿವಿಧ ಫ್ಲೇವರ್ ಗಳ ನ್ಯಾಚುರಲ್ ಐಸ್ ಕ್ರೀಂಗಳು, ಮೊಮೊಸ್, ಸ್ಯಾಂಡ್ ವಿಚ್, ಜ್ಯೂಸ್ ಸೇರಿದಂತೆ ಇನ್ನು ಹಲವಾರು ರಿಫ್ರೆಶ್ಮೆಂಟ್ ಐಟಂಗಳು ನಿಮ್ಮ ಮನಸ್ಸನ್ನು ಇನ್ನಷ್ಟು ಆಹ್ಲಾದಕರಗೊಳಿಸಲಿವೆ. ಎಲ್ಲರೂ ಸಹಕಾರ ನೀಡುವಂತೆ ಕೃಷ್ಣಕುಮಾರ್ ಈಂದುಗುಳಿ, ಮಾನಸ ವೈ ಮತ್ತು ಸುಹಾಸ್ ಮರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿ ಬೋಟ್ ಹೌಸ್ ನ ವಿಶೇಷತೆಗಳೇನು..?
ಕೃತಕ ಬಣ್ಣಗಳು ಅಥವಾ ಪ್ರಿಸರ್ವೇಟಿವ್ ಗಳನ್ನು ಬಳಸದೇ ಇರುವುದು.
ಹೋಂ ಮೇಡ್ ಸಿರಪ್, ಸಾಸ್ ಮತ್ತು ಗೋಧಿಯಿಂದ ತಯಾರಿಸಿದ ಪಿಝ್ಝಾಗಳು.
ತಾಜಾ ಮತ್ತು ನೈಸರ್ಗಿಕ ಇನ್ ಗ್ರಿಡಿಯಂಟ್ಸ್ ಗಳ ಬಳಕೆ

  • ಏನೇನು ಸಿಗುತ್ತದೆ..?
  • ನ್ಯಾಚುರಲ್ ಐಸ್ ಕ್ರೀಂ ಗಳು ಮತ್ತು ಸಾಂಡೇಸ್
  • ತಾಜಾತನದಿಂದ ಕೂಡಿದ ಸ್ಟೀಂನಿಂದ ತಯಾರಿಸಿದ ಮೊಮೊಸ್
  • ಹೋಂ ಮೇಡ್ ಕೆಚಪ್ ಗಳಿಂದ ತಯಾರಿಸಿದ ಸ್ಯಾಂಡ್ ವಿಚ್ ಗಳು
  • ತಾಜಾ ಮಿಲ್ಕ್ ಶೇಕ್ ಗಳು ಮತ್ತು ಜ್ಯೂಸ್ ಗಳು

LEAVE A REPLY

Please enter your comment!
Please enter your name here